ಸೂರತ್(ಜ.21): ಇಷ್ಟವಿಲ್ಲದ ಮದುವೆಯ ದಿನ ವರನೋ ಅಥವಾ ವಧುವೋ ಮಂಟಪದಿಂದ ಓಡಿ ಹೋಗುವುದು ಸಾಮಾನ್ಯ. ಇಷ್ಟವಿಲ್ಲದವರೊಂದಿಗೆ ಬದುಕುವುದಕ್ಕಿಂತ ಇಷ್ಟಪಟ್ಟವರೊಂದಿಗೆ ಬದುಕುವ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ.

ಆದರೆ ಮದುವೆ ಫಿಕ್ಸ್ ಆಗಿ ಇನ್ನೇನು ಮದುವೆ ತಯಾರಿಯಲ್ಲಿ ನಿರತರಾಗಿದ್ದ ಕುಟುಂಬವೊಂದಕ್ಕೆ ವಿಚಿತ್ರ ಸಮಸ್ಯೆ ಎದುರಾಗಿದೆ. ಮದುವೆಯಾಗಬೇಕಾದ ವರನ ತಂದೆ ಹಾಗೂ ವಧುವಿನ ತಾಯಿ ಓಡಿ ಹೋಗಿದ್ದು, ಮದುವೆಯೇ ಮುರಿದು ಬಿದ್ದಿದೆ.

ಮದುವಣಗಿತ್ತಿಯಾದ ರಶ್ಮಿಕಾ, ಯಾರು ಆ ಹುಡುಗ?

ಹೌದು, ಸೂರತ್‌ನ ಕತಾರ್‌ಗಾಮ್'ನ 48 ವರ್ಷದ ರಾಖೇಶ್(ಹೆಸರು ಬದಲಾಯಿಸಲಾಗಿದೆ) ಹಾಗೂ ಅದೇ ಗ್ರಾಮದ 46 ವರ್ಷದ ಸ್ವಾತಿ(ಹೆಸರು ಬದಲಾಯಿಸಲಾಗಿದೆ) ಕಾಲೇಜು ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಆದರೆ ಬಳಿಕ ಬೇರೆ ಬೇರೆ ಮದುವೆಯಾದ ಇಬ್ಬರೂ, ಕತಾರ್‌ಗಾಮ್'ನಲ್ಲೇ ವಾಸಿಸುತ್ತಿದ್ದರು. ಇದೀಗ ರಾಖೇಶ್ ಪುತ್ರ ಹಾಗೂ ಸ್ವಾತಿ ಪುತ್ರಿ ಪರಸ್ಪರ ಪ್ರೀತಿಸಿ ವಿವಾಹಕ್ಕೆ ಮನೆಯವರ ಒಪ್ಪಿಗೆ ಪಡೆದಿದ್ದರು.

ಅದರಂತೆ ಎರಡೂ ಮನೆಯವರು ವಿವಾಹಕ್ಕೆ ಒಪ್ಪಿಗೆ ಸೂಚಿಸಿ ಮದುವೆ ತಯಾರಿಯಲ್ಲಿ ನಿರತಾಗಿದ್ದರು. ಆದರೆ ಕಳೆದ 10 ದಿನಗಳಿಂದ ರಾಖೇಶ್ ಹಾಗು ಸ್ವಾತಿ ಕಾಣಸಿಗದಾಗಿದ್ದು, ಈ ಕುರಿತು ವಿಚಾರಿಸಿದಾಗ ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವ ಕಾರಣ ಓಡಡಿ ಹೋಗಿದ್ದಾರೆ ಎಂಬುದು ಗೊತ್ತಾಗಿದೆ.

ಸದ್ಯ ನವಜೋಡಿಯ ವಿವಾಹ ಮುರಿದು ಬಿದ್ದಿದ್ದು, ಎರಡೂ ಕುಟುಂಬಗಳು ತಮ್ಮ ಪೋಷಕರು ಕಾಣೆಯಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ನೋಡಿ ಸಲಿಂಗಿ ಮದುವೆಯ ಫೋಟೋ ಶೂಟ್