Asianet Suvarna News Asianet Suvarna News

11 ತಿಂಗಳಲ್ಲಿ 86 ಅತ್ಯಾಚಾರ: ಯುಪಿಯ ಉನ್ನಾವ್ ಈಗ 'ರೇಪ್ ರಾಜಧಾನಿ'!

11 ತಿಂಗಳಲ್ಲಿ ಇಲ್ಲಿ ದಾಖಲಾಗಿದ್ದು 86 ಅತ್ಯಾಚಾರ, 185 ಲೈಂಗಿಕ ದೌರ್ಜನ್ಯ ಪ್ರಕರಣಗಳು| ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಹೆಣ್ಮಕ್ಕಳ ಮೇಲೆ ನಿರಂತರ ದೌರ್ಜನ್ಯ| ರಾಜಕೀಯ ನಾಯಕರ ಅಪ್ಪಣೆ ಇಲ್ಲದೇ ಪೊಲೀಸರು ಒಂದಿಂಚೂ ಕದಲಲ್ಲ

With 86 Rapes 185 Sex assaults In 2019 Unnao Becomes UP Rape Capital
Author
Bangalore, First Published Dec 7, 2019, 12:38 PM IST

ಉನ್ನಾವ್[ಡಿ.07]: 2019ರ ಜನವರಿಯಿಂದ ನವೆಂಬರ್ ವರೆಗೆ ಉನ್ನಾವ್ ಜಿಲ್ಲೆಯಲ್ಲಿ ಬರೋಬ್ಬರಿ 86 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಇದು ಉತ್ತರ ಪ್ರದೇಶದ 'ಅತ್ಯಾಚಾರ ಪ್ರಕರಣಗಳ ರಾಜಧಾನಿ' ಎಂಬ ಕುಖ್ಯಾತಿ ಗಳಿಸಿದೆ.

"

ಸುಮಾರು 31 ಲಕ್ಷ ಜನಸಂಖ್ಯೆಯುಳ್ಳ ಉನ್ನಾವ್ , ಲಕ್ನೋದಿಂದ ಸುಮಾರು 63 ಕಿ. ಮೀಟರ್ ಹಾಗೂ ಕಾನ್ಪುರದಿಂದ 25 ಕಿ. ಮೀಟರ್ ದೂರದಲ್ಲಿದೆ. ಇನ್ನು ಉನ್ನಾವ್ ನಲ್ಲಿ ಕಳೆದ 11 ತಿಂಗಳಲ್ಲಿ 86 ಅತ್ಯಾಚಾರ ಪ್ರಕರಣಗಳು ಮಾತ್ರವಲ್ಲದೇ, 185 ಲೈಂಗಿಕ ದೌರ್ಜನ್ಯದ ಪ್ರಕರಣಗಳೂ ದಾಖಲಾಗಿವೆ. 

ಬೇಲ್ ಪಡೆದು ಹೊರಬಂದ ಆರೋಪಿಗಳು ಉನ್ನಾವೋ ರೇಪ್ ಸಂತ್ರಸ್ತೆಯನ್ನು ಸುಟ್ಟಾಕಿದ್ರು!

ಬಿಜೆಪಿ ಶಾಸಕ ಕುಲ್ದೀಪ್ ಸೆನ್ಗಾರ್ ವಿರುದ್ಧದ ಅತ್ಯಾಚಾರ ಪ್ರಕರಣ ಹಾಗೂ ಶುಕ್ರವಾರದಂದು ಸಾವನ್ನಪ್ಪಿದ ಸಂತ್ರಸ್ತೆ ಈ ಎರಡು ಪ್ರಕರಣವನ್ನು ಹೊರತುಪಡಿಸಿ, ಇಲ್ಲಿನ ಪೂರ್ವಾದಲ್ಲಿ ನಡೆದ ಅತ್ಯಾಚಾರ ಭಾರೀ ಸದ್ದು ಮಾಡಿದ ಪ್ರಕರಣಗಳು.

ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳೆಲ್ಲವೂ ಉನ್ನಾವ್ ನ ಅಸೋಹಾ, ಅಜ್ಗೇನ್, ಮಖಿ ಹಾಗೂ ಮಂಗರ್ಮಾವ್ ನಲ್ಲಿ ನಡೆದ ಪ್ರಕರಣಗಳಾಗಿವೆ. ಬಹುತೇಕ ಪ್ರಕರಣಗಳಲ್ಲಿ ಬಂಧಿತ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದರೆ, ಮತ್ತೆ ಕೆಲವರು ತಲೆ ಮರೆಸಿಕೊಂಡಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಈ ಕುಕೃತ್ಯಗಳಿಗೆ ಪೊಲೀಸರೇ ಕಾರಣ ಎಂಬುವುದು ಸ್ಥಳೀಯರ ಮಾತಾಗಿದೆ.

ಇನ್ನು ಅಜ್ಗೇನ್ ನ ಸ್ಥಳೀಯರೊಬ್ಬರು ಈ ಕುರಿತು ಪ್ರತಿಕ್ರಿಯಿಸುತ್ತಾ 'ಇಲ್ಲಿನ ಪೊಲೀಸರು ಸಂಪೂರ್ಣವಾಗಿ ರಾಜಕೀಯ ನಾಯಕರ ಅಡಿಯಾಳಾಗಿದ್ದಾರೆ. ರಾಜಕೀಯ ನಾಯಕರ ಅಪ್ಪಣೆ ಇಲ್ಲದೇ ಇವರು ಒಂದಿಂಚೂ ಅಲ್ಲಾಡುವುದಿಲ್ಲ. ಪೊಲೀಸರ ಈ ನಡೆಯೇ ಇಂತಹ ಕುಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತದೆ' ಎಂದಿದ್ದಾರೆ.

ಬಿಜೆಪಿ ಶಾಸಕನಿಂದ ಅತ್ಯಾಚಾರ ನಡೆದಿರುವುದು ದೃಢಪಡಿಸಿದ ಸಿಬಿಐ

ಡಿಸೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios