ಮುಂಬೈ(ಮಾ.31): 2020ರ ಐಪಿಎಲ್‌ ಟೂರ್ನಿ ರದ್ದುಗೊಳ್ಳುವ ಸಾಧ್ಯತೆ ಇದೆ. ಬಿಸಿಸಿಐ ಇನ್ನೂ ಅಧಿಕೃತವಾಗಿ ಘೋಷಿಸದಿದ್ದರೂ, ಟೂರ್ನಿ ನಡೆಸಲು ವಿದೇಶಿ ಆಟಗಾರರ ವೀಸಾ ಸಮಸ್ಯೆ ಕಾರಣವಾಗಲಿದೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ. 

ಭಾರತೀಯ ಸರ್ಕಾರ, ಸದ್ಯ ಏ.15ರ ವರೆಗೂ ವಿದೇಶಿಗರ ವೀಸಾಗಳನ್ನು ಅಮಾನತುಗೊಳಿಸಿದೆ. ಅಮಾನತು ಅವಧಿ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಐಪಿಎಲ್‌ ನಡೆಸಲು ಸಾಧ್ಯವಿಲ್ಲ ಎನ್ನುವುದು ಬಿಸಿಸಿಐಗೆ ಮನವರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

IPL 2020 ಟೂರ್ನಿ ರದ್ದಾದ್ರೆ ಕೆಲ ಕ್ರಿಕೆಟಿಗರ ಕೆರಿಯರ್ ಕ್ಲೋಸ್..!

ಇದೇ ವೇಳೆ ಮುಂದಿನ ವರ್ಷ ನಡೆಯಬೇಕಿರುವ ಮೆಗಾ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುತ್ತದೆ ಎನ್ನಲಾಗಿದೆ. 2021ರ ಐಪಿಎಲ್‌ಗೂ ಮುನ್ನ ಎಲ್ಲಾ ತಂಡಗಳು ಕೆಲವೇ ಕೆಲ ಆಟಗಾರರನ್ನು ಉಳಿಸಿಕೊಂಡು ಹೊಸದಾಗಿ ತಂಡ ಕಟ್ಟಬೇಕಿತ್ತು. ಆ ಪ್ರಕ್ರಿಯೆಗೆ ತಡೆ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಹೆಚ್ಚಿದ ಕೊರೋನಾ ವೈರಸ್; ಈ ವರ್ಷ ಐಪಿಎಲ್ ಟೂರ್ನಿ ರದ್ದು?

ಈ ಮೊದಲಿನ ವೇಳಾಪಟ್ಟಿಯಂತೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 29ರಿಂದಲೇ ಆರಂಭವಾಗಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಇದೀಗ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಈ ಬಾರಿ ಚುಟುಕು ಕ್ರಿಕೆಟ್ ಹಬ್ಬ ನಡೆಯುವುದು ಅನುಮಾನ ಎನಿಸಿದೆ.