ತಿರುವನಂತಪುರ(ನ. 02): ಗೌರವಯುತ ಮಹಿಳೆ ತನ್ನ ಮೇಲೆ ಅತ್ಯಾಚಾರ ನಡೆದರೆ, ಘಟನೆ ಬಳಿಕ ಆತ್ಮಹತ್ಯೆ ಮಾಡಿಕೊಳ್ತಾಳೆ ಎಂದು ಕೇರಳ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್‌ ಕೀಳು ಹೇಳಿಕೆ ನೀಡಿದ್ದಾರೆ.

ರಾಜ್ಯ ವಿಧಾನಸಭೆ ಬಳಿ ಭಾನುವಾರ ಮಾತನಾಡಿದ ಮುಲ್ಲಪಲ್ಲಿ ಅವರು, ಆತ್ಮಗೌರವ ಇರುವ ಮಹಿಳೆಯರು ಅತ್ಯಾಚಾರಕ್ಕೊಳಗಾದರೆ ಆತ್ಮಹತ್ಯೆಗೆ ಶರಣಾಗುತ್ತಾರೆ ಅಥವಾ ಮತ್ತೊಮ್ಮೆ ತಮ್ಮ ಮೇಲೆ ಅಂಥ ದೌರ್ಜನ್ಯಗಳು ನಡೆಯದಂತೆ ಎಚ್ಚರ ವಹಿಸುತ್ತಾರೆ. ಆದರೆ, ಓರ್ವ ಮಹಿಳೆ ತನ್ನ ಮೇಲೆ ನಿರಂತರ ಅತ್ಯಾಚಾರವಾಯಿತು ಎಂದರೆ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು.

ತನ್ಮೂಲಕ ಕೇರಳದ ಬಹುಕೋಟಿ ಸೋಲರ್‌ ಹಗರಣದ ಮುಖ್ಯ ಆರೋಪಿ ಸರಿತಾ ನಾಯರ್‌ ಆರೋಪದ ವಿರುದ್ಧ ಕಿಡಿಕಾರಿದರು.