ನವದೆಹಲಿ, (ಫೆ.05): 2017ರ ಮಾರ್ಚ್​ 3ರಂದು ಹೊರಡಿಸಿರುವ ಅಧಿಸೂಚನೆಯಂತೆ ದೆಹಲಿಯ ವಿವಿಧ ಕೆಲಸದ ವರ್ಗಗಳಿಗೆ ಸುಪ್ರೀಂ ಕೋರ್ಟ್ ಕನಿಷ್ಠ ವೇತನವನ್ನು ನಿಗದಿಪಡಿಸಿದೆ.

6.83 ಲಕ್ಷ ಕ್ಕೂ ಅಧಿಕ ಹುದ್ದೆಗಳು ಖಾಲಿ: ಈ ಪೈಕಿ 1.34 ಲಕ್ಷಕ್ಕೂ ಹೆಚ್ಚು ನೇಮಕ

ಪದವೀಧರ ಉದ್ಯೋಗಿಗಳಿಗೆ ಪ್ರತಿ ತಿಂಗಳು ಕನಿಷ್ಟ 19, 572 ರೂ. ವೇತನ ಪಾವತಿಸುವಂತೆ ನವದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.

2017ರ ಮಾರ್ಚ್​ 3ರಂದು ಹೊರಡಿಸಿರುವ ಅಧಿಸೂಚನೆಯಂತೆ ಪದವೀಧರರಿಗೆ ಕನಿಷ್ಟ 19,572 ರೂ. ವೇತನ ನೀಡುವಂತೆ ಕೋರ್ಟ್ ಸೂಚಿಸಿದೆ. ಇದರ ಜತೆಗೆ ದೆಹಲಿಯ ವಿವಿಧ ಕೆಲಸದ ವರ್ಗಗಳಿಗೆ ಕನಿಷ್ಠ ವೇತನವನ್ನು ನಿಗದಿಪಡಿಸಿದೆ.

ರಾಜ್ಯ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಕರ್ನಾಟಕ ಸರ್ಕಾರ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯೋಗಿಗಳು ಹಾಗೂ ಕಾರ್ಖಾನೆಗಳ ಮಾಲೀಕರಿಂದ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ತುರ್ತು ಇಚಾರಣೆ ನಡೆಸುವಂತೆಯೂ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಅಧಿಸೂಚನೆಯ ಪ್ರಕಾರ, ಹಲವಾರು ವಿಭಾಗದ ಕಾರ್ಮಿಕರಿಗೆ ವೇತನವನ್ನು ನಿಗದಿಪಡಿಸಲಾಗಿದೆ. ಕಾರ್ಮಿಕರ ವೇತನವನ್ನು ಕೆಳಗೆ ಉಲ್ಲೇಖಿಸಲಾಗಿದೆ.

1. ಕೌಶಲ್ಯರಹಿತ ಕೆಲಸಗಾರ (Unskilled worker)-  ತಿಂಗಳಿಗೆ 14,842 ರೂ
2. ಅರೆ ನುರಿತ ಕೆಲಸಗಾರ (Semi skilled worker)- ತಿಂಗಳಿಗೆ 16,341 ರೂ
3. ನುರಿತ ಕೆಲಸಗಾರ (Skilled worker)-ತಿಂಗಳಿಗೆ 17,991 ರೂ.

ಗ್ರಾಮಲೆಕ್ಕಾಧಿಕಾರಿ ಹುದ್ದೆಗೆ ನೇರ ನೇಮಕಾತಿ: ಅರ್ಜಿ ಹಾಕಿ

ಅಧಿಸೂಚನೆಯಲ್ಲಿ ಗುಮಾಸ್ತರು ಮತ್ತು ಮೇಲ್ವಿಚಾರಕರಂತಹ ಸಿಬ್ಬಂದಿಗೆ ಕನಿಷ್ಠ ವೇತನವನ್ನು ಸಹ ಉಲ್ಲೇಖಿಸಲಾಗಿದೆ, ಅವರ ವೇತನವನ್ನು ಕೆಳಗೆ ಉಲ್ಲೇಖಿಸಲಾಗಿದೆ.

1. ಮೆಟ್ರಿಕ್ ಪೂರ್ಣಗೊಳಿಸದ ಸಿಬ್ಬಂದಿ (Non matriculation staff)- ತಿಂಗಳಿಗೆ 16,341 ರೂ
2. ಮೆಟ್ರಿಕ್  ಪೂರ್ಣಗೊಳಿಸಿದ ಸಿಬ್ಬಂದಿ (Matric but non-graduate staff) - ತಿಂಗಳಿಗೆ 17,991 ರೂ
3. ಪದವೀಧರ ಮತ್ತು ಮೇಲ್ಪಟ್ಟ ಸಿಬ್ಬಂದಿಗೆ (Graduate and above)-ತಿಂಗಳಿಗೆ 19,572 ರೂ