Asianet Suvarna News Asianet Suvarna News

ಬೆಂಗಳೂರು ರೇಪ್‌ಕೇಸ್‌ ಮರು ವಿಚಾರಣೆ: ಸುಪ್ರಿಂ ಕೋರ್ಟ್‌ ಸಮ್ಮತಿ

* ರಾಜಿ ಆಗಿ ರದ್ದಾಗಿದ್ದ ಪ್ರಕರಣ'

* ಬೆಂಗಳೂರು ರೇಪ್‌ಕೇಸ್‌ ಮರು ವಿಚಾರಣೆ: ಸುಪ್ರಿಂ ಕೋರ್ಟ್‌ ಸಮ್ಮತಿ

* ಕರ್ನಾಟಕ ಸರ್ಕಾರ, ಆರೋಪಿಗೆ ನೋಟಿಸ್‌ ಜಾರಿ

Woman seeks rape case revival that was quashed after accused agreed to marry her pod
Author
Bangalore, First Published Jul 18, 2021, 9:10 AM IST

ನವದೆಹಲಿ(ಜು.18): ಅತ್ಯಾಚಾರ ಆರೋಪಿ ತನ್ನನ್ನು ಮದುವೆ ಆಗುವುದಾಗಿ ಒಪ್ಪಿದ್ದ ಕಾರಣಕ್ಕೆ ಈ ಹಿಂದೆ ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿದ್ದ ಪ್ರಕರಣವನ್ನು ಪುನಃ ವಿಚಾರಣೆ ನಡೆಸುವಂತೆ ಕೋರಿ ಸಂತ್ರಸ್ತ ಯುವತಿ ದಾಖಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಿಚಾರಣೆಗೆ ಸ್ವೀಕರಿಸಿದೆ.

ಈ ಸಂಬಂಧ ಕರ್ನಾಟಕ ಸರ್ಕಾರ ಮತ್ತು ಅತ್ಯಾಚಾರ ಆರೋಪಿ ಆದ ಎಂಬಿಬಿಎಸ್‌ ವಿದ್ಯಾರ್ಥಿಯಿಂದ ಸುಪ್ರೀಂಕೋರ್ಟ್‌ ಪ್ರತಿಕ್ರಿಯೆ ಕೇಳಿದೆ.

ಏನಿದು ಪ್ರಕರಣ?:

ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿ ಆದ ಆರೋಪಿ, ಮದುವೆ ಆಗುವುದಾಗಿ ನಂಬಿಸಿ ಸಂತ್ರಸ್ತೆಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ. ಆದರೆ, ಬಳಿಕ ಆತ ಮದುವೆಗೆ ನಿರಾಕರಿಸಿದ ಕಾರಣಕ್ಕೆ ಆತನ ವಿರುದ್ಧ ದೂರು ದಾಖಲಾಗಿತ್ತು. ಬಳಿಕ 2017-​2018ರಲ್ಲಿ ಇವರಿಬ್ಬರೂ ರಾಜಿ ಆಗಿ ಮದುವೆ ಆಗಲು ಒಪ್ಪಿದ್ದ ಕಾರಣಕ್ಕೆ ಕರ್ನಾಟಕ ಹೈಕೋರ್ಟ್‌ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿತ್ತು.

ತನ್ನ ವಿರುದ್ಧದ ಪ್ರಕರಣ ರದ್ದಾದ ಬಳಿಕ ವರಸೆ ಬದಲಿಸಿದ ಆರೋಪಿ, ಸಂತ್ರಸ್ತೆಯನ್ನು ಮದುವೆ ಆಗಲು 1 ಕೋಟಿ ರು. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಸಂತ್ರಸ್ತೆ ಮದುವೆಗೆ ನಿರಾಕರಿಸಿದ್ದಳು.

ಇದೀಗ ತಾನು ಈ ಹಿಂದೆ ಆರೋಪಿಯ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ದೂರಿನ ಮರು ವಿಚಾರಣೆ ಮಾಡುವಂತೆ ಕೋರಿ ಸಂತ್ರಸ್ತೆ ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದಾರೆ.

ರಾಜೀ ಮತ್ತು ಸಂಧಾನದ ಆಧಾರದ ಮೇಲೆ ಪ್ರಕರಣವನ್ನು ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿ ಕರ್ನಾಟಕ ಹೈಕೋರ್ಟ್‌ ಈ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಸಂತ್ರಸ್ತೆಯ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರಿಂಕೋರ್ಟ್‌, ಕರ್ನಾಟಕ ಸಕಾರ ಮತ್ತು ಅತ್ಯಾಚಾರ ಆರೋಪಿಗೆ ನೋಟಿಸ್‌ ಜಾರಿ ಮಾಡಿ ಒಂದು ತಿಂಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

Follow Us:
Download App:
  • android
  • ios