Asianet Suvarna News Asianet Suvarna News

BMW ಕಾರಿಗಾಗಿ ವೃದ್ಧ ಮಾಲೀಕನನ್ನೇ ಕೊಂದ ಚಾಲಕ

 ಬಿಎಂಡ್ಬ್ಯು ಕಾರನ್ನು ಹೊಂದಿದ್ದ ವೃದ್ಧನನ್ನು ಆತನ ಕಾರು ಚಾಲಕನೇ ಹತ್ಯೆ ಮಾಡಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

west Bengal Driver kills elderly owner for BMW car akb
Author
First Published Sep 24, 2023, 4:41 PM IST

ಕೋಲ್ಕತ್ತಾ:  ಬಿಎಂಡ್ಬ್ಯು ಕಾರನ್ನು ಹೊಂದಿದ್ದ ವೃದ್ಧನನ್ನು ಆತನ ಕಾರು ಚಾಲಕನೇ ಹತ್ಯೆ ಮಾಡಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.  ಪ್ರವಾಸ ಹೋಗಲು BMW car ನೀಡುವಂತೆ ವೃದ್ಧನ ಕಾರು ಚಾಲಕ ತನ್ನ ಮಾಲೀಕನಾದ ವೃದ್ಧನ ಬಳಿ ಕೇಳಿದ್ದಾನೆ. ಆದರೆ ಮಾಲೀಕರು ಇದಕ್ಕೆ ಒಪ್ಪಿಲ್ಲ, ಇದರಿಂದ  ಕುಪಿತಗೊಂಡ ಕಾರು ಚಾಲಕ ಮಾಲೀಕನನ್ನೇ ಹತ್ಯೆ ಮಾಡಿದ್ದಾನೆ. 72 ವರ್ಷದ ಕಲ್ಯಾಣ ಭಟ್ಟಾಚಾರ್ಯ ತನ್ನ ಚಾಲಕನಿಂದಲೇ ಹತ್ಯೆಯಾದ ಮಾಲೀಕ. ಡುಮ್‌ ಡುಮ್ ಪ್ರದೇಶದ ಡೈಮಂಡ್ ಪ್ಲಾಜಾ ಮಾಲ್ ಬಳಿಯ ನಯಾಪಟ್ಟಿ ವಾಟರ್ ಟ್ಯಾಂಕ್ ಪಕ್ಕದಲ್ಲಿರುವ ಅವರ ಮನೆಯಲ್ಲಿ ವೃದ್ಧನ ಶವ ಪತ್ತೆಯಾಗಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಾನು ಕಾರನ್ನು ಮಾತ್ರ ತೆಗೆದುಕೊಂಡು ಹೋದೆ ಕೊಲೆ ಮಾಡಿಲ್ಲ ಎಂದು ಮೊದಲಿಗೆ ಕತೆ ಕಟ್ಟಲು ಯತ್ನಿಸಿದ್ದಾನೆ. ಆದರೆ ನಂತರ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ವೃದ್ಧನನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ಚಾಲಕನನ್ನು ಸೌರವ್ ಮಂಡಲ್ ಎಂದು ಗುರುತಿಸಲಾಗಿದೆ.  

ಅಪ್ಪನೋರ್ವನ ಸುದೀರ್ಘ ಹೋರಾಟಕ್ಕೆ ಸಿಕ್ತು ಜಯ: ಬಾಲಕನ ಕೊಂದ ಅಮ್ಮ ಚಿಕ್ ...

ಒಂಟಿಯಾಗಿ ವಾಸಿಸುತ್ತಿದ್ದ ಕಲ್ಯಾಣ್ ಭಟ್ಟಾಚಾರ್ಯ (Kalyan Bhattacharya) ಅವರಿಗೆ ತಮ್ಮ (BMW car)ಕಾರಿನ ಮೇಲೆ ಬರೀ ಮೋಹವಿತ್ತು.  ಹೀಗಾಗಿ ಅವರು ಕಾರಿಗೆ ಚಾಲಕನನ್ನು ಹುಡುಕಲು ಜಾಹೀರಾತು ನೀಡಿದ್ದರು. ಜಾಹೀರಾತು ನೋಡಿದ ಸೌರವ್ ಮಂಡಲ್ (Sourav Mondal) ಸೆಪ್ಟೆಂಬರ್ 10 ರಂದು ಕಲ್ಯಾಣ್ ಅವವರ ಬಳಿಗೆ ಬಂದಿದ್ದ. 

2024ರಲ್ಲಿ ಬಿಜೆಪಿ ವಿರುದ್ಧ ಮತ ಹಾಕಿ... ಹೀಗೆ ಹೇಳಿದ್ರ ಆಮೀರ್ ಖಾನ್: ವೀಡಿಯೋದ ಅಸಲಿಯತ್ತೇನು?

ಬ್ಯಾರಕ್‌ಪೋರ್ ಡೆಪ್ಯೂಟಿ ಕಮಿಷನರ್ (Barrackpore Deputy Commissioner) ಅಜಯ್ ಪ್ರಸಾದ್ (Ajay Prasad) ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಮೂಲತಃ ಸೌರವ್‌ ಮಂಡಲ್‌ ತನಗಾಗಿ ಬಿಎಂಡ್ಬ್ಯು ಕಾರನ್ನು ಪಡೆಯಲು ಬಯಸಿದ್ದ. ಹೀಗಾಗಿ ಆತ ಆರಂಭದಲ್ಲಿ  ಮಾಲೀಕರಿಗೆ ಕಾರನ್ನು ಚಲಾಯಿಸಲು ನೀಡುವಂತೆ ಕೇಳಿದ್ದ. ಆದರೆ ಮಾಲೀಕ ಇದಕ್ಕೆ ನಿರಾಕರಿಸಿದ್ದರು. ಹೀಗಾಗಿ ಆತ ಯಾರೂ ಇಲ್ಲದೇ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಭಟ್ಟಾಚಾರ್ಯರಿಗೆ ಕಿರುಕುಳ ನೀಡಲು ಶುರು ಮಾಡಿದ್ದ, ಕೊಲೆಯಾದ ದಿನದಂದು ಮಂಡಲ್‌ ಮನೆಯ ಕಾಂಪೌಂಡ್ ಹಾರಿ ಒಳಗೆ ಬಂದಿದ್ದ, ಈ ವೇಳೆ ಭಟ್ಟಾಚಾರ್ಯ ಅವರಿಗೂ ಸೌರವ್‌ಗೂ ಗಲಾಟೆ ಆಗಿದೆ. ಸೌರವ್‌ನನ್ನು ಭಟ್ಟಾಚಾರ್ಯ ನಿಂದಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆತ ಭಟ್ಟಾಚಾರ್ಯನ ಹತ್ಯೆ ಮಾಡಿ ಕಾರನ್ನು ಕೊಂಡೊಯ್ದಿದ್ದಾನೆ ಎಂದು ಡೆಪ್ಯೂಟಿ ಕಮೀಷನರ್ ಹೇಳಿದ್ದಾರೆ. 

ಮೂಲಗಳ ಪ್ರಕಾರ, ಭಟ್ಟಾಚಾರ್ಯರನ್ನು ಹತ್ಯೆ ಮಾಡಿದ ನಂತರ, ಚಾಲಕ ಸೌರವ್‌ ತನ್ನ ಮನೆಗೆ ಬೀಗ ಹಾಕಿ ತನ್ನ ಸ್ನೇಹಿತರೊಂದಿಗೆ BMW ಕಾರಿನಲ್ಲಿ ಬಂಗಾಳದ ದಿಘಾ ಪಟ್ಟಣಕ್ಕೆ (Digha town) ಪ್ರವಾಸ ಹೋಗಿದ್ದ. 

ರೈಲು ಬರಲು ಕೆಲ ಕ್ಷಣಗಳಿರುವಾಗ ರೈಲುಹಳಿಗೆ ಬಿದ್ದ ಅಂಧ ತಾಯಿಯ ಮಗ: ಆಮೇಲಾಗಿದ್ದು ಪವಾಡ..!

ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಬ್ಯಾರಕ್‌ಪೋರ್ (Barrackpore Barrackpore) ಕಮಿಷನರ್ ಅಲೋಕ್ ರಜೋರಿಯಾ( Alok Rajoria), ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹಿರಿಯ ನಾಗರಿಕರು (senior citizens) ನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ ಮತ್ತು ಈ ಘಟನೆಯು ಕಳವಳಕ್ಕೆ ಕಾರಣವಾಗಿದೆ.  ಅಧಿಕೃತ ಏಜೆನ್ಸಿಗಳಿಂದ ಮಾತ್ರ ಚಾಲಕರು ಮತ್ತು ಇತರ ಸಹಾಯಕರನ್ನು ನೇಮಿಸಿಕೊಳ್ಳುವ ಬಗ್ಗೆ ನಾವು ಜಾಗೃತಿ ಮೂಡಿಸಬೇಕಾಗಿದೆ. ಈಗಾಗಲೇ ಹಿರಿಯ ನಾಗರಿಕರನ್ನು ತಲುಪುವ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದು, ಈಗ ಅದನ್ನು ಮತ್ತಷ್ಟು ಹೆಚ್ಚಿಸುವುದಾಗಿ ತಿಳಿಸಿದರು.

ಕಣ್ಣರಿಯದಿದ್ದರೆ ಕರುಳರಿಯದೇ... 3 ವರ್ಷದ ನಂತರ ವೇಷ ಮರೆಸಿ ಬಂದ ಮಗ

ಹಿರಿಯ ನಾಗರಿಕರ ಮೇಲಿನ ಇಂತಹ ದಾಳಿಗಳು ಕಳವಳಕಾರಿಯಾಗಿದೆ. ವಿಶೇಷವಾಗಿ ಒಂಟಿಯಾಗಿ ವಾಸಿಸುವವರ ಮೇಲೆ. ಹಿರಿಯ ನಾಗರಿಕರು ಸೇವೆಗಳನ್ನು ಒದಗಿಸಲು ಏಜೆನ್ಸಿಗಳನ್ನು ಸುರಕ್ಷಿತವೆಂದು ಪ್ರಮಾಣೀಕರಿಸಲು ಸರ್ಕಾರವು ನೀತಿ ಪ್ರತಿಕ್ರಿಯೆಯನ್ನು ಹೊರತರಬೇಕು ಎಂದು ತಜ್ಞರು ಹೇಳುತ್ತಾರೆ.

Follow Us:
Download App:
  • android
  • ios