ಬೆಂಗಳೂರು(ಡಿ.29): ಬಿಬಿಎಂಪಿಯಲ್ಲಿ ಖಾಲಿ ಇರುವ ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳಿಗೆ ಅರ್ಹ ಲೆಕ್ಕಾಧೀಕ್ಷಕರಿಗೆ ಮುಂಬಡ್ತಿ ನೀಡಲು ತೀರ್ಮಾನಿಸಲಾಗಿದ್ದು, ಅರ್ಜಿಗಳನ್ನು ಆಹ್ವಾನಿಸಿದೆ.

ಬಟವಾಡೆ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೆಕ್ಕಪರಿಶೋಧನಾಧಿಕಾರಿ ಹುದ್ದೆಗೆ ಅರ್ಹರಿದ್ದಲ್ಲಿ ಅಂತಹ ಲೆಕ್ಕಾಧೀಕ್ಷಕರ ಸೇವಾ ಪುಸಕ್ತ, ವಿದ್ಯಾರ್ಹತೆ ಪ್ರಮಾಣಪತ್ರ, ಇಲಾಖೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರಮಾಣಪತ್ರಗಳು, 2017-18 ರಿಂದ 2019-20ವರೆಗೆ ಮೂರು ವರ್ಷ ಕಾರ್ಯ ನಿರ್ವಾಹಣಾ ವರದಿ ಸಲ್ಲಿಸುವುದು.

ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದು ಒಂದೆರಡು ಲಕ್ಷವಲ್ಲ, ಭರ್ತಿ 98 ಲಕ್ಷ

ಜತೆಗೆ ಮುಂಬಡ್ತಿ ಇಚ್ಛೆ ಇರುವ ಅಥವಾ ಇಲ್ಲದಿರುವ ಬಗ್ಗೆ ಪತ್ರ ಮತ್ತು ನಿಗದಿತ ನಮೂನೆ ಭರ್ತಿ ಮಾಡಿ ದೃಢೀಕರಣದೊಂದಿಗೆ ಏಳು ದಿನದಲ್ಲಿ ಸಲ್ಲಿಕೆ ಮಾಡುವಂತೆ ಸೂಚಿಸಲಾಗಿದೆ.

ಅರ್ಜಿಗಳು ಸಲ್ಲಿಕೆಯಾದ ಬಳಿಕ ಎಷ್ಟುಲೆಕ್ಕಾಧೀಕ್ಷಕರು ಮುಂಬಡ್ತಿಗೆ ಅರ್ಹರಿದ್ದಾರೆ ಎಂಬುದನ್ನು ಪಟ್ಟಿಮಾಡಲಾಗುವುದು. ನಂತರ ಮುಂಬಡ್ತಿ ಸಮಿತಿಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಲಿಂಗಮೂರ್ತಿ ಮಾಹಿತಿ ನೀಡಿದ್ದಾರೆ.