Asianet Suvarna News Asianet Suvarna News

ರಾಜ್ಯಸಭೆಯಲ್ಲಿ ಎನ್‌ಡಿಎ ಬಹುಮತ ಕುಸಿತ: ಮಸೂದೆ ಪಾಸು ಮಾಡೋದು ಇನ್ಮುಂದೆ ಸುಲಭ ಅಲ್ಲ

ನಾಲ್ವರು ನಾಮ ನಿರ್ದೇಶಿತ ಸದಸ್ಯರ ಅವಧಿ ಶನಿವಾರಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯಲ್ಲಿ ಇಳಿಕೆ ಆಗಿದೆ. 

Term of four members expires BJP lead NDA majority collapse in Rajya Sabha Passing the bill is not easy akb
Author
First Published Jul 15, 2024, 4:26 PM IST | Last Updated Jul 17, 2024, 12:48 PM IST

ನವದೆಹಲಿ:   ನಾಲ್ವರು ನಾಮ ನಿರ್ದೇಶಿತ ಸದಸ್ಯರ ಅವಧಿ ಶನಿವಾರಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ಬಿಜೆಪಿಯ ನಾಮನಿರ್ದೇಶಿತ ಸದಸ್ಯರಾದ ರಾಕೇಶ್ ಸಿನ್ಹಾ, ರಾಮ್ ಶಕಲ್, ಸೋನಲ್ ಮಾನ್‌ಸಿಂಗ್ ಹಾಗೂ ಮಹೇಶ್ ಜೇಠ್ಮಲಾನಿ ಅವರ ಅವಧಿ ಶನಿವಾರಕ್ಕೆ ಕೊನೆಯಾಗಿದೆ. ಹೀಗಾಗಿ ಸರ್ಕಾರ ಬಯಸಿದ ಮಸೂದೆ ಪಾಸಾಗಬೇಕೆಂದರೆ ಆಡಳಿತರೂಢ ಎನ್‌ಡಿಎ ಮಿತ್ರಪಕ್ಷಗಳಲ್ಲದೇ ತಟಸ್ಥವಾಗಿರುವ ಪಕ್ಷಗಳ ಸಂಸದರ ಬೆಂಬಲಕ್ಕಾಗಿ ಕಾಲು ಹಿಡಿಯುವುದು ಅಗತ್ಯವಾಗಲಿದೆ. 

ಯಾವುದೇ ಪಕ್ಷಕ್ಕೆ ಸೇರದ ( non-aligned members) ಇವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಡಳಿತ ಪಕ್ಷದ ಸಲಹೆಯಂತೆ ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿದ್ದರು. ಇವರು ನಂತರ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಹೀಗಾಗಿ ಇವರ ಅವಧಿ ಈಗ ಮುಕ್ತಾಯಗೊಂಡಿರುವುದರಿಂದ ಮೇಲ್ಮನೆ ಎನಿಸಿರುವ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 86ಕ್ಕೆ ಕುಸಿದಿದೆ. ಹಾಗೆಯೇ 250 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (National Democratic Alliance)ಸಂಖ್ಯೆ 101 ಇದ್ದು, ಇದು ಪ್ರಸ್ತುತ ಬಹುಮತಕ್ಕೆ ಬೇಕಿರುವ 113 ಸದಸ್ಯ ಬಲಕ್ಕಿಂತ ಕಡಿಮೆ ಇದೆ. 

ಅಸೆಂಬ್ಲಿ ಮಿನಿ ಸಮರದಲ್ಲಿ ಇಂಡಿಯಾಕೂಟಕ್ಕೆ ಜಯಭೇರಿ: 13 ಸ್ಥಾನಗಳ ಪೈಕಿ ಬಿಜೆಪಿಗೆ ಕೇವಲ 2

ಹಾಗಿದ್ದು, ಪ್ರಸ್ತುತ ರಾಜ್ಯಸಭೆಯ ಸದಸ್ಯ ಬಲ 225, ಇದರಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ 87 ಸದಸ್ಯರನ್ನು ಹೊಂದಿದೆ. ಅದರಲ್ಲಿ 26 ಸದಸ್ಯರು ಕಾಂಗ್ರೆಸಿಗರಾದರೆ, 13 ಟಿಎಂಸಿ ಸದಸ್ಯರು ಹಾಗೂ ಎಎಪಿ, ಡಿಎಂಕೆಯ ತಲಾ 10 ಸದಸ್ಯರಿದ್ದಾರೆ. 

ಇತ್ತ ರಾಜ್ಯಸಭೆಯಲ್ಲಿ ಬಿಜೆಪಿ 86 ಸದಸ್ಯರನ್ನು  ಹೊಂದಿರುವುದರಿಂದ ಸರ್ಕಾರವು ರಾಜ್ಯಸಭೆಯಲ್ಲಿ ಇನ್ನೇನಾದರೂ ಮಸೂದೆ ಪಾಸು ಮಾಡುವಂತಹ ಸಂದರ್ಭ ಬಂದರೆ ತನ್ನ ಮಾಜಿ ಮಿತ್ರಪಕ್ಷವಾದ ಎಐಎಡಿಎಂಕೆ ಮತ್ತು ಜಗನ್ ಮೋಹನ್ ರೆಡ್ಡಿಯವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಸೇರಿದಂತೆ ಎನ್‌ಡಿಎ ಜೊತೆ ಸೇರದ ಇತರ ಪಕ್ಷಗಳನ್ನು ಅವಲಂಬಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗಲಿದೆ. ತಮಿಳುನಾಡಿನಲ್ಲಿ ಸಕ್ರಿಯವಾಗಿರುವ  ಎಐಎಡಿಎಂಕೆ ನಾಲ್ಕು ಸಂಸದರನ್ನು ಹೊಂದಿದ್ದರೆ, ಜಗನ್ ಅವರ ವೈಎಸ್‌ಆರ್‌ಸಿಪಿ 11 ಸದಸ್ಯರನ್ನು ಹೊಂದಿದೆ. ಈ ಎರಡೂ ಪಕ್ಷಗಳು ಈ ಹಿಂದೆ ಆಡಳಿತ ಪಕ್ಷವನ್ನು ಬೆಂಬಲಿಸಿದ್ದವು. 

ಇನ್ನು ರಾಜ್ಯಸಭೆಯಲ್ಲಿ ಸದಸ್ಯರನ್ನು ಹೊಂದಿರುವ ಇನ್ನೊಂದು ಪಾರ್ಟಿ ಎಂದರೆ ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರ ಬಿಜೆಡಿ ಪಾರ್ಟಿ, ಇದು ರಾಜ್ಯಸಭೆಯಲ್ಲಿ 9 ಸದಸ್ಯರನ್ನು ಹೊಂದಿದೆ. ಬಿಜೆಡಿ ಯಾವಾಗಲೂ ಬಿಜೆಪಿಯನ್ನು ಬೆಂಬಲಿಸುತ್ತಿತ್ತು. ಆದರೆ ಒಡಿಶಾದಲ್ಲಿ ತಮ್ಮ ಪಕ್ಷವನ್ನು ಬಿಜೆಪಿ ಸೋಲಿಸಿದ ನಂತರ ಬಿಜೆಡಿ ನವೀನ್ ಪಟ್ನಾಯಕ್ ಅವರು ತಾನು ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ 50 ಸಾವಿರ ಕೋಟಿ ನೀಡುವಂತೆ ಕಿಂಗ್‌ ಮೇಕರ್‌ಗಳ ಪಟ್ಟು

ಇಂತಹ ಸ್ಥಿತಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಜೊತೆ ಸೇರದೇ ತಟಸ್ಥವಾಗಿರುವ ತೆಲಂಗಾಣದ ಬಿಆರ್‌ಎಸ್ ಪಕ್ಷವೂ ರಾಜ್ಯಸಭೆಯಲ್ಲಿ 4 ಸದಸ್ಯರನ್ನು ಹೊಂದಿದೆ. ಹಾಗೆಯೇ ಸ್ವತಂತ್ರ ಸಂಸದರು ಕೂಡ ಮಹತ್ವದ ಪಾತ್ರ ವಹಿಸಲಿದ್ದಾರೆ. ರಾಜ್ಯಸಭೆಯ ಒಟ್ಟು ಸದಸ್ಯಬಲ 250, ಅದರಲ್ಲಿ 238 ಸದಸ್ಯರನ್ನು ವೋಟು ಹಾಕಿ ಆಯ್ಕೆ ಮಾಡಲಾಗುತ್ತದೆ. ಉಳಿದ 12 ಸದಸ್ಯರನ್ನು ರಾಷ್ಟ್ರಪತಿಗಳು ನಾಮ ನಿರ್ದೇಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇವರೆಲ್ಲರೂ ಸಾಮಾನ್ಯವಾಗಿ ಆಡಳಿತ ಪಕ್ಷವನ್ನು ಬೆಂಬಲಿಸುವ ರೂಢಿ ಇದೆ. 

Latest Videos
Follow Us:
Download App:
  • android
  • ios