Asianet Suvarna News Asianet Suvarna News

ಕೊರೋನಾ ಸೋಂಕಿನಲ್ಲಿ ಚೀನಾ ಹಿಂದಿಕ್ಕಿದ ಭಾರತ, ಆದ್ರೆ ಸಾವಿನ ಸಂಖ್ಯೆ ಕಡಿಮೆ!

ಕೊರೋನಾ: ಚೀನಾ ಹಿಂದಿಕ್ಕಿದ ಭಾರತ| ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ವಿಶ್ವದ 11ನೇ ದೇಶ| ಆದರೆ ಸಾವಿನ ಪ್ರಮಾಣ ಕಡಿಮೆ| ಚೀನಾದಲ್ಲಿ 82933, ಭಾರತದಲ್ಲಿ 85538 ಸೋಂಕಿತರು| ಚೀನಾಕ್ಕಿಂತ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ,

with more than 85000 cases india coronavirus count pips china
Author
Bangalore, First Published May 16, 2020, 7:09 AM IST

ನವದೆಹಲಿ(ಮೇ..16):  ಮಾರಕ ಕೊರೋನಾ ವೈರಸ್‌ ಭಾರತದಲ್ಲಿ ತನ್ನ ಉಗ್ರ ಪ್ರತಾಪ ಮುಂದುವರಿಸಿದೆ. ದೇಶದಲ್ಲಿ ಶುಕ್ರವಾರ ಒಂದೇ ದಿನ 3904 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ವೈರಸ್‌ಪೀಡಿತರ ಸಂಖ್ಯೆ 85538ಕ್ಕೆ ಏರಿಕೆಯಾಗಿದೆ. ತನ್ಮೂಲಕ, ವಿಶ್ವದಲ್ಲೇ ಮೊದಲ ಬಾರಿಗೆ ಕೊರೋನಾ ವೈರಸ್‌ ಕಾಣಿಸಿಕೊಂಡ ಚೀನಾವನ್ನು ಭಾರತ ಹಿಂದಿಕ್ಕಿದೆ. ಜೊತೆಗೆ ಅತಿ ಹೆಚ್ಚು ಸೋಂಕಿತರು ಇರುವ ವಿಶ್ವದ ದೇಶಗಳ ಪೈಕಿ 11ನೇ ಸ್ಥಾನಕ್ಕೆ ಏರಿದೆ. ಸದ್ಯ 1.16 ಲಕ್ಷ ಸೋಂಕಿತರೊಂದಿಗೆ ಇರಾನ್‌ 10ನೇ ಸ್ಥಾನದಲ್ಲಿದೆ. ಇದೇ ಪ್ರಮಾಣದಲ್ಲಿ ಸೋಂಕಿತರು ಪ್ರತಿನಿತ್ಯ ಪತ್ತೆಯಾಗುತ್ತಾ ಹೋದರೆ, ಇರಾನ್‌ ದೇಶವನ್ನೂ ಭಾರತ ಹಿಂದಿಕ್ಕುವ ದಿನಗಳು ತೀರಾ ದೂರವೇನೂ ಇಲ್ಲ.

ಕೋಲಿನ ಬಂಡಿಯಲ್ಲಿ ಗರ್ಭಿಣಿ ಪತ್ನಿ, ಪುತ್ರಿಯನ್ನು 700 ಕಿ.ಮೀ. ಎಳೆದೊಯ್ದ ಕಾರ್ಮಿಕ!

2019ರ ನ.17ರಂದು ಚೀನಾದಲ್ಲಿ ಮೊದಲ ಕೊರೋನಾ ಕೇಸು ಪತ್ತೆಯಾಗಿತ್ತು. ಭಾರಿ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾದರಾದರೂ, ಚೀನಾ ಕಟ್ಟುನಿಟ್ಟಿನ ಕ್ರಮಗಳಿಂದ ವೈರಸ್‌ ನಿಗ್ರಹ ಮಾಡಿತು. ಆದರೆ ವೈರಸ್‌ ಅಮೆರಿಕ, ಯುರೋಪ್‌ ಖಂಡದಲ್ಲಿ ಚೀನಾಕ್ಕಿಂತ ವೇಗವಾಗಿ ಹರಡಿ, ಲಕ್ಷಾಂತರ ಮಂದಿಯನ್ನು ಬಲಿ ಪಡೆಯಿತು. ಈಗ ಚೀನಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿಲ್ಲ. ವಿಶ್ವದ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಅಗಾಧ ಜನಸಂಖ್ಯೆಯನ್ನು ಹೊಂದಿದ್ದರೂ ನಿಧಾನಗತಿಯಲ್ಲಿ ಹೆಚ್ಚುತ್ತಿದ್ದ ಭಾರತದ ಸೋಂಕಿತರ ಸಂಖ್ಯೆ ಇದೀಗ ಚೀನಾವನ್ನೇ ಹಿಂದಿಕ್ಕಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.

ಕೊರೋನಾ ಮುಚ್ಚಿಡಲು ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಒತ್ತಡ: ಗಂಭೀರ ಆರೋಪ

ಈ ನಡುವೆ, ದೇಶದಲ್ಲಿ ಶುಕ್ರವಾರ 107 ಮಂದಿ ವೈರಸ್‌ಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 2679ಕ್ಕೇರಿಕೆಯಾಗಿದೆ. ಸೋಂಕು ಹೆಚ್ಚಿದ್ದರೂ ಚೀನಾಕ್ಕೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಚೀನಾದಲ್ಲಿ 4633 ಮಂದಿ ವೈರಸ್‌ಗೆ ಬಲಿಯಾಗಿದ್ದಾರೆ.

ಚೀನಾ ಹಾದಿ

1: 2019 ನ.17

1000: 2020 ಜ.24

10000: ಜ.31

20000: ಫೆ.3

30000: ಫೆ.6

40000: ಫೆ.9

50000: ಫೆ.12

60000: ಫೆ.13

70000: ಫೆ.16

80000: ಮಾ.1

82933: ಮೇ 15

ಭಾರತದ ಕೊರೋನಾ ಹಾದಿ

1: ಜನವರಿ 30

1000: ಮಾ.29

10000: ಏ.13

20000: ಏ.21

30000: ಏ.28

40000: ಮೇ 3

50000: ಮೇ 6

60000: ಮೇ 9

70000: ಮೇ 11

80000: ಮೇ 14

85000: ಮೇ 15

ದೇಶ-  ಸೋಂಕಿತರು- ಸಾವು

ಭಾರತ: 85538- 2679

ಚೀನಾ: 82933- 4633

Follow Us:
Download App:
  • android
  • ios