ಫ್ರಾನ್ಸ್[ಜೂ.14]: ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಮಗ/ಮಗಳು ಮನೆಗೆ ಬಂದ ಬಳಿಕವೂ ಫೋನ್, ಇ-ಮೇಲ್ ಎಂದು ಕೆಲಸದಲ್ಲೇ ಮುಳುಗಿರುತ್ತಾರೆ. ಮನೆಯಲ್ಲಿ ಎಲ್ಲರೊಂದಿಗೆ ಸಮಯ ಕಳೆಯಲು ಸಾಧ್ಯವಾಗದೇ ಪರದಾಡುತ್ತಾರೆ. ಕೆಲಸದ ಟೆನ್ಶನ್ ಅದೆಷ್ಟಿರುತ್ತದೆ ಎಂದರೆ ಮಾತನಾಡಿಸಲು ಬಂದವರ ಮೇಲೆ ರೇಗಾಡುತ್ತಾರೆ.   

ಕೆಲಸ ಎಷ್ಟು ಮಾಡಿದರೂ ಮುಗಿಯುವುದಿಲ್ಲ. ಕೆಲಸ ಮುಗಿಸಿ ಮನೆಗೆ ಬಂದು ಕೊಂಚ ರೆಸ್ಟ್ ತೆಗೆದುಕೊಳ್ಳುವ ಎನ್ನುವಾಗಲೇ ಅತ್ತ ಬಾಸ್ ಫೋನ್ ಮಾಡಿರುತ್ತಾರೆ ಅಥವಾ ಇ-ಮೇಲ್ ಕಳುಹಿಸಿರುತ್ತಾರೆ. ಮನೆಗೆ ಬಂದರೂ ಆಫೀಸ್ ಕೆಲಸ ಇದು ಬಹುತೇಕ ಎಲ್ಲಾ ಉದ್ಯೋಗಿಗಳ ಅಳಲು. ಆದರೀಗ ಫ್ರಾನ್ಸ್ ಸರ್ಕಾರ ಸಂಸ್ಥೆ ನಿಗದಿಪಡಿಸಿದ ಕೆಲಸದ ಸಮಯದ ಬಳಿಕ ತನ್ನ ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸುವುದು, ಕರೆ ಮಾಡುವುದು ಅಕ್ರಮವೆಂಬ ಕಾನೂನನ್ನು ಜಾರಿಗೊಳಿಸಲು ನಿರ್ಧರಿಸಿದೆ.

TCS ನೌಕರರಿಗೆ ಸಿಗುತ್ತೆ ಕೋಟಿ-ಕೋಟಿ ಸಂಬಳ

ಹೌದು 'ರೈಟ್ ಟು ಡಿಸ್ಕನೆಕ್ಟ್' ಎಂಬ ಕಾನೂನು ಜಾರಿಗೊಳಿಸಲು ನಿರ್ಧರಿಸಿದೆ. ಇದರ ಅನ್ವಯ ಫ್ರಾನ್ಸ್, 50 ಅಥವಾ ಅದಕ್ಕೂ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆ, ಕೆಲಸದ ಅವಧಿ ಮುಗಿಸಿ ತೆರಳಿದ ಉದ್ಯೋಗಿಗಳಿಗೆ ಇ-ಮೇಲ್, ಫೋನ್ ಅಥವಾ ಇನ್ನಾವುದೇ ರೀತಿ ಸಂಪರ್ಕಿಸಿ ತೊಂದರೆ ನೀಡುವುದು ಅಕ್ರಮ ಎನ್ನಲಾಗಿದೆ. 

ಈಗಾಗಲೇ ಸರ್ಕಾರ ತನ್ನ ದೇಶದ ಉದ್ಯೋಗಿಗಳಿಗೆ ವಾರ್ಷಿಕ 30 ದಿನ ರಜೆ ಘೋಷಿಸಿದೆ. ಆದರೀಗ 'ರೈಟ್ ಟು ಡಿಸ್ಕನೆಕ್ಟ್' ಎಂಬ ಕಾನೂನನ್ನು ಜಾರಿಗೊಳಿಸಲು ನಿರ್ಧರಿಸುವ ಮೂಲಕ ತಾವು ಉದ್ಯೋಗಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. 

ಇಂತಹ ನಿಯಮ ಜಾರಿಗೊಳಿಸುತ್ತಿರುವುದೇಕೆ?

ಫ್ರಾನ್ಸ್ ಸರ್ಕಾರ ಅಧ್ಯಯನವೊಂದನ್ನು ನಡೆಸಿದ್ದು, ಇದರಲ್ಲಿ ಅವಧಿಯ ಬಳಿಕವೂ ಉದ್ಯೋಗಿಗಳು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅವರಲ್ಲಿ, ತಮ್ಮ ಉದ್ಯೋಗದಲ್ಲಿ ಆಸಕ್ತಿ ಕಡಿಮೆಗೊಳಿಸುತ್ತದೆ. ಹಾಗೂ ಇದರಿಂದ ಒತ್ತಡಕ್ಕೊಳಗಾಗುತ್ತಾರೆ. ಇಷ್ಟೇ ಅಲ್ಲದೇ ಅವರು ತಮಗಾಗಿ ಸಮಯ ಮೀಸಲಿಡಲಾಗುತ್ತಿಲ್ಲ ಎಂಬ ಅಂಶ ಬಯಲಾಗಿದೆ. ಹೀಗಾಗಿ ಸರ್ಕಾರ ಈ ಕಾನೂನು ಜಾರಿಗೊಳಿಸಲು ನಿರ್ಧರಿಸಿದೆ.

ಇಂಟರ್ ವ್ಯೂ ಸಮಯದಲ್ಲಿ ಅವಾಯ್ಡ್ ಮಾಡಲೇಬೇಕಾದ ವಿಷಯಗಳು

ಈ ಕಾನೂನು ಜಾರಿಗೊಳ್ಳುವುದರಿಂದ ಫ್ರಾನ್ಸ್ ನ ಉದ್ಯೋಗಿಗಳು ತಮ್ಮ ಸಮಯವನ್ನು ಎಂಜಾಯ್ ಮಾಡಲು ಸಾಧ್ಯವಾಗುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ.