ಶಾಲೆಗೆ ಲಂಚ್‌ಬಾಕ್ಸ್‌ನಲ್ಲಿ ನಾನ್‌ವೆಜ್ ತಂದ 4 ವರ್ಷದ ಬಾಲಕನ ಅಮಾನತು ಮಾಡಿದ ಪ್ರಾಂಶುಪಾಲ! ವಿಡಿಯೋ ವೈರಲ್

ಶಾಲೆಗೆ ಮಾಂಸಾಹಾರಿ ಊಟ ತಂದಿದ್ದಕ್ಕೆ ಶಾಲೆಯ ಪ್ರಾಂಶುಪಾಲ ನಾಲ್ಕು ವರ್ಷದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿನ ಹಿಲ್ಟನ್ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ. 

uttarapradesh school principal suspends nursery student for bringing non-veg food rav

ಉತ್ತರ ಪ್ರದೇಶ (ಸೆ.6): ಶಾಲೆಗೆ ಮಾಂಸಾಹಾರಿ ಊಟ ತಂದಿದ್ದಕ್ಕೆ ಶಾಲೆಯ ಪ್ರಾಂಶುಪಾಲ ನಾಲ್ಕು ವರ್ಷದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿನ ಹಿಲ್ಟನ್ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ. 

ಈ ಸಂಬಂಧ ಮಗನನ್ನು ಶಾಲೆಯಿಂದ ಹೊರಹಾಕಿದ್ದನ್ನು ಪ್ರಶ್ನಿಸಲು ಶಾಲೆಗೆ ಬಂದ ವಿದ್ಯಾರ್ಥಿ ಪೋಷಕರೊಂದಿಗೆ ಪ್ರಾಂಶುಪಾಲ ವಾಗ್ವಾದಕ್ಕಿಳಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಹಾರದ ವಿಚಾರದಲ್ಲಿ ತಾರತಮ್ಯ ಮಾಡಿರುವ ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಒತ್ತಾಯಿಸಿದ್ದಾರೆ.

ನಾವು ಒಗ್ಗಟ್ಟಾಗದಿದ್ದರೆ ನಮ್ಮನ್ನ ಕತ್ತರಿಸಲಾಗುತ್ತೆ: ದೇಶದ ಜನತೆಗೆ ಯೋಗಿ ಸಂದೇಶ

ವಿಡಿಯೋದಲ್ಲಿ ಏನಿದೆ?

ನಿನ್ನೆ ಶಿಕ್ಷಕರ ದಿನಾಚರಣೆಯಂದೇ ನಡೆದಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಯ್ತು.  ಶಾಲೆ ಮಾಂಸಾಹಾರ ತಂದ ಆರೋಪದ ಮೇಲೆ ನಾಲ್ಕು ವರ್ಷದ ನರ್ಸರಿ ವಿದ್ಯಾರ್ಥಿಯನ್ನು ಹೊರಹಾಕಿದ್ದ ಪ್ರಾಂಶುಪಾಲರು.  ಘಟನೆ ಬಳಿಕ ವಿದ್ಯಾರ್ಥಿ ತಾಯಿ ಶಾಲೆಗೆ ಭೇಟಿ ನೀಡಿ ಪ್ರಾಂಶುಪಾಲರನ್ನ ಪ್ರಶ್ನಿಸಿದ್ದಾರೆ ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

ನಿಮ್ಮ ಮಗ ನಿರಂತರವಾಗಿ ಶಾಲೆಗೆ ಮಾಂಸಾಹಾರ ತರುತ್ತಿದ್ದಾನೆ. ನಿಮ್ಮ ಮಗು ಶಾಲೆಯಲ್ಲಿ ಮಾಂಸಾಹಾರ ತಿನ್ನುವಂತೆ ಮಾಡುವ ಮೂಲಕ ಎಲ್ಲ ವಿದ್ಯಾರ್ಥಿಗಳನ್ನ ಮಾಂಸಾಹಾರ ತಿನ್ನಲು ಪ್ರೇರೇಪಿಸಲು ಬಯಸುತ್ತಿದ್ದೀರಿ ಆ ಮೂಲಕ ಎಲ್ಲರನ್ನು ಇಸ್ಲಾಂಗೆ ಪರಿವರ್ತಿಸಲು ಯತ್ನಿಸಿದ್ದೀರಿ, ಇನ್ಮುಂದೆ ನಾವು ಅವನಿಗೆ ಕಲಿಸುವುದಿಲ್ಲ, ಅದಕ್ಕಾಗಿ ಶಾಲೆಯಿಂದ ಹೊರಹಾಕಿದ್ದೇವೆ ಎನ್ನುತ್ತಿರುವ ಪ್ರಾಂಶುಪಾಲ. ಅದಕ್ಕೆ ತಾಯಿ ಆಕ್ಷೇಪ ವ್ಯಕ್ತಪಡಿಸಿದ ಮಹಿಳೆ ನಾಲ್ಕೈದು ವರ್ಷದ ನನ್ನ ಮಗ ಹಿಂದೂ-ಮುಸ್ಲಿಂ ಮತಾಂತರ ಇವೆಲ್ಲ ಹೇಗೆ ಅರ್ಥೈಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ 'ಈ ವಿಚಾರಗಳನ್ನು ನಿಮ್ಮ ಮಗು ಮನೆಯಲ್ಲಿ ಕಲಿಯುತ್ತದೆ ಎಂದಿದ್ದಾರೆ.

ಶಾಲೆಗೆ ಮಾಂಸಾಹಾರ ತರುವುದರಿಂದ ಇತರೆ ಮಕ್ಕಳು ಪೋಷಕರು ಆತಂಕಗೊಂಡಿದ್ದಾರೆ ಹೀಗಾಗಿ ನಾವು ರಿಜಿಸ್ಟ್ರಾರ್‌ನಿಂದ ಅವನ ಹೆಸರನ್ನು ತೆಗೆದುಹಾಕಿದ್ದೇವೆ. ನಾನ್‌ವೆಜ್ ತರುವ, ಮತಾಂತರ ಮಾಡುವವರಿಗೆ ನಾವು ಕಲಿಸುವುದಿಲ್ಲ ಎಂದಿರುವ ಪ್ರಾಂಶುಪಾಲ. 

ಶಾಲೆಯಲ್ಲಿ ಚಿಕ್ಕ ಮಕ್ಕಳು ಹಿಂದೂ-ಮುಸ್ಲಿಂ ಎಂದು ನಿತ್ಯ ಜಗಳ ಮಾಡುತ್ತಿದ್ದಾರೆ. ಮಗನಿಗೆ ಇತರೆ ವಿದ್ಯಾರ್ಥಿಗಳಿಂದ ಆಗಾಗ ಹಲ್ಲೆ, ತೊಂದರೆ ಮಾಡುತ್ತಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಮ್ರೋಹಿಯ ಮುಸ್ಲಿಂ ಸಮಿತಿಯು ಜಿಲ್ಲಾಧಿಕಾರಿಗೆ ಪತ್ರ ಬರೆದು, ಪ್ರಾಂಶುಪಾಲರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಅಮ್ರೋಹಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಭಾರತದಲ್ಲಿ ಹಸೀನಾ ತೆಪ್ಪಗಿರಬೇಕು: ಮುಹಮ್ಮದ್‌ ಯೂನಸ್‌ ಎಚ್ಚರಿಕೆ

Latest Videos
Follow Us:
Download App:
  • android
  • ios