Asianet Suvarna News Asianet Suvarna News

ಈತನನ್ನು ಖರೀದಿಸಲು 9 ಕೋಟಿ ನೀಡಲು ರೆಡಿಯಾಗಿದ್ದ RCB, ಕೊನೆಗೆ ಹರಾಜಾಗಿದ್ದು 50 ಲಕ್ಷಕ್ಕೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಆಟಗಾರರ ಹರಾಜಿನಲ್ಲಿ ಓರ್ವ ಆಲ್ರೌಂಡರ್‌ಗೆ ಬರೋಬ್ಬರಿ 9 ಕೋಟಿ ನೀಡಲು ರೆಡಿಯಾಗಿತ್ತು. ಆದರೆ ಆ ಆಟಗಾರ ಕೇವಲ 50 ಲಕ್ಷ ರುಪಾಯಿಗೆ ಹರಾಜಾದರು. ಅಷ್ಟಕ್ಕೂ ಯಾರು ಆ ಆಟಗಾರ..? ಆತನ ವಿಶೇಷವೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..

IPL 2020  RCB had spent 9 Crore in the mock auction to buy Sri Lanka all rounder Isuru Udana
Author
Bengaluru, First Published Dec 26, 2019, 6:20 PM IST

ಬೆಂಗಳೂರು[ಡಿ.26]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2020 ಟೂರ್ನಿಗೆ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಶತಾಯಗತಾಯ ಕಪ್ ಗೆಲ್ಲಲು ರಣತಂತ್ರ ರೂಪಿಸಿದೆ.

ಇದರ ಭಾಗವಾಗಿ ಕೋಲ್ಕತಾದಲ್ಲಿ ಡಿಸೆಂಬರ್ 19ರಂದು ನಡೆದ ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಯಶಸ್ವಿಯಾಗಿದೆ. ಇದರ ನಡುವೆಯೇ ಒಬ್ಬ ಆಲ್ರೌಂಡರ್ ಖರೀದಿಸಲು ಬರೋಬ್ಬರಿ 9 ಕೋಟಿ ರುಪಾಯಿ ನೀಡಲು RCB ಫ್ರಾಂಚೈಸಿ ರೆಡಿಯಾಗಿತ್ತು ಎನ್ನುವ ರೋಚಕ ಸಂಗತಿ ಇದೀಗ ಬಯಲಾಗಿದೆ.

IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್!

ಕಳೆದ 12 ಐಪಿಎಲ್ ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ 8 ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೋರಿಸ್ ಅವರಿಗೆ 10 ಕೋಟಿ ರುಪಾಯಿ ನೀಡಿದರೆ, ಆ್ಯರೋನ್ ಫಿಂಚ್ ಅವರಿಗೆ 4.4 ಕೋಟಿ ರುಪಾಯಿ ನೀಡಿದೆ. ಆದರೆ ರಾಯಲ್ ಚಾಲೆಂಜರ್ಸ್ ತಂಡವು ಮತ್ತೋರ್ವ ಆಲ್ರೌಂಡರ್’ಗೆ 9 ಕೋಟಿ ರುಪಾಯಿ ನೀಡಲು ರೆಡಿಯಾಗಿತ್ತು. ಆದರೆ ಹರಾಜಿನಲ್ಲಿ ಕೇವಲ 50 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಯಶಸ್ವಿಯಾಗಿದೆ.

ಯಾರು ಆ ಆಟಗಾರ, ಆಗಿದ್ದೇನು..?

ಆರ್‌ಸಿಬಿ ತಂಡದ ಕ್ರಿಕೆಟ್‌ ಚಟುವಟಿಕೆಗಳ ಮುಖ್ಯಸ್ಥ ಮೈಕ್‌ ಹೆಸ್ಸನ್‌ ಹಾಗೂ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ 21.50 ಕೋಟಿ ಖರ್ಚು ಮಾಡಿ 8 ಆಟಗಾರರನ್ನು ಖರೀದಿಸಿತ್ತು. ಅದರಲ್ಲೂ ಲಂಕಾದ ಆಲ್ರೌಂಡರ್ ಇಸಾರು ಉದಾನ ಅವರನ್ನು ಬರೋಬ್ಬರಿ 9 ಕೋಟಿ ನೀಡಿ ಖರೀದಿಸಲು ಮೈಕ್‌ ಹೆಸ್ಸನ್‌ ಮುಂದಾಗಿದ್ದರು. ಚುಟುಕು ಕ್ರಿಕೆಟ್’ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಉಪಯುಕ್ತ ಕಾಣಿಕೆ ನೀಡಬಲ್ಲ ಆಟಗಾರನಾಗಿರುವ ಉದಾನ ಅವರನ್ನು 9 ಕೋಟಿ ರುಪಾಯಿ ನೀಡಿಯಾದರೂ ಖರೀದಿಸಲು ಹೆಸ್ಸನ್ ರೆಡಿಯಿದ್ದರಂತೆ. 

RCB ಸೇರಿದ ಕನ್ನಡಿಗ ಪವನ್ ದೇಶಪಾಂಡೆ ಜೊತೆ ಸುವರ್ಣನ್ಯೂಸ್.ಕಾಂ Exclusive ಮಾತು!

ಹೌದು, RCB ಇದೀಗ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ RCB ಹರಾಜಿನ ಹಿಂದಿನ ದಿನ ಉದಾನ ಮೇಲೆ 9 ಕೋಟಿ ರುಪಾಯಿವರೆಗೂ ಬಿಡ್ ಮಾಡಿರುವ ದೃಶ್ಯಾವಳಿಗಳನ್ನು ರಿಲೀಸ್ ಮಾಡಿದೆ.

ಹೀಗಿತ್ತು ನೋಡಿ ಆ ಬಿಡ್ಡಿಂಗ್ ಕ್ಷಣಗಳು 

ಆದರೆ ನಿಜವಾದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 50 ಲಕ್ಷ ರುಪಾಯಿ ನೀಡಿ ಉದಾನ ಅವರನ್ನು ಖರೀದಿಸಿದೆ. ಇನ್ನುಳಿದಂತೆ ಕನ್ನಡಿಗ ಪವನ್ ದೇಶಪಾಂಡೆ ಸೇರಿದಂತೆ 8 ಆಟಗಾರರು ಬೆಂಗಳೂರು ತಂಡವನ್ನು ಕೂಡಿಕೊಂಡಿದ್ದಾರೆ.

 

Follow Us:
Download App:
  • android
  • ios