ಹತ್ರಾಸ್(ಅ.06): ಉತ್ತರ ಪ್ರದೇಶ ಹತ್ರಾಸ್‌ನಲ್ಲಿ ನಡೆದ ಗ್ಯಾಂಗ್ ರೇಪ್ ವಿರುದ್ಧ ಇಡೀ ದೇಶವೇ ಆಕ್ರೋಶ ಹೊರಹಾಕುತ್ತಿದೆ. ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡುವಂತೆ ಆಗ್ರಹ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಹತ್ರಾಸ್ ಆರೋಪಿಗಳ ಪರ ವಾದಿಸಲು, ದೇಶದ ಪ್ರಖ್ಯಾತ ವಕೀಲ ಎಪಿ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ ಎಂದು ಇಂಡಿಯಾ ಟುಡೆ ಮಾಧ್ಯಮ ವರದಿ ಮಾಡಿದೆ.

ವಕೀಲ ಎಪಿ ಸಿಂಗ್ 2012ರಲ್ಲಿ ನಡೆದ ನಿರ್ಭಯಾ ರೇಪ್ ಪ್ರಕರಣದಲ್ಲಿ ಆರೋಪಿಗಳ ಪರ ವಾದಿಸಿದ್ದ ಲಾಯರ್.  ಬರೋಬ್ಬರಿ 8 ವರ್ಷಗಳ ಕಾಲ ನಿರ್ಭಯ ಆರೋಪಿಗಳ ಪರ ವಾದಿಸಿದ್ದರು. ಇಷ್ಟೇ ಅಲ್ಲ ಗಲ್ಲು ಶಿಕ್ಷೆಯನ್ನು ಹಲವು ಬಾರಿ ಮುಂದೂಡುವಲ್ಲಿಯೂ ಯಶಸ್ವಿಯಾಗಿದ್ದರು. ಇದೀಗ ಹತ್ರಾಸ್ ಆರೋಪಿಗಳ ಪರ ಎಪಿ ಸಿಂಗ್ ವಕಾಲತ್ತು ವಹಿಸಲಿದ್ದಾರೆ.

ರಜಪೂತ್ ಸಮುದಾಯದ ವಿರುದ್ಧ ಷ್ಯಡ್ಯಂತ್ರ ನಡೆಯುತ್ತಿದೆ. ಹೀಗಾಗಿ ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಆರೋಪಿಗಳ ಪರ ವಕಾಲತ್ತು ವಹಿಸಲು ವಕೀಲ ಎಪಿ ಸಿಂಗ್ ನೇಮಕ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಮಹಾಸಭಾ ಸಂಘ ಇದಕ್ಕಾಗಿ ಹಣ ಸಂಗ್ರಹ ಮಾಡಿದೆ.