ನವದೆಹಲಿ, (ಆ.01) : ಪದೆಹಲಿ ಪೊಲೀಸ್ ಇಲಾಖೆಯಲ್ಲಿ 5848 ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,ಸೆಪ್ಟೆಂಬರ್ 7 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ದೆಹಲಿ ಪೊಲೀಸ್​ ಸಂಸ್ಥೆಯಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಾನ್​ಸ್ಟೆಬಲ್ ಹುದ್ದೆ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಆನ್​ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. 

ಮತ್ತಷ್ಟು ಜಾಬ್ಸ್ ಸದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು 10+2 (ಪಿಯುಸಿ) ಶಿಕ್ಷಣ ಪೂರೈಸಿರಬೇಕು. 
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಟ 25 ವರ್ಷ ಪೂರೈಸಿರಬೇಕು.
ವೇತನ ಶ್ರೇಣಿ: 21,700/- ರಿಂದ 69,100/- ರೂ. ತಿಂಗಳಿಗೆ

ಕಂಪ್ಯೂಟರ್ ಆಧಾರಿತ ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿದ್ದು, . Physical Endurance and Measurement Test (PE&MT) ಪರೀಕ್ಷೆ ಇರುತ್ತದೆ. 

 ಅರ್ಹ ಅಭ್ಯರ್ಥಿಗಳು https://ssc.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ https://bit.ly/2Pd3uPB ವೆಬ್ ಸೈಟ್ ನೋಡಬಹುದು.