WATCH | 500 ವರ್ಷಗಳ ಹಿಂದೆ ಬಾಬರ್ ಏನು ಮಾಡಿದ್ನೋ, ಅದೇ ಈಗ ಬಾಂಗ್ಲಾದೇಶ, ಸಂಭಾಲ್‌ನಲ್ಲಿ ನಡ್ತೀದೆ: ಸಿಎಂ ಯೋಗಿ ಕೆಂಡ!

ಉತ್ತರ ಪ್ರದೇಶದ ಸಂಭಾಲ್ ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೌನ ಮುರಿದಿದ್ದು, ಹಿಂಸಾಚಾರಕ್ಕೆ ಕಾರಣರಾದ ಅನ್ಯಸಮುದಾಯದ ನಡೆ ವಿರುದ್ಧ ಕಿಡಿಕಾರಿದ್ದಾರೆ.

UP CM Yogi Adityanath reacts about Sambhal violence at ayodhya rav

ಉತ್ತರ ಪ್ರದೇಶ (ಡಿ.5): ಉತ್ತರ ಪ್ರದೇಶದ ಸಂಭಾಲ್ ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೌನ ಮುರಿದಿದ್ದು, ಹಿಂಸಾಚಾರಕ್ಕೆ ಕಾರಣರಾದ ಅನ್ಯಸಮುದಾಯದ ನಡೆ ವಿರುದ್ಧ ಕಿಡಿಕಾರಿದ್ದಾರೆ.

ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, '500 ವರ್ಷಗಳ ಹಿಂದೆ ಬಾಬರ್ ಏನು ಮಾಡಿದ್ದರೋ ಅದು ಇಂದು ಬಾಂಗ್ಲಾದೇಶ ಮತ್ತು ಸಂಭಾಲ್‌ನಲ್ಲಿ ನಡೆಯುತ್ತಿದೆ. ಸಂಭಾಲ್ ಮತ್ತು ಬಾಂಗ್ಲಾದೇಶದ ಘಟನೆಗಳ ಸ್ವರೂಪ ಒಂದೇ ಆಗಿವೆ ಮತ್ತು ಎರಡೂ ಘಟನೆಗಳಲ್ಲಿ ಭಾಗಿಯಾಗಿರುವ ಜನರ ಡಿಎನ್‌ಎ ಒಂದೇ ಆಗಿದೆ. ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

'500 ವರ್ಷಗಳ ಹಿಂದೆ ಅಯೋಧ್ಯೆ ಕುಂಭದಲ್ಲಿ ಬಾಬರ್‌ ಮಾಡಿದ್ದನ್ನು ನೆನಪಿಸಿಕೊಳ್ಳಿ. ಸಂಭಾಲ್‌ನಲ್ಲಿ ಅದೇ ಸಂಭವಿಸಿದೆ, ಬಾಂಗ್ಲಾದೇಶದಲ್ಲೂ ಅದೇ ನಡೆಯುತ್ತಿದೆ. ಮೂರರ ಸ್ವಭಾವ ಮತ್ತು ಡಿಎನ್ ಎ ಒಂದೇ ಆಗಿದೆ. ಇದು ಬಾಂಗ್ಲಾದೇಶದಲ್ಲಿ ನಡೆಯುತ್ತಿದೆ ಎಂದು ಯಾರಾದರೂ ನಂಬಿದರೆ, ಅದೇ ಅಂಶಗಳು ನಿಮ್ಮನ್ನು ಎಚ್ಚರಿಸಲು ಇಲ್ಲಿ ಕಾಯುತ್ತಿವೆ. ಸಾಮಾಜಿಕ ಏಕತೆಯನ್ನು ಮುರಿಯಲು ಅವರು ಸಂಪೂರ್ಣ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದನ್ನ ಸುಳ್ಳು ಎನ್ನುವವರು, ಅವರನ್ನು ಓಲೈಕೆ ಮಾಡುವ ಕೆಲವರು ವಿದೇಶದಲ್ಲಿ ಸಾಕಷ್ಟು ಆಸ್ತಿ ಹೊಂದಿರುವವರು. ಇಲ್ಲಿ ಯಾವುದಾದರೂ ಬಿಕ್ಕಟ್ಟು ಬಂದರೆ ಓಡಿಹೋಗುತ್ತಾರೆ, ಬೇರೆಯವರನ್ನು ಇಲ್ಲಿ ಸಾಯಲು ಬಿಡುತ್ತಾರೆ ಎಂದರು.

Latest Videos
Follow Us:
Download App:
  • android
  • ios