ಸ್ವಾತಿ ಮಲಿವಾಲ ಆರೋಪಕ್ಕೆ ಯುಟ್ಯೂಬರ್ ಧೃವ್ ರಾಠೀ ಮೊದಲ ಪ್ರತಿಕ್ರಿಯೆ
Dhruv Rathee Vs Swati Malival: ಸ್ವಾತಿ ಮಲಿವಾಲ ಆರೋಪಕ್ಕೆ ಧೃವ್ ರಾಠೀ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿರುವ ಧೃವ್ ರಾಠೀ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.
ನವದೆಹಲಿ: ತನ್ನದೇ ಪಕ್ಷದ ನಾಯಕರ ವಿರುದ್ಧ ಹಲ್ಲೆಯ ಆರೋಪ ಮಾಡಿರುವ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ, (Rajya Sabha MP Swati Malival) ಖ್ಯಾತ ಯುಟ್ಯೂಬರ್ ಧೃವ್ ರಾಠೀ (Youtuber Dhruv Rathee) ವಿಡಿಯೋ ವಿರುದ್ಧ ಅಸಮಾಧಾನ ಹೊರ ಹಾಕಿ, ಅದರಿಂದಲೇ ತಮಗೆ ಬೆದರಿಕೆ ಮತ್ತು ಅತ್ಯಾಚಾರದಂತೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದರು. ಸ್ವಾತಿ ಮಲಿವಾಲ ಆರೋಪಕ್ಕೆ ಧೃವ್ ರಾಠೀ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿರುವ ಧೃವ್ ರಾಠೀ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಧೃವ್ ರಾಠೀ, ಸ್ವಾತಿ ಮಲಿವಾಲ ಪ್ರಕರಣದ ಕುರಿತು ಎರಡೂವರೆ ನಿಮಿಷದ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದರು. ಈ ವಿಡಿಯೋ ಕೇವಲ ಒನ್ ಸೈಡ್ ಮಾತ್ರದ ಮಾಹಿತಿ ನೀಡಲಾಗಿದೆ ಎಂದು ಸ್ವಾತಿ ಮಲಿವಾಲ ವಾಗ್ದಾಳಿ ನಡೆಸಿದ್ದರು.
ಇಲ್ಲಿ ಆರೋಪಿಗಳೇ ಸಂತ್ರಸ್ತರಾಗಿದ್ದಾರೆ
ಸುಳ್ಳು ಆರೋಪ, ಪ್ರತಿದಿನದ ಕೊಲೆ ಬೆದರಿಕೆ, ಮಾನಹಾನಿ ಅಂತಹ ಆರೋಪಗಳೆಲ್ಲವೂ ನನ್ನ ವಿರುದ್ಧದ ಸಂಘಟಿತ ಕೆಲಸಗಳು ಅಂದಿರೋ ಧೃವ್ ರಾಠೀ, ನನಗೆ ಇದೆಲ್ಲವೂ ಅಭ್ಯಾಸವಾಗಿದೆ. ಇಲ್ಲಿ ದುಷ್ಕರ್ಮಿಗಳೇ ತಮ್ಮನ್ನು ಸಂತ್ರಸ್ತರಂತೆ ಬಿಂಬಿಸಿಕೊಂಡು ಜನತೆ ಮುಂದೆ ನಟಿಸುತ್ತಿದ್ದಾರೆ. ಇದೆಲ್ಲದರ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಈ ಮೂಲಕ ನನ್ನನ್ನು ತುಳಿಯುವ ಯತ್ನ ನಡೆಯುತ್ತಿದೆ. ಆದರೆ ಎಂದಿಗೂ ಅದು ಸಾಧ್ಯವಿಲ್ಲ. ನೀವು ಒಬ್ಬ ಧೃವ ರಾಠೀಯನ್ನು ತುಳಿದ್ರೆ ಸಾವಿರ ಹೊಸ ಧೃವ ರಾಠೀಗಳು ಹುಟ್ಟಿಕೊಳ್ಳುತ್ತಾರೆ ಎಂದು ತೀಕ್ಷ್ಣವಾಗಿ ಧೃವ್ ರಾಠೀ ತಿರುಗೇಟು ನೀಡಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರ ಮುಗಿದ ಬಳಿಕ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಎರಡು ದಿನ ಧ್ಯಾನ!
ಸ್ವಾತಿ ಮಲಿವಾಲ ಹೇಳಿದ್ದೇನು?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ವಿರುದ್ಧ ಸಲ್ಲಿಸಿರುವ ದೂರು ಹಿಂಪಡೆಯುವಂತೆ ನನ್ಮೇಲೆ ಒತ್ತಡ ಮತ್ತು ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಸ್ವಾತಿ ಹೇಳಿಕೊಂಡಿದ್ದಾರೆ. ಧೃವ್ ರಾಠಿ ವಿಡಿಯೋಗೆ ಅಸಮಾಧಾನ ಹೊರಹಾಕಿರುವ ಸ್ವಾತಿ ಮಲಿವಾಲ, ತಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದ್ರೆ ಧೃವ್ ರಾಠಿ ನನ್ನ ಕರೆಗಳನ್ನು ಸ್ವೀಕರಿಸಿಲ್ಲ ಮತ್ತು ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದಿದ್ದಾರೆ.
ಮೆಟ್ರೋ ರೈಲು ಖಾಲಿ ಇತ್ತು, ಆದ್ರೂ ಸೀಟ್‌ಗಾಗಿ ಕಿತ್ತಾಡಿಕೊಂಡ ನಾರಿಮಣಿಯರು- ವಿಡಿಯೋ ವೈರಲ್
ತಮ್ಮನ್ನು ಸ್ವತಂತ್ರ ಪತ್ರಕರ್ತ ಎಂದು ಹೇಳಿಕೊಳ್ಳುವ ದೃವ್ ರಾಠಿ ಒಂದು ಕಡೆಯ ಘಟನೆಯನ್ನು ಮಾತ್ರ ವಿವರಿಸಿದ್ದಾರೆ. ಆಪ್ ಪಕ್ಷದ ವಕ್ತಾರರಂತೆ ಧೃವ್ ರಾಠಿ ವರ್ತಿಸಿದ್ದಾರೆ. ಘಟನೆಯ ಬಗ್ಗೆ ತಿಳಿ ಹೇಳಲು ನಾನು ಪ್ರಯತ್ನಿಸಿದೇ ಆದ್ರೆ ಧೃವ್ ರಾಠಿ ಸಂಪರ್ಕ ಸಾಧ್ಯವಾಗಿಲ್ಲ ಎಂದು ಸ್ವಾತಿ ಮಲಿವಾಲ ಹೇಳಿಕೊಂಡಿದ್ದಾರೆ.