ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ: ಕೈಗಾರಿಕಾ ಸಚಿವ ನಿರಾಣಿ ಭರವಸೆ

* ಈಗಿರುವ ಕಾನೂನಿನ ಸರಳೀಕರಣ
* ಉದ್ಯಮಿದಾರರಿಗೆ ಅಗತ್ಯ ಮೂಲಭೂತ ಸೌಕರ್ಯ
* ಉದ್ಯಮಿದಾರರ ಮನೆ ಬಾಗಿಲಿಗೆ ಸರಕಾರ
* ಹೂಡಿಕೆದಾರರಿಗೆ ಮುಕ್ತ ಸ್ವಾಗತ 
* ಸಮತೋಲನದ ಮಂತ್ರಿ ಮಂಡಲ

first focus-on-job-creation Says Minister Murugesh Nirani rbj

ಬೀಳಗಿ( ಬಾಗಲಕೋಟೆ), (ಆ.07) : ಈಗಿರುವ ಕಾನೂನನ್ನು ಸರಳೀಕರಣಗೊಳಿಸಿ ವಿದ್ಯಾವಂತ ಯುವಕರು ಹಾಗೂ ಯುವತಿಯರಿಗೆ ಉದ್ಯೋಗ ನೀಡುವುದು ತಮ್ಮ ಮುಂದಿರುವ ಗುರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ನೂತನ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ.

ಸಚಿವರಾದ ನಂತರ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಬೀಳಗಿ ಶನಿವಾರ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿ ಭವಿಷ್ಯದ ಇಲಾಖೆಯಲ್ಲಿ ತೆಗೆದುಕೊಳ್ಳಬಹುದಾದ ಸುಧಾರಣಾ ಕ್ರಮಗಳನ್ನು ಬಹಿರಂಗಪಡಿಸಿದರು.

ಉದ್ಯೋಗ ಕಳೆದುಕೊಂಡ್ರಾ? ಮುಂದೆ ಲೈಫ್‌ ಹೇಗೆ ಅಂತೀರಾ? ಇದನ್ನೊಮ್ಮೆ ಓದಿ

ರಾಜ್ಯದಲ್ಲಿ ಸಾಕಷ್ಟು ವಿದ್ಯಾವಂತ ಯುವಕರು ಹಾಗೂ ಯುವತಿಯರು ಇದ್ದಾರೆ.‌ ಅವರಿಗೆ ಉದ್ಯೋಗ ಸಿಗದೆ ಇರುವ ಕಾರಣ ನಿರುದ್ಯೋಗಿಗಳಾಗಿದ್ದಾರೆ. ಹಾಲಿ ಇರುವ ಕಾನೂನನ್ನು ಸರಳೀಕರಣ ಮಾಡಿ ' ಉದ್ಯೋಗ ಸೃಷ್ಟಿ ' ಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.

ಈ ಹಿಂದೆ ನಾನು ಸತತ ಐದು ವರ್ಷಗಳ ಕಾಲ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ.ಇಲಾಖೆಯನ್ನು ' ಜನಸ್ನೇಹಿ' ಮಾಡುವ ಯೋಜನೆಯೂ ಇದೆ ಎಂದರು.

ಉದ್ಯಮೆದಾರರು ನಮ್ಮ ಬಳಿ ಬರುವ ಬದಲು ಸರಕಾರವೇ ಉದ್ಯಮೆದಾರರ ಮನೆ ಬಾಗಿಲಿಗೆ ಹೋಗಲಿದೆ. ಅವರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲು ನಾವು ಸಿದ್ದರಿದ್ದೇವೆ ಎಂದು ಭರವಸೆ ಕೊಟ್ಟರು.

ರಾಜ್ಯದಲ್ಲಿ ಯಾರೇ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದರೆ, ಸರಕಾರ ಮುಕ್ತ ಮನಸ್ಸಿನಿಂದ ಸ್ವಾಗತಿಸಲಿದೆ. ಕರ್ನಾಟಕವನ್ನು ಹೂಡಿಕೆಯಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಗುರಿಯು ಇದೆ ಎಂದು ಹೇಳಿದರು.

ಈ ಹಿಂದೆ ಗಣಿ ಮತ್ತು ಭೂವಿಜ್ಞಾನ ಸಚಿವನಾಗಿದ್ದ ವೇಳೆ ಇಲಾಖೆಯಲ್ಲಿ  ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೆ ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ  ಗಣಿ ಆದಾಲತ್,  ಸ್ಕೂಲ್ ಆಫ್ ಮೈನಿಂಗ್ಸ್, ಏಕಗವಾಕ್ಷಿ ಪದ್ದತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೇವೆ. ಉದ್ಯಮಿದಾರರ ಇಲಾಖೆ ಎಂದು ಕರೆಯಿತ್ತಿದ್ದ ಇಲಾಖೆಯನ್ನು ' ಜನಸ್ನೇಹಿ' ಮಾಡಲಾಗಿದೆ ಎಂದು ಸಚಿವ ನಿರಾಣಿ ಅವರು ಪ್ರಶಂಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯನ್ನು ಹಿಂದೆ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು.ಇ ಇಲಾಖೆಯನ್ನು ಹೇಗೆ ? ಜನಸ್ನೇಹಿ ಮಾಡಬಹುದು ಎಂಬುದನ್ನು ನಾವು ತೋರಿಸಿಕೊಟ್ಡಿದ್ದೇವೆ. ಸುಮಾರು ₹ 25000  ಕೋಟಿ ವಹಿವಾಟು ನಡೆಸುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯನ್ನು ಇನ್ನು ಮುಂದೆ ನನಗೆ ಕೊಡುವಂತೆ ಸಚಿವರೇ ಕೇಳುವಂತಹ ದಿನಗಳು ಬರಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

 ಸಮತೋಲನದ ಸಂಪುಟ 
ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರ ಸಂಪುಟವು ಸಮತೋಲನದಿಂದ ಕೂಡಿದ  ಸಂಪುಟವಾಗಿದೆ. ಪ್ರತಿಯೊಂದು ಸಮುದಾಯಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ನಾನು ಇಂತಹದ್ದೇ ಖಾತೆ ಕೊಡುವಂತೆ ಮುಖ್ಯಮಂತ್ರಿಗಳ ಬಳಿ ಯಾವುದೇ ಬೇಡಿಕೆಯನ್ನು ಇಟ್ಡಿರಲಿಲ್ಲ. ಯಾವ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸಲು ಸಿದ್ದಿನಿರುವುದಾಗಿ ಹೇಳಿದ್ದೆ ಎಂದು ಮಾಹಿತಿ ನೀಡಿದರು.

ನನ್ನ ಮತ್ತು ಮುಖ್ಯಮಂತ್ರಿಗಳ ಸ್ನೇಹ ಮೂವತ್ತು ವರ್ಷಗಳಷ್ಟು ಹಳೆಯದು. ಅದರಲ್ಲೂ ಕಳೆದ 20 ವರ್ಷಗಳಿಂದ ನಾನು ಅವರು ಜೊತೆಗೂಡಿ ಕೆಲಸ ಮಾಡಿದ್ದೇವೆ. ಈಗ ನನಗೆ ಇಂತಹ ಖಾತೆಯನ್ನು ಕೊಡುವಂತೆ ಕೇಳಿ ಸಣ್ಣ ಮನುಷ್ಯ ಆಗಲಾರೆ ಎಂದು ಸ್ಪಷ್ಟಪಡಿಸಿದ್ದೆ . ಈಗ ಕೊಟ್ಟಿರುವ ಇಲಾಖೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಗುರಿ ಹಾಕಿಕೊಳ್ಳುವೆ ಎಂದು ಹೇಳಿದರು.

ನನ್ನ ಮೇಲೆ ವಿಶ್ವಾಸವಿಟ್ಡು ಇಂತಹ ಮಹತ್ವದ ಜವಾಬ್ದಾರಿ ನೀಡಿದ ನಮ್ಮ ಪಕ್ಷದ ರಾಷ್ಟ್ರೀಯ ಹಾಗೂ ಪರಿವಾರದ ನಾಯಕರಿಗೆ ಅಭಿನಂದನೆಗಳು. ಇರುವಷ್ಟು ದಿನ ಸರ್ಕಾರ ಹಾಗೂ ಪಕ್ಷಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುತ್ತೇನೆ ಎಂದು ಸಚಿವ ನಿರಾಣಿ ಅವರು ಶಪಥ ಮಾಡಿದರು.

Latest Videos
Follow Us:
Download App:
  • android
  • ios