Asianet Suvarna News Asianet Suvarna News

IPL 2020: ಪಂದ್ಯಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಶಾಕ್!

ಮಾರ್ಚ್ 29 ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ.  ಇದಕ್ಕಾಗಿ ಬಿಸಿಸಿಐ ತಯಾರಿ ನಡೆಸಿದೆ. ಟೂರ್ನಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ದಿಢೀರ್ ಆಗಿ ಐಪಿಲ್ ಗರ್ವಿನಿಂಗ್ ಕೌನ್ಸಿಲ್ ಶಾಕ್ ನೀಡಿದೆ.

IPL 2020 all star match postponed to end of tourney
Author
Bengaluru, First Published Feb 20, 2020, 7:47 PM IST

ಮುಂಬೈ(ಫೆ.20): ಮಾರ್ಚ್ 29 ರಿಂದ ಮೇ 24ರ ವರೆಗೆ 13ನೇ ಆವೃತ್ತಿ ಐಪಿಎಲ್ ಟೂರ್ನಿ ನಡೆಯಲಿದೆ. ಹರಾಜಿನ ಬಳಿಕ 8 ತಂಡದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಈ ಬಾರಿಯ ಟೂರ್ನಿಯನ್ನು ಮತ್ತಷ್ಟು ವಿಶೇಷವಾಗಿಸಲು ಬಿಸಿಸಿಐ ತಯಾರಿ ನಡೆಸಿದೆ. ಇದಕ್ಕಾಗಿ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಆಲ್ ಸ್ಟಾರ್ ಪಂದ್ಯ ಆಯೋಜಿಸಲಾಗಿತ್ತು. ಇದೀಗ ಈ ಪಂದ್ಯವನ್ನು ಮುಂಡೂಡಲಾಗಿದೆ.

ಇದನ್ನೂ ಓದಿ: IPL 2020: ಇಲ್ಲಿದೆ RCB ತವರಿನ ಪಂದ್ಯದ ವೇಳಾಪಟ್ಟಿ!.

ದಕ್ಷಿಣ ಹಾಗೂ ಪಶ್ಚಿಮ ಭಾರತದ ತಂಡದಳಾದ RCB, ಮುಂಬೈ ಇಂಡಿಯನ್ಸ್, ಸಿಎಸ್‌ಕೆ, ಹೈದರಾಬಾದ್ ತಂಡಗಳು ಪ್ರಮುಖ ಆಟಗಾರರ ಒಂದು ತಂಡ ಹಾಗೂ ಉತ್ತರ ಹಾಗೂ ಪೂರ್ವ ಭಾರತದ  ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ, ಕೆಕೆಆರ್ ಹಾಗೂ ಪಂಜಾಬ್ ತಂಡದ ಪ್ರಮುಖ ಆಟಗಾರರನ್ನೊಳಗೊಂಡ ಮತ್ತೊಂದು ತಂಡ ಆಲ್ ಸ್ಟಾರ್ ಪಂದ್ಯ ಆಡಲು ಸಜ್ಜಾಗಿತ್ತು.

ಇದನ್ನೂ ಓದಿ: ಫಿಂಚ್ to ಸ್ಟೋಕ್ಸ್; IPL 2020 ಟೂರ್ನಿಗೆ ಅಲಭ್ಯರಾಗಿರುವ ಸ್ಟಾರ್ ಕ್ರಿಕೆಟರ್ಸ್!

ಮಾರ್ಚ್ 25 ರಂದು ಆಲ್ ಸ್ಟಾರ್ ಪಂದ್ಯಕ್ಕೆ ಬಿಸಿಸಿಐ ಸಿದ್ದತೆ ನಡೆಸಿತ್ತು. ಆದರೆ ಫ್ರಾಂಚೈಸಿಗಳು ಆಟಗಾರರನ್ನು ಆಲ್ ಸ್ಟಾರ್ ಪಂದ್ಯಕ್ಕೆ ಕಳುಹಿಸಿಕೊಡಲು ತಯಾರಿಲ್ಲ. ಟೂರ್ನಿಗೂ ಮೊದಲೇ ಆಟಗಾರರು ಇಂಜರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಫ್ರಾಂಚೈಸಿಗಳು ಒಪ್ಪಿಲ್ಲ. ಇದೀಗ ಆಲ್ ಸ್ಟಾರ್ ಪಂದ್ಯ ಐಪಿಎಲ್ ಪ್ಲೇ ಆಫ್ ವೇಳೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಐಪಿಎಲ್ ಚೇರ್ಮೆನ್ ಬ್ರಜೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios