ನವದೆಹಲಿ(ನ. 04) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್ ವೊಂದು ತೇಜಸ್ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವುದೆಂತೂ ಸುಳ್ಳಲ್ಲ. ಸೆಮಿ ಬುಲೆಟ್ ರೈಲಿನಲ್ಲಿ ನೀಡಿದ್ದ ಆಹಾರ ಸೇವಿಸಿ 24 ಜನ ಆಸ್ಪತ್ರೆ ಸೇರಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹೇಳಿತ್ತು. ಕ್ಷಣಮಾತ್ರದಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗಿತ್ತು.

ಎರಡು ಪೋಟೋಗಳನ್ನು ಕೊಲೇಜ್ ಮಾಡಿ ಪೋಸ್ಟ್ ಹಾಕಲಾಗಿತ್ತು. ಇಂದು ಕಡೆ ಆಹಾರದ ಚಿತ್ರವಿದ್ದರೆ ಇನ್ನೊಂದು ಕಡೆ ತೇಜಸ್ ರೈಲಿನ ಚಿತ್ರ ಇತ್ತು.

ತೇಜಸ್ ರೈಲಿನಲ್ಲಿ ಆಹಾರ ಸೇವಿಸುವುದು ಸಾವಿಗೆ ಕಾರಣವಾಗಬಹುದು ಎಂದು ಸಾಲೊಂದನ್ನು ಬರೆಯಲಾಗಿತ್ತು. ಮೂರು ಜನರು ಐಸಿಯು ಘಟಕಕ್ಕೆ ಈ ಆಹಾರ ತಿಂದು ದಾಖಲಾಗಿದ್ದಾರೆ ಎಂದು ಎಚ್ಚರಿಕೆ ಸಹ ನೀಡಲಾಗಿತ್ತು.

ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ. ಕೆಲವರು ಆಸ್ಪತ್ರೆ ಸೇರಿರುವುದು ನಿಜವಾದರೂ ಅವರು ಅವರೇ ಸಿದ್ಧ ಮಾಡಿಕೊಂಡು ಬಂದಿದ್ದ ಆಹಾರ ತಿಂದು ಆಸ್ಪತ್ರೆ ಸೇರಿದ್ದಾರೆ. ಅಲ್ಲಿಗೆ ಸೋಶಿಯಲ್ ಮೀಡಿಯಾದಕಲ್ಲಿ ಫೇಕ್ ಸುದ್ದಿ ಹರಿದಾಡಿದೆ ಎಂಬುದು ಸಾಬೀತಾಗಿದೆ.

ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗಿದ್ದು ಆಹಾರ ನೀಡಿಕೆಯಲ್ಲಿ ಯಾವುದೆ ಸಮಸ್ಯೆಯಾಗಿಲ್ಲ. ಎಂದು ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ (ಐಆರ್ ಸಿಟಿಸಿ) ಮಹೀಂದ್ರ ಪ್ರತಾಪ್ ತಿಳಿಸಿದ್ದಾರೆ.