ಶ್ರೀನಗರ (ಫೆ.20): ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಶುಕ್ರವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ. ಮೃತ ಪೊಲೀಸರನ್ನು ಸೊಹೇಲ್‌ ಮತ್ತು ಮಹಮ್ಮದ್‌ ಯೂಸುಫ್‌ ಎಂದು ಗುರುತಿಸಲಾಗಿದೆ.

ಬಿಗಿಭದ್ರತೆ ಇರುವ ಇಲ್ಲಿನ ವಿಮಾನ ನಿಲ್ದಾಣ ರಸ್ತೆಯ ಭಗತ್‌ ಪ್ರದೇಶದಲ್ಲಿ ಇಬ್ಬರು ಪೊಲೀಸರು ಅಂಗಡಿಯೊಂದರಲ್ಲಿ ನಿಂತಿದ್ದ ವೇಳೆ ಆಗಮಿಸಿದ ಉಗ್ರ ಏಕಾಏಕಿ ತನ್ನ ಕೋಟ್‌ನೊಳಗಿಂದ ಗನ್‌ ತೆಗೆದು ತೀರಾ ಹತ್ತಿರದಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಉಗ್ರನ ಆಗಮನ ಮತ್ತು ದಾಳಿಯ ದೃಶ್ಯಗಳು ಸಿಸಿಟೀವಿಯೊಂದರಲ್ಲಿ ಸೆರೆಯಾಗಿದೆ.

ಹಿಂದು ಅಪ್ರಾಪ್ತೆಯನ್ನು ಅಪಹರಿಸಿದ ಪಾಕ್ ಪೊಲೀಸ್: ಮತಾಂತರಕ್ಕೆ ಕಿರುಕುಳ .

ಉಗ್ರರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದು ಕಳೆದ 3 ದಿನಗಳಲ್ಲಿ ನಡೆದ ಉಗ್ರರ 2ನೇ ದಾಳಿಯಾಗಿದೆ. ಬುಧವಾರ ರೆಸ್ಟೋರೆಂಟ್‌ ಉದ್ಯಮಿಯೊಬ್ಬರ ಪುತ್ರನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಪ್ರಕರಣ ಸಂಬಂಧ ಶುಕ್ರವಾರ ಮೂವರನ್ನು ಬಂಧಿಸಲಾಗಿದೆ