ನವದೆಹಲಿ[ಡಿ.08]: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಬೇಡಿಕೆ ಇಟ್ಟು ಮಹಿಳೆಯೊಬ್ಬಳು ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಯ ಹೊರಗಡೆ ಶನಿವಾರ ಮಧ್ಯಾಹ್ನ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೇ ಪೆಟ್ರೋಲ್‌ ಸುರಿದ ಪ್ರತಿಭಟನೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.

ಸಂತ್ರಸ್ತೆಯ ಮೃತ ದೇಹವನ್ನು ಆಸ್ಪತ್ರೆಯಿಂದ ಆಕೆಯ ಗ್ರಾಮಕ್ಕೆ ಕರೆದೊಯ್ದ ಒಂದು ಗಂಟೆಯ ಬಳಿಕ ಈ ಘಟನೆ ನಡೆದಿದೆ.

ಮಾಧ್ಯಮಗಳು ಜನರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದ ವೇಳೆ ‘ನಮಗೆ ನ್ಯಾಯ ಬೇಕು’ ಎಂದು ಕೂಗುತ್ತಾ ಬಂದ ಮಹಿಳೆ ತನ್ನ ಮಗಳ ಮೇಲೆ ಪೆಟ್ರೋಲ್‌ ಸುರಿದಿದ್ದಾಳೆ.

ತಕ್ಷಣವೇ ಪೊಲೀಸರು ಮಹಿಳೆ ಹಾಗೂ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಉನ್ನಾವ್‌ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ಆಘಾತಕ್ಕೆ ಒಳಗಾಗಿ ಸಫ್ದರ್‌ಜಂಗ್‌ ಆಸ್ಪತ್ರೆಗೆ ದೌಡಾಯಿಸಿದ್ದಾಗಿ ಮಹಿಳೆ ತಿಳಿಸಿದ್ದಾಳೆ.