ನವದೆಹಲಿ(ನ.29): ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕೈತುಂಬ ವೇತನ ಸಿಗುವುದು ಹೌದಾದರೂ, ಏಕಾಏಕಿ ಕೆಲಸ ಕಳೆದುಕೊಳ್ಳುವ ಭೀತಿ ಇದ್ದೇ ಇರುತ್ತದೆ.

ದಿಡೀರನೇ ಕೆಲಸ ಕಳೆದುಕೊಳ್ಳುವ ಖಾಸಗಿ ಕಂಪನಿ ಉದ್ಯೋಗಿಗಳ ನೆರವಿಗೆ ಕೇಂದ್ರ ಕಾರ್ಮಿಕ ಇಲಾಖೆ ಧಾವಿಸಿದೆ. ಖಾಸಗಿ ಕಂಪನಿಯಲ್ಲಿ ನೋಂದಣಿಯಾಗಿರುವ ಹಾಗೂ ವಿಮೆ ಹೊಂದಿರುವ ಉದ್ಯೋಗಿಗಳು ದಿಢೀರನೇ ಕೆಲಸ ಕಳೆದುಕೊಂಡರೆ, 2 ವರ್ಷಗಳವರೆಗೆ ಆ ಉದ್ಯೋಗಿಗೆ ವೇತನ ನೀಡುತ್ತದೆ.

'40 ಸಾವಿರ ಐಟಿ ಉದ್ಯೋಗಿಗಳ ಭವಿಷ್ಯಕ್ಕೆ ಕತ್ತರಿ!'

ಕೇಂದ್ರ ಕಾರ್ಮಿಕ ಇಲಾಖೆಯಡಿ ಬರುವ ನೌಕರರ ರಾಜ್ಯ ವಿಮಾ ನಿಗಮ(ESIC), ಉದ್ಯೋಗ ಕಳೆದುಕೊಳ್ಳುವ ನೌಕರರಿಗೆ ಎರಡು ವರ್ಷಗಳವರೆಗೆ ವೇತನ ಪಾವತಿಸುತ್ತದೆ.

ಅಟಲ್ ಭಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆಯಡಿ ಕೆಲಸ ಕಳೆದುಕೊಳ್ಳುವ ಉದ್ಯೋಗಿಗೆ 24 ತಿಂಗಳುಗಳವರೆಗೆ ವೇತನ ಪಾವತಿಸುವುದು ಇದರ ಉದ್ದೇಶವಾಗಿದೆ.

ವಿಮೆ ಮಾಡಿದ ವ್ಯಕ್ತಿ ನಿರುದ್ಯೋಗಿಯಾದರೆ, ಹಿಂದಿನ ನಾಲ್ಕು ಅವಧಿಯ(ನಾಲ್ಕು ಅವಧಿಯ ಒಟ್ಟು ಗಳಿಕೆ)ಶೇ. 25ರಷ್ಟು ಪರಿಹಾರವನ್ನು ESIC ನೀಡುತ್ತದೆ. ಅಫಿಡವಿಟ್ ರೂಪದಲ್ಲಿ ಒಟ್ಟು 90 ದಿನಗಳ ನಿರುದ್ಯೋಗದ ಮಾಹಿತಿ ನೀಡಬೇಕು.

ಇನ್ಫೋಸಿಸ್ ನ 10000 ಸಿಬ್ಬಂದಿ ಕೆಲಸಕ್ಕೆ ಕತ್ತರಿ?

ಈ ಯೋಜನೆಯನ್ನು ಜುಲೈ 1, 2018 ರಿಂದ ಜಾರಿಗೆ ತರಲಾಗಿದ್ದು, ನಿರುದ್ಯೋಗ ಎದುರಿಸುವ ವ್ಯಕ್ತಿಗಳಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಉತ್ತಮ ಯೋಜನೆ ಜಾರಿಗೊಳಿಸಿದೆ.

ESIC ಮಾರ್ಗಸೂಚಿ ಪ್ರಕಾರ ವಿಮೆ ಮಾಡಿದ ವ್ಯಕ್ತಿ ನಿರುದ್ಯೋಗಿಯಾದಲ್ಲಿ ಅವನು/ಅವಳು ಕನಿಷ್ಠ ಎರಡು ವರ್ಷಗಳವರೆಗೆ ವಿಮೆ ಮಾಡಲಾಗದ ಉದ್ಯೋಗದಲ್ಲಿರಬೇಕು.