Asianet Suvarna News Asianet Suvarna News

ನಾನು ಹೆಮ್ಮೆಯ ಭಾರತೀಯ, ತಂದೆಯ ಕೆಲಸಕ್ಕೆ ಪುತ್ರ ಜವಾಬ್ದಾರನಲ್ಲ: ಟೀಕಿಸಿದವರಿಗೆ ಸಮಿ ತಿರುಗೇಟು

ಒಬ್ಬ ಪುತ್ರ ಆತನ ತಂದೆಯ ಕೆಲಸಗಳಿಗೆ ಜವಾಬ್ದಾರನಲ್ಲ, ಹಾಗೆಯೇ ಒಬ್ಬ ಪುತ್ರನ ಕೆಲಸಕ್ಕೆ ತಂದೆ ಜವಾಬ್ದಾರನಲ್ಲ ಎಂದು ಗಾಯಕ ಅದ್ನಾನ್ ಸಮಿ ತಿಳಿಸಿದ್ದಾರೆ. ಸಿಂಗರ್ ಅದ್ನಾನ್ ಸಮಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಬಗ್ಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಮಿ ಪ್ರತಿಕ್ರಿಯೆ ನೀಡಿದ್ದಾರೆ.
 

You cant hold son responsible for fathers acts says singer Adnan Sami
Author
Bangalore, First Published Jan 28, 2020, 3:24 PM IST

ನವದೆಹಲಿ(ಜ.28): ಒಬ್ಬ ಪುತ್ರ ಆತನ ತಂದೆಯ ಕೆಲಸಗಳಿಗೆ ಜವಾಬ್ದಾರನಲ್ಲ, ಹಾಗೆಯೇ ಒಬ್ಬ ಪುತ್ರನ ಕೆಲಸಕ್ಕೆ ತಂದೆ ಜವಾಬ್ದಾರನಲ್ಲ ಎಂದು ಗಾಯಕ ಅದ್ನಾನ್ ಸಮಿ ತಿಳಿಸಿದ್ದಾರೆ.

ಸಿಂಗರ್ ಅದ್ನಾನ್ ಸಮಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಬಗ್ಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಇವತ್ತು ನಾನು ಹೆಮ್ಮೆಯ ಭಾರತೀಯ. ನನ್ನ ದೇಶಭಕ್ತಿ ಸಂಪೂರ್ಣವಾಗಿ ನನ್ನ ದೇಶಕ್ಕೆ ಮೀಸಲು. ಅರ್ಹತೆಯ ಆಧಾರದಲ್ಲಿ ನನಗೆ ಈ ಪ್ರಶಸ್ತಿ ಸಿಗುತ್ತಿದೆ. ನನಗೆ ನನ್ನ ತಂದೆಯೊಂದಿಗಿನ ಸಂಬಂಧ ಹಾಗೂ ಪ್ರಶಸ್ತಿಯನ್ನು ತಳುಕು ಹಾಕುವಂತಿಲ್ಲ ಎಂದು ಸಮಿ ತಮ್ಮ ಕಾಲೆಳೆದವರಿಗೆ ಉತ್ತರಿಸಿದ್ದಾರೆ.

ಭಾರತೀಯ ನಾಯಿಗಳು : ಕುವೈತ್'ನಲ್ಲಿ ಅದ್ನಾನ್ ತಂಡಕ್ಕೆ ಅವಮಾನ

ವೈಯಕ್ತಿಕವಾಗಿ ಸಿಗುವಂತಹ ಉನ್ನತ ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆ. ನನಗೆ ಇದಕ್ಕಿಂತ ದೊಡ್ಡ ಹೆಮ್ಮೆ ಬೇರೇನೂ ಇಲ್ಲ. ಇಂತಹ ಗೌರವ ಪ್ರಶಸ್ತಿಯಲ್ಲಿಯೂ ರಾಜಕೀಯ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.

ಈ ಎರಡು ವಿಚಾರಗಳನ್ನು ಜನ ಒಟ್ಟು ಮಾಡಬಾರದು. ಎರಡೂ ಪ್ರತ್ಯೇಕ ವಿಚಾರ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರದ ಕೆಲಸವನ್ನೂ ಪ್ರಶಸ್ತಿಯನ್ನೂ ತಾಳೆಹಾಕಬೇಡಿ. ಸಂಗೀತ ಕ್ಷೇತ್ರದಲ್ಲಿ ನೀಡಲಾಗುತ್ತಿರುವ ಈ ಪ್ರಶಸ್ತಿ ಎಲ್ಲ ಮಿತಿಗಳನ್ನೂ ಮೀರಿದ್ದು, ಹಾಗೂ ಎಲ್ಲಕಿಂತ ಉನ್ನತವಾಗಿದ್ದು ಎಂದು ಅವರು ತಿಳಿಸಿದ್ದಾರೆ.

ನನ್ನ ಮೇಲೆ ಲೈಂಗಿಕ ಶೋಷಣೆ ನಡೀತಿದೆ: ನಿರ್ಭಯಾ ರೇಪಿಸ್ಟ್ ಶಾಕಿಂಗ್ ಹೇಳಿಕೆ

ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರು ಯಾರೂ ಯಾವುದೇ ಹೇಳಿಕೆ ನೀಡಿಲ್ಲ. ಯಾರೋ ಕಿರಿಯ ರಾಜಕಾರಣಿಗಳು ಮಾಧ್ಯಮದ ಗಮನ ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ವಕ್ತಾರ ಜಯ್‌ವೀರ್‌ಗೆ ಟಾಂಗ್ ಕೊಟ್ಟಿದ್ದಾರೆ.

ಶನಿವಾರ ಪದ್ಮ ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ಅನೌನ್ಸ್ ಮಾಡಲಾಗಿದ್ದು, ಅದರಲ್ಲಿ ಖ್ಯಾತ ಗಾಯಕ ಅದ್ನಾನ್ ಸಮಿಯ ಹೆಸರೂ ಸೇರಿದೆ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಯನ್ನು ಪಾಕಿಸ್ತಾನ ಏರ್‌ಫೋರ್ಸ್‌ನ ಪೈಲಟ್‌ನ ಪುತ್ರನಿಗೆ ಹೇಗೆ ನೀಡುತ್ತೀರಿ ಎಂದು ಕಾಂಗ್ರೆಸ್‌ ವಕ್ತಾರ ಜಯ್‌ವೀರ್ ಪ್ರಶ್ನಿಸಿದ್ದರು. ಸಮಿಯ ತಂದೆ ಅರ್ಷದ್ ಸಮಿ ಖಾನ್ ಪಾಕಿಸ್ತಾನದ ಸೇನೆಯಲ್ಲಿದ್ದು, 1965ರಲ್ಲಿ ಭಾರತಕ್ಕೆದುರಾಗಿ ಯುದ್ಧ ಮಾಡಿದ್ದರು.

Follow Us:
Download App:
  • android
  • ios