ವಾರಂಗಲ್‌[ಫೆ.13]: ತನ್ನನ್ನೇ ನಂಬಿ ಬಂದಿದ್ದ 24 ವರ್ಷದ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ತನ್ನ 8 ಮಂದಿ ಸ್ನೇಹಿತರ ಜೊತೆಗೂಡಿ ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ತೆಲಂಗಾಣದ ಮೆಹಬೂಬಾಬಾದ್‌ ಜಿಲ್ಲೆಯಲ್ಲಿ ನಡೆದಿದೆ.

ಮದ್ರಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಅಪಹರಿಸಿ ಅತ್ಯಾಚಾರ ಯತ್ನ

ಈ ಸಂಬಂಧ ಮಹಿಳೆ ನೀಡಿದ ದೂರನ್ನು ಆಧರಿಸಿ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಇನೊಬ್ಬನಿಗಾಗಿ ಹುಡುಕಾಟ ಮುಂದುವರೆದಿದೆ. ನಾಲ್ಕು ದಿನಗಳ ಹಿಂದಷ್ಟೇ ಸಂತ್ರಸ್ತ ಮಹಿಳೆ ಹೈದ್ರಾಬಾದ್‌ನಿಂದ ಮೆಹಬೂಬಾಬಾದ್‌ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಳು.

ಅಲ್ಲಿಂದ ಸಮೀಪದ ಗ್ರಾಮವೊಂದಕ್ಕೆ ತೆರಳಲು ಆಕೆ ಬಳಿ ಹಣ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಪರಿಚಯಿಸ್ಥರೊಬ್ಬರಿಗೆ ಕರೆ ಮಾಡಿದ್ದಳು. ಈ ವೇಳೆ ಆತ ಆಕೆಯನ್ನು ಮನೆಗೆ ಆಹ್ವಾನಿಸಿದ್ದ. ಆತನನ್ನು ನಂಬಿ ಮನೆಗೆ ಹೋದ ವೇಳೆ, ಆತ ತನ್ನ 8 ಸ್ನೇಹಿತರೊಡಗೂಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ.

ಮಕ್ಕಳ ಅತ್ಯಾಚಾರಿಗೆ ಸಾರ್ವಜನಿಕ ಗಲ್ಲು ಶಿಕ್ಷೆ, ಮಸೂದೆ ಪಾಸ್!