Asianet Suvarna News

ಅಂಗನವಾಡಿ ಕಾರ್ಯಕರ್ತರು, ಸಹಾಯಕಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

  •  ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ನೇಮಕಾತಿ
  • ಮಿನಿ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ
  • ಖಾಲಿ ಹುದ್ದೆಗಳಿಗೆ ಮಹಿಳೆಯರಿಂದ ಅರ್ಜಿ ಆಹ್ವಾನ
Recruitment For Anganwadi Teachers And Helpers in mysuru snr
Author
Bengaluru, First Published Jul 13, 2021, 12:27 PM IST
  • Facebook
  • Twitter
  • Whatsapp

 ಮೈಸೂರು (ಜು.13):  ಮೈಸೂರು ಗ್ರಾಮಾಂತರ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ, ಮಿನಿ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗೆ ಗೌರವಧನದ ಆಧಾರದ ಮೇಲೆ ಆಯ್ಕೆ ಮಾಡಲು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಾರ್ಯಕರ್ತೆ ಹುದ್ದೆಗೆ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸ್ಥಳೀಯರಾಗಿದ್ದು, ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. 18 ರಿಂದ 35 ವರ್ಷದ ವಯೋಮಿತಿಯೊಳಗಿರಬೇಕು. ತಾಲೂಕು ತಹಸೀಲ್ದಾರರಿಂದ ಪಡೆದ 3 ವರ್ಷದೊಳಗಿನ ಮೂಲ ವಾಸಸ್ಥಳದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

SBI ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ರದ್ದು: ಉದ್ಯೋಗಾಕಾಂಕ್ಷಿಗಳ ಕನಸು ನುಚ್ಚುನೂರು

ಅರ್ಜಿ ಕರೆದಿರುವ ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ಅಂಗನವಾಡಿಗಳು ಇದ್ದಾಗ ಅರ್ಜಿ ಕರೆದಿರುವ ಗ್ರಾಮದ ವಾರ್ಡ್‌ ಅಥವಾ ಸರ್ವೇ ವ್ಯಾಪ್ತಿಯಲ್ಲಿ ವಾಸವಿರುವ ಬಗ್ಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಂದ ದೃಢೀಕರಣದ ಪತ್ರವನ್ನು ಸಲ್ಲಿಸಬೇಕು. ಕನ್ನಡ ಓದುವ, ಬರೆಯುವ, ಸ್ಪಷ್ಟವಾಗಿ ಮಾತನಾಡುವ ಜ್ಞಾನವಿರಬೇಕು.

ಒಂದೇ ಕೇಂದ್ರಕ್ಕೆ ಒಂದಕ್ಕಿಂತ ಹೆಚ್ಚು ವಿಧವೆಯರು ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರು, ಆಸಿಡ್‌ ದಾಳಿಗೊಳಗಾದ ಮಹಿಳೆಯರು, ಬಾಲನ್ಯಾಯ ಕಾಯ್ದೆಯಡಿ ಇಲಾಖೆಯ ಸಂಸ್ಥೆಗಳಲ್ಲಿ ರಾಜ್ಯ, ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದ ಹಾಲಿ, ಮಾಜಿ ನಿವಾಸಿಗಳು ಮತ್ತು ಅಂಗವಿಕಲರು ಅರ್ಜಿ ಸಲ್ಲಿಸಿದ್ದಲ್ಲಿ ಪ್ರಥಮ ಆದ್ಯತೆಯನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ, 2ನೇ ಆದ್ಯತೆಯನ್ನು ಆಸಿಡ್‌ ದಾಳಿಗೊಳಗಾದವರಿಗೆ, 3ನೇ ಆದ್ಯತೆಯನ್ನು ಇಲಾಖೆ ಸಂಸ್ಥೆಗಳಲ್ಲಿರುವವರಿಗೆ, 4ನೇ ಆದ್ಯತೆಯನ್ನು ವಿಧವೆಯರಿಗೆ ಮತ್ತು 5ನೇ ಆದ್ಯತೆಯನ್ನು ಅಂಗವಿಕಲರಿಗೆ ನೀಡಲಾಗುತ್ತದೆ.

ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆ- ಸೆಟ್) ಹೊಸ ದಿನಾಂಕ ನಿಗದಿ ...

ದೈಹಿಕ ಅಂಗವೈಕಲ್ಯತೆ ಉಳ್ಳವರು ಶೇ. 60ಕ್ಕಿಂತ ಕಡಿಮೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.

ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸ್ಥಳೀಯರಾಗಿರಬೇಕು. 4ನೇ ತರಗತಿಯಿಂದ 9ನೇ ತರಗತಿ ವರೆಗಿನ ತೇರ್ಗಡೆಯನ್ನು ಪರಿಗಣಿಸಲಾಗುತ್ತದೆ. 9ನೇ ತರಗತಿ ತೇರ್ಗಡೆಯಾದವರಿಗೆ ಮೊದಲ ಆದ್ಯತೆ, 8ನೇ ತರಗತಿ ತೇರ್ಗಡೆಯಾದವರಿಗೆ ಎರಡನೇ ಆದ್ಯತೆಯಂತೆ ಪರಿಗಣಿಸಲಾಗುತ್ತದೆ. ಅಭ್ಯರ್ಥಿಯು 18 ರಿಂದ 35 ವರ್ಷದ ವಯೋಮಿತಿ ಒಳಗಿರಬೇಕು. ತಾಲೂಕು ತಹಸೀಲ್ದಾರರಿಂದ ಪಡೆದ ಮೂಲ ವಾಸಸ್ಥಳದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಅರ್ಜಿ ಕರೆದಿರುವ ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ಅಂಗನವಾಡಿಗಳು ಇದ್ದಾಗ ಅರ್ಜಿ ಕರೆದಿರುವ ಗ್ರಾಮದ ವಾರ್ಡ್‌ ಅಥವಾ ಸರ್ವೇ ವ್ಯಾಪ್ತಿಯಲ್ಲಿ ವಾಸವಿರುವ ಬಗ್ಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಂದ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಕನ್ನಡ ಓದುವ, ಬರೆಯುವ, ಸ್ಪಷ್ಟವಾಗಿ ಮಾತನಾಡುವ ಜ್ಞಾನವಿರಬೇಕು. ಒಂದೇ ಕೇಂದ್ರಕ್ಕೆ ಒಂದಕ್ಕಿಂತ ಹೆಚ್ಚು ವಿಧವರೆಯರು ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರು, ಆಸಿಡ್ದಾಳಿಗೊಳಗಾದ ಮಹಿಳೆಯರು, ಬಾಲನ್ಯಾಯ ಕಾಯ್ದೆಯಡಿ ಇಲಾಖೆಯ ಸಂಸ್ಥೆಗಳಲ್ಲಿ ರಾಜ್ಯ, ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದ ಹಾಲಿ/ಮಾಜಿ ನಿವಾಸಿಗಳು ಮತ್ತು ಅಂಗವಿಕಲರು ಅರ್ಜಿ ಸಲ್ಲಿಸಿದ್ದಲ್ಲಿ ಪ್ರಥಮ ಆದ್ಯತೆಯನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ, 2ನೇ ಆದ್ಯತೆಯನ್ನು ಆಸಿಡ್‌ ದಾಳಿಗೊಳಗಾದವರಿಗೆ, 3ನೇ ಆದ್ಯತೆಯನ್ನು ಇಲಾಖೆ ಸಂಸ್ಥೆಳಲ್ಲಿರುವವರಿಗೆ, 4ನೇ ಆದ್ಯತೆಯನ್ನು ವಿಧವೆಯರಿಗೆ ಮತ್ತು 5ನೇ ಆದ್ಯತೆಯನ್ನು ಅಂಗವಿಕಲರಿಗೆ ನೀಡಲಾಗುತ್ತದೆ.

ಆಸಕ್ತರು ಜನನ ಪ್ರಮಾಣ ಪತ್ರ, ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ, ಜಾತಿ ಮತ್ತು ಆದಾಯದ ಪ್ರಮಾಣ ಪತ್ರ, ವಿಧವೆಯರಾಗಿದ್ದರೆ ಪತಿಯ ಮರಣ ಪ್ರಮಾಣ ಪತ್ರ, ಅಂಗವಿಕಲರಾಗಿದ್ದರೆ ಅಂಗವಿಕಲತೆಯ ಪ್ರಮಾಣ ಪತ್ರ, ವಿಚ್ಛೇಧಿತರು ವಿಚ್ಛೇಧನ ಪ್ರಮಾಣ ಪತ್ರ, ಇಲಾಖೆಯ ಸುಧಾರಣಾ ಸಂಸ್ಥೆ, ರಾಜ್ಯ ಮಹಿಳಾ ನಿಲಯಗಳ ನಿವಾಸಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, ಯೋಜನಾ ನಿರಾಶ್ರಿತರ ಬಗ್ಗೆ ತಹಸೀಲ್ದಾರರಿಂದ ಪಡೆದ ಪ್ರಮಾಣ ಪತ್ರ.

ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರು ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ನಡೆಸಲ್ಪಟ್ಟಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ಮಾಜಿ ದೇವದಾಸಿಯರ ಮಕ್ಕಳು ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪ್ರಮಾಣ ಪತ್ರ ಮತ್ತು ಪರಿತ್ಯೆಕ್ತೆ ಯಾರು ಗ್ರಾಪಂನಿಂದ ಪಡೆದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಲಗ್ಗತಿಸಬೇಕು.

ಅರ್ಜಿ ಸಲ್ಲಿಸಲು ಆ. 9 ಕಡೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಇಲಾಖೆಯ https://anganwadirecruit.kar.nic.in/   ವೆಬ್‌ಸೈಟ್‌ ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

Follow Us:
Download App:
  • android
  • ios