ಯಾದಗಿರಿ(ಜ.25): ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ವಿವಿಧ ಕಂಪನಿಗಳಿಂದ ಉದ್ಯೋಗವನ್ನು ಕಲ್ಪಿಸಲು ಒಂದು ದಿನದ ನೇರ ಸಂದರ್ಶನವನ್ನು ಜ.28ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

1) ವಾಯಾ ಫೀನ್‌ಸರ್ವ್ ಪ್ರೈ.ಲಿ.ನ 25 ಸಂಘಮಿತ್ರ ಫೀಲ್ಡ್ ಆಫೀಸರ್ ಖಾಲಿ ಹುದ್ದೆಗಳಿಗೆ 10ನೇ, ಪಿಯುಸಿ, ಯಾವುದೇ ಪದವಿ ಪೂರ್ಣಗೊಳಿಸಿರಬೇಕು. ಯಾದಗಿರಿ, ಕಲಬುರಗಿ ಕೆಲಸ ನಿರ್ವಹಿಸುವ ಸ್ಥಳಗಳಾಗಿದ್ದು, ಪುರುಷರಿಗೆ ಮಾತ್ರ ಅವಕಾಶ ಇರುತ್ತದೆ. 

BBMPಯಲ್ಲಿ ಖಾಲಿ ಬಿದ್ದಿವೆ ಶೇ.60 ಹುದ್ದೆ!

2) ಸ್ವತಂತ್ರ ಮೈಕ್ರೋಫಿನ್ ಪ್ರೈ.ಲಿ.ನ 40  ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಪಿಯುಸಿ ಪಾಸಾಗಿರಬೇಕು. ಬ್ರಾಂಚ್ ಆಪರೇಷನ್ ಮ್ಯಾನೇಜರ್ -5 ಹುದ್ದೆ, ಬ್ರಾಂಚ್ ಮ್ಯಾನೇಜರ್-5 ಹುದ್ದೆ, ಸ್ವತಂತ್ರ ರಿಸ್ಕ್ ಆಫೀಸರ್-5 ಹುದ್ದೆಗಳಿಗೆ ಯಾವುದೇ ಪದವಿ ಪಾಸಾಗಿರಬೇಕು. ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ವಿಜಯಪುರ ಕೆಲಸ ನಿರ್ವಹಿಸುವ ಸ್ಥಳಗಳಾಗಿವೆ. 

3) ಕಿಸಾನ್ ಕ್ರಾಫ್ಟ್ ಆಗ್ರೋ ಫರ್ಟಿಲೈಜರ್ ಪ್ರೈ.ಲಿ ಕಲಬುರಗಿ 25 ಫೀಲ್ಡ್ ಅಸಿಸ್ಟಂಟ್ ಹುದ್ದೆಗಳಿಗೆ ಡಿಪ್ಲೋಮಾ ಅಗ್ರಿಕಲ್ಚರ್ ಅಥವಾ ಯಾವುದೇ ಪದವಿ ಪಾಸಾಗಿರಬೇಕು. ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್ ಕೆಲಸ ನಿರ್ವಹಿಸುವ ಸ್ಥಳಗಳಾಗಿವೆ. 

4) ಭಾರತ್ ಫೈನಾನ್ಸಿಯಲ್ ಇನ್‌ಕ್ಲೂಷನ್ ಲಿ.ನ 50 ಫೀಲ್ಡ್ ಅಸಿಸ್ಟಂಟ್ ಹುದ್ದೆಗಳಿಗೆ 10ನೇ, 12ನೇ, ಯಾವುದೇ ಪದವಿ ವಿದ್ಯಾರ್ಹತೆ ಇರಬೇಕು. ಪುರುಷರು ಮಾತ್ರ. ಯಾದಗಿರಿ, ರಾಯಚೂರು, ಬಳ್ಳಾರಿ ಕೆಲಸ ನಿರ್ವಹಿಸುವ ಸ್ಥಳಗಳಾಗಿವೆ. 

ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ವ್ಯಕ್ತಿ ಪರಿಚಯ (ರೆಸ್ಯುಮ್/ಬಯೋಡಾಟಾ) ಪತ್ರದ ಪ್ರತಿಗಳನ್ನು ಹಾಗೂ ವಿದ್ಯಾರ್ಹತೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರದ ಪ್ರತಿಗಳು ಹಾಗೂ 2 ಭಾವಚಿತ್ರ, ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. 

ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ   ಮೊ: 08473-253718, 9448250868 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.