ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪಾಪ್‌ಕಾರ್ನ್ ಮೇಲೆ ಮೂರು ರೀತಿಯ ಜಿಎಸ್‌ಟಿ ವಿಧಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಮತ್ತು ಟ್ರೋಲ್‌ಗಳು ಹರಿದಾಡುತ್ತಿವೆ.

ನವದೆಹಲಿ: ಶನಿವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ಸಭೆಯಲ್ಲಿ ಪಾಪ್‌ಕಾರ್ನ್ ಮೇಲೆ ಮೂರು ರೀತಿಯ ಜಿಎಸ್‌ಟಿ ವಿಧಿಸುವ ಕುರಿತು ನಿರ್ಣಯ ಕೈಗೊಳ್ಳಲಾಯ್ತು. ಈ ನಿರ್ಣಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪಾಪ್‌ಕಾರ್ನ್ ಫೋಟೋಗಳಿಗೆ ಹೊಂದಿಸಿ ಟ್ರೋಲ್ ಮಾಡಲಾಗುತ್ತಿದೆ.

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ವಿವಿಧ ರೀತಿಯ ಪಾಪ್‌ಕಾರ್ನ್ ಮೇಲೆ ಬೇರೆ ಬೇರೆ ತೆರಿಗೆ ವಿಧಿಸಲಾಗುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ. ಸಾಲ್ಟ್ ಆಂಡ್ ಮಸಾಲೆ ಅನ್‌ಪ್ಯಾಕಡ್ ರೆಡಿ ಟು ಈಟ್ ಪಾಪ್‌ಕಾರ್ನ್ ಮೇಲೆ ಶೇ.5, ಪ್ಯಾಕ್ ಮತ್ತು ಲೇಬಲ್ ಇರೋ ಪಾಪ್‌ಕಾರ್ನ್ ಮೇಲೆ ಶೇ.12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಕ್ಯಾರೆಮಲೈಸಡ್ ಪಾಪ್‌ಕಾರ್ನ್ ಮೇಲೆ ಶೇ.18ರಷ್ಟು ವಿಧಿಸಲಾಗುತ್ತದೆ. 

ಜಿಎಸ್‌ಟಿ ಕೌನ್ಸಿಲ್ ಈ ನಿರ್ಧಾರದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಬರಲು ಶುರುವಾಗಿದೆ. ನಮ್ಮ ಮೇಲೆಯೂ ಜಎಸ್‌ಟಿ ಅನ್ವಯವಾಗುತ್ತಿದ್ದು, ಇನ್ಮುಂದೆ ನಮಗೂ ಸಂಪೂರ್ಣ ಗೌರವ ಸಿಗಬೇಕು ಎಂದು ಪಾಪ್‌ಕಾರ್ನ್ ಹೇಳುವ ರೀತಿಯಲ್ಲಿ ಮೀಮ್ಸ್ ರಚಿಸಲಾಗುತ್ತಿದೆ. ಇನ್ಮುಂದೆ ಶ್ರೀಮಂತರು ಮಾತ್ರ ಥಿಯೇಟರ್‌ನಲ್ಲಿ ಪಾಪ್‌ಕಾರ್ನ್ ತಿನ್ನಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…