ನವದೆಹಲಿ(ಸೆ. 21)  ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.  ಬಾರ್ಡರ್ ಸೆಕ್ಯೂರಿಟಿ ಫೋರ್ಸ್(ಬಿಎಸ್‌ಎಫ್‌), ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್(ಸಿಆರ್‌ಪಿಎಫ್‌) ನಲ್ಲಿ ನಿವೃತ್ತಿ, ಸಾವು,  ರಾಜೀನಾಮೆ ಸೇರಿದಂತೆ ವಿವಿಧ ಕಾರಣಕ್ಕೆ ತೆರವಾಗಿ ನಿಂತಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೇಂದ್ರ ಸಚಿವ ನಿತ್ಯಾನಂದ ರೈ   ಮಾಹಿತಿ ನೀಡಿದ್ದು ಬಿಎಸ್‌ಎಫ್‌ನಲ್ಲಿ  28,926 ಹುದ್ದೆ, ಸಿಆರ್‌ಪಿಎಫ್‌  26,506, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಪೋರ್ಸ್ ನಲ್ಲಿ 23,906 ಹುದ್ದೆಗಳು ಇವೆ. ಸಹಸ್ರ ಸೀಮಾ ದಳದಲ್ಲಿ 18,643, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ 5,784 ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ  7,328 ಹುದ್ದೆಗಳು ಖಾಲಿ ಇವೆ. 

ಪೊಲೀಸ್ ನೇಮಕಾತಿ ಮಹತ್ವದ ಸೂಚನೆ

ಕಾನ್‌ಸ್ಟೇಬಲ್ ಗ್ರೇಡ್ ನ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ.  ನೇರ ನೇಮಲಾತಿ ಮತ್ತು ಪ್ರಮೋಶನ್ . ಡೆಪ್ಯೂಟೆಶನ್ ಆಧಾರದಲ್ಲಿ ಹುದ್ದೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ರೈ ತಿಳಿಸಿದ್ದಾರೆ.

60,210 ಕಾನ್‌ಸ್ಟೇಬಲ್, 2,534  ಸಬ್ ಇನ್ಸ್ ಪೆಕ್ಟರ್ ಮತ್ತು  330 ಅಸಿಸ್ಟಂಟ್ ಕಮಾಂಡಂಟ್ ಪೋಸ್ಟ್ ಗಳಿಗೆ ನೇಮಕಾತಿ ಮಾಡಿಕೊಳ್ಳುವ ಕೆಲಸ ಚಾಲನೆಯಲ್ಲಿದೆ ಎಂದು ತಿಳಿಸಿದ್ದಾರೆ.