Asianet Suvarna News Asianet Suvarna News

ಜೀವನ ಸಹಜ ಸ್ಥಿತಿಗೆ ಬರಲಿ, ಆಮೇಲೆ ಐಪಿಎಲ್‌ ಎಂದ ಹಿಟ್‌ಮ್ಯಾನ್

ಮೊದಲು ದೇಶ, ಆಮೇಲೆ ಐಪಿಎಲ್ ಎನ್ನುವ ಸ್ಪಷ್ಟ ಸಂದೇಶವನ್ನು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ರವಾನಿಸಿದ್ದಾರೆ. ಪೀಟರ್‌ಸನ್ ಕೇಳಿದ ಪ್ರಶ್ನೆಗೆ ರೋಹಿತ್ ಎಲ್ಲವೂ ಸಹಜ ಸ್ಥಿತಿಗೆ ಬಂದರಷ್ಟೇ ಐಪಿಎಲ್ ಎಂದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

Mumbai Indians Captain Rohit Sharma hopeful of IPL 2020 going ahead when   things settle down
Author
Mumbai, First Published Mar 28, 2020, 7:58 AM IST

ಮುಂಬೈ(ಮಾ.28): ಐಪಿಎಲ್‌ 13 ನೇ ಆವೃತ್ತಿಯ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದ್ದು, ಟೂರ್ನಿ ರದ್ದಾಗಬಹುದು ಎನ್ನುವ ಸುದ್ದಿಯೂ ಇದೆ. ಈ ನಡುವೆ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ, ದೇಶದಲ್ಲಿ ಜನರ ಜೀವನ ಸಹಜಸ್ಥಿತಿಗೆ ಮರಳಲಿ ನಂತರ ಐಪಿಎಲ್‌ ಬಗ್ಗೆ ಯೋಚಿಸೋಣ ಎಂದಿದ್ದಾರೆ. 

ಮನೆಯಲ್ಲಿರುವುದೇ ಕೊರೋನಾಗೆ ಮದ್ದು: ಕೊಪ್ಪಳದ ಗವಿಸಿದ್ಧೇಶ್ವರ ಶ್ರಿಗಳ ಸಂದೇಶ

‘ನಾವು ಮೊದಲು ದೇಶದ ಬಗ್ಗೆ ಯೋಚಿಸಬೇಕು. ಪರಿಸ್ಥಿತಿ ಸುಧಾರಿಸಿದರೆ, ಐಪಿಎಲ್‌ ಆಮೇಲೆ ನಡೆಸಬಹುದು’ ಎಂದು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಇನ್ನು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ, ಈ ಬಾರಿ ಐಪಿಎಲ್ ಟೂರ್ನಿ ಎಂದಿನಂತೆ ನಡೆಯುತ್ತದೆಯೇ ಎಂದು ಇನ್‌ಸ್ಟಾಗ್ರಾಂನಲ್ಲಿ ಪ್ರಶ್ನಿಸಿದ್ದಾರೆ. ರೋಹಿತ್ ಎಲ್ಲವೂ ಸಹಜ ಸ್ಥಿತಿಗೆ ಮರಳಿದರೆ, ಯಾರಿಗೆ ಗೊತ್ತು? ಐಪಿಎಲ್‌ ನಡೆದರೂ ನಡೆಯಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 29ರಿಂದ ಆರಂಭವಾಗಬೇಕಿತ್ತು. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಕೊರೋನಾ ವೈರಸ್ ಭೀತಿಯಿಂದಾಗಿ ಏಪ್ರಿಲ್‌ 15ಕ್ಕೆ ಮುಂದೂಡಲಾಯಿತು, ಇದೀಗ ದೇಶವೇ ಲಾಕ್‌ಡೌನ್‌ಗೆ ಒಳಗಾಗಿರುವುದರಿಂದ ಏಪ್ರಿಲ್ 15ರಿಂದಲೂ ಐಪಿಎಲ್ ನಡೆಯುವುದು ಅನುಮಾನ ಎನಿಸಿದೆ.

ಸಾಲ ವಸೂಲಿ, ಆಸ್ತಿ ಹರಾಜಿಗೆ ಹೈಕೋರ್‌ ತಡೆ

ಭಾರತದಲ್ಲಿ ಶನಿವಾರದ ಅಂತ್ಯದ ವೇಳೆಗೆ ಒಟ್ಟು 887 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, 20 ಮಂದಿ ಕೊನೆಯುಸಿರೆಳೆದಿದ್ದಾರೆ. ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೊರೋನಾ
ವೈರಸ್ ತಲ್ಲಣ ಮೂಡಿಸಿದೆ.
 

Follow Us:
Download App:
  • android
  • ios