Asianet Suvarna News Asianet Suvarna News

ನೀಟ್‌ ವೇಳೆ ಒಳವಸ್ತ್ರಕ್ಕೆ ಕೊಕ್‌: ಎದೆ ಮುಚ್ಚಿಕೊಳ್ಳಲು ಕೂದಲು ಹಾಕಿಕೊಂಡೆವು: ಅಳುತ್ತಲೇ ವಿವರಿಸಿದ ವಿದ್ಯಾರ್ಥಿನಿ

ಬ್ರಾ ಬಿಚ್ಚಿಸಿದ್ದರು ಎನ್ನಲಾದ ಮೂವರು ಮಹಿಳೆಯರು ಸೇರಿ ಐವರು ಪರೀಕ್ಷಾ ಸಿಬ್ಬಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

Take Bra In Hand And Leave Kerala Girl Describes NEET Exam Horror pod
Author
Bangalore, First Published Jul 20, 2022, 9:18 AM IST

ತಿರುವನಂತಪುರ(ಜು.20): ಕಳೆದ ಭಾನುವಾರ ನಡೆದ ನೀಟ್‌ ಪರೀಕ್ಷೆ ವೇಳೆ ಕೇರಳದ ಕೊಲ್ಲಂ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಮಹಿಳೆಯರ ಒಳವಸ್ತ್ರವನ್ನು (ಬ್ರಾ) ಬಲವಂತವಾಗಿ ಬಿಚ್ಚಿಸಿ, ಪರೀಕ್ಷೆಗೆ ಕಳಿಸಿದ್ದರು ಎಂಬ ಪ್ರಕರಣ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಪರೀಕ್ಷಾ ಕೇಂದ್ರದ ಮೇಲೆ ಮಂಗಳವಾರ ಉದ್ರಿಕ್ತರು ದಾಳಿ ನಡೆಸಿ, ಪೀಠೋಪಕರಣ ಹಾಗೂ ಇತರ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಇನ್ನೊಂದೆಡೆ ಬ್ರಾ ಬಿಚ್ಚಿಸಿದ್ದರು ಎನ್ನಲಾದ ಮೂವರು ಮಹಿಳೆಯರು ಸೇರಿ ಐವರು ಪರೀಕ್ಷಾ ಸಿಬ್ಬಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

‘ಪರೀಕ್ಷೆಯ ನಿಯಮ ಎಂಬ ನೆಪ ಹೇಳಿ ಒಳವಸ್ತ್ರ ಬಿಚ್ಚಿಸಿ ಹೊರಗಿನ ಕೋಣೆಯಲ್ಲಿ ಇಡುವಂತೆ ಸೂಚಿಸಿದರು. ಒಳವಸ್ತ್ರ ಇಲ್ಲದೇ ಪರೀಕ್ಷೆ ಬರೆದೆವು’ ಗಂಭೀರ ಆರೋಪ ಮಾಡಿದ್ದ 17 ವರ್ಷದ ಬಾಲಕಿ ನೀಡಿದ ಹೇಳಿಕೆ ಅಧರಿಸಿ ಕೊಲ್ಲಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅದರನ್ವಯ ಬ್ರಾ ಬಿಚ್ಚಿಸಿದ ಅಧಿಕಾರಿಗಳ ವಿರುದ್ಧ ಮಹಿಳೆಯ ಮಾನಭಂಗ (ಸೆಕ್ಷನ್‌ 354), ಮಹಿಳೆಯ ಮಾನಭಂಗ ಮಾಡುವ ಪದ ಬಳಕೆಯ (ಸೆಕ್ಷನ್‌ 509) ಗಂಭೀರ ಆರೋಪ ಹೊರಿಸಲಾಗಿದೆ.

ಒಳಉಡುಪು ತೆಗೆದರೆ ಮಾತ್ರ ಪರೀಕ್ಷೆಗೆ ಅನುಮತಿ, ಭಾರಿ ವಿವಾದ ಸೃಷ್ಟಿಸಿದ NEET Exam!

ಭಯಾನಕ ಅನುಭವ ವಿವರಿಸಿದ ವಿದ್ಯಾರ್ಥಿನಿ

ಭಾನುವಾರದಂದು NEET ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಮೊದಲು ತನ್ನ ಬ್ರಾ ತೆಗೆಯುವಂತೆ ಒತ್ತಾಯಿಸಿದ ಅನೇಕರಲ್ಲಿ ಒಬ್ಬಳು, ಮಂಗಳವಾರ ತನ್ನ ಎದೆಯನ್ನು ಮುಚ್ಚಿಕೊಳ್ಳಲು ಕೂದಲನ್ನು ಬಳಸಿ ಪರೀಕ್ಷೆಗೆ ಕುಳಿತಾಗ ತನಗೆ ಆದ ಅವಮಾನವನ್ನು ವಿವರಿಸಿದ್ದಾಳೆ. ಇದು "ಅತ್ಯಂತ ಕೆಟ್ಟ ಅನುಭವ" ಎಂದು 17 ವರ್ಷದ ಯುವತಿ ಹೇಳಿದಳು, ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರವ್ಯಾಪಿ ಪರೀಕ್ಷೆಯಾದ NEET (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಗಾಗಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಘಟನೆ ಹಂಚಿಕೊಂಡಾಗ ಉಸಿರುಗಟ್ಟಿ ಅತ್ತಿದ್ದಾರೆ.

"ಅವರು ನನಗೆ ಕರೆ ಮಾಡಿದರು ಮತ್ತು ಸ್ಕ್ಯಾನಿಂಗ್ ಇದೆ ಎಂದು ಹೇಳಿದರು. ಅವರು ಸ್ಕ್ಯಾನ್ ಮಾಡಿದ ನಂತರ ನಮ್ಮನ್ನು ಬಿಡುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ಅವರು ನಮ್ಮನ್ನು ಎರಡು ಸರತಿಯಲ್ಲಿ ನಿಲ್ಲುವಂತೆ ಮಾಡಿದರು - ಒಂದು ಲೋಹದ ಹುಕ್‌ಗಳಿಲ್ಲದ ಬ್ರಾಗಳನ್ನು ಧರಿಸಿರುವ ಹುಡುಗಿಯರಿಗೆ, ಮತ್ತು ಇನ್ನೊಂದು ಸಾಲು ...," ಅವಳು ಹೇಳಿದಳು. .

"ಅವರು ನನ್ನ ಬಳಿ, ನೀವು ಲೋಹದ ಹುಕ್‌ ಇರುವ ಒಳ ಉಡುಪುಗಳನ್ನು ಧರಿಸಿದ್ದೀರಾ? ಎಂದು ಪ್ರಶ್ನಿಸಿದರು ನಾನು ಹೌದು ಎಂದು ಹೇಳಿದೆ, ಆದ್ದರಿಂದ ಆ ಸಾಲಿಗೆ ಸೇರಲು ಕೇಳಲಾಯಿತು. ಆದರೆ ಅಲ್ಲೇನಾಗುತ್ತಿದೆ ಎಂದು ನನಗೆ ಅರ್ಥವಾಗಿರಲಿಲ್ಲ ಎಂದಿದ್ದಾಳೆ.

"ನಮ್ಮ ಬ್ರಾ ತೆಗೆದು ಮೇಜಿನ ಮೇಲೆ ಇಡಲು ಅವರು ಕೇಳಿದರು. ಎಲ್ಲಾ ಬ್ರಾಗಳು ಒಟ್ಟಿಗೆ ಜೋಡಿಸಲ್ಪಟ್ಟಿದ್ದವು. ನಾವು ಹಿಂತಿರುಗಿದಾಗ ನಮ್ಮದೇ ಒಳವಸ್ತ್ರ ಮರಳಿ ಸಿಗುತ್ತದೋ ಎಂದು ನಮಗೆ ತಿಳಿದಿರಲಿಲ್ಲ. ನಾವು ಹಿಂತಿರುಗಿದಾಗ ಅಲ್ಲಿ ವಿದ್ಯಾರ್ಥಿಗಳು ಗುಂಪುಗೂಡಿದ್ದರು. ಹೀಗಾಗಿ ನಮ್ಮ ಒಳವಸ್ತ್ರ ಪಡೆಯುವುದು ಹರಸಾಹಸವಾಗಿತ್ತು. , ಆದರೆ ನನಗೆ ನನ್ನದು ಸಿಕ್ಕಿತು," ಎಂದು ಅವರು ಹೇಳಿದರು. ಈ ವೇಳೆ ಕೆಲವು ಹುಡುಗಿಯರು ನಾಚಿಕೆಯಿಂದ ಅಳುತ್ತಿದ್ದರು. ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು, "ನೀವು ಯಾಕೆ ಅಳುತ್ತಿದ್ದಿರಿ?" ಎಂದು ಗದರಿದ್ದರು ಎಂದೂ ತಿಳಿಸಿದ್ದಾಳೆ.

ಅಲ್ಲದೇ ಅವರು ನಿಮ್ಮ ಬ್ರಾವನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ಬಿಡಿ, ಅವುಗಳನ್ನು ಧರಿಸುವ ಅಗತ್ಯವಿಲ್ಲ ಎಂದು ಹೇಳಿದರು. ಅದನ್ನು ಕೇಳಿ ನಮಗೆ ತುಂಬಾ ಮುಜುಗರವಾಯಿತು. ಆದರೆ ಎಲ್ಲರೂ ಬದಲಾಯಿಸಲು ಕಾಯುತ್ತಿದ್ದರು. ಕತ್ತಲೆಯಾಗಿತ್ತು ಮತ್ತು ಬದಲಾಯಿಸಲು ಸ್ಥಳವಿರಲಿಲ್ಲ. ಇದು ಭಯಾನಕ ಅನುಭವವಾಗಿದೆ. ನಾವು ಪರೀಕ್ಷೆ ಬರೆಯುವಾಗ ಶಾಲು ಹೊದ್ದುಕೊಳ್ಳಲು ಇಲ್ಲದ ಕಾರಣ ತಲೆಗೂದಲು ಮುಂದಕ್ಕೆಳೆದು ಕುಳಿತಿದ್ದೆವು. ಹುಡುಗರೂ ಕೂಡಾ ಪರೀಕ್ಷಾ ಕೇಂದ್ರದಲ್ಲಿದ್ದ ಕಾರಣ ಪರಿಸ್ಥಿತಿ ಬಹಳ ಕಷ್ಟಕರ ಮತ್ತು ಅನಾನುಕೂಲವಾಗಿತ್ತು" ಎಂದು ಬಾಲಕಿ ಆರೋಪಿಸಿದ್ದಾರೆ.

20 ಲಕ್ಷ ಕೊಟ್ರೆ ನೀಟ್‌ ಪಾಸ್‌ ಮಾಡಿಸುವ ದಂಧೆ!

17 ವರ್ಷದ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದಾಗ ಆಘಾತಕಾರಿ ಘಟನೆ ಹೊರಬಿದ್ದಿದೆ. ಪರೀಕ್ಷೆ ಬರೆಯುವ ಮುನ್ನ ಶೇ.90ರಷ್ಟು ಹೆಣ್ಣುಮಕ್ಕಳು ತಮ್ಮ ಒಳವಸ್ತ್ರ ತೆಗೆದಿರಿಸಿದ್ದರು’ ಎಂದು ಗದ್ಗದಿತರಾದರು.

ಇನ್ನು ಚೆಕ್ಕಿಂಗ್ ವೇಳೆ ಸಿಬ್ಬಂದಿ "ನಿಮಗೆ ನಿಮ್ಮ ಭವಿಷ್ಯಕ್ಕಿಂತ ಒಳಉಡುಪು ದೊಡ್ಡದಾಗಿದೆಯೇ? ಅದನ್ನು ತೆಗೆದುಹಾಕಿ ಮತ್ತು ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದಿದ್ದಾರೆ ಎಂದು ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವಿಚಾರವಾಗಿ ಮಂಗಳವಾರ ಮತ್ತೆ ಎರಡು ದೂರುಗಳು ದಾಖಲಾಗಿವೆ.

ತನಿಖೆಗೆ ಟೆಸ್ಟಿಂಗ್‌ ಏಜೆನ್ಸಿ ಆದೇಶ:

ಈ ನಡುವೆ, ‘ಮೊದಲು ಇಂಥ ಘಟನೆ ನಡೆದಿಲ್ಲ. ಸುಳ್ಳು’ ಎಂದಿದ್ದ ನೀಟ್‌ ಪರೀಕ್ಷೆ ಉಸ್ತುವಾರಿಯಾದ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ, ಸಂಜೆ ಮೆತ್ತಗಾಗಿದ್ದು, ತನಿಖೆಗೆ ಆದೇಶಿಸಿದೆ.

ಆರೋಪ ಸುಳ್ಳು- ಟೆಸ್ಟಿಂಗ್‌ ಏಜೆನ್ಸಿ:

‘ಆದರೆ ವಿದ್ಯಾರ್ಥಿನಿ ಮಾಡಿದ ಆರೋಪವನ್ನು ಕಪೋಲಕಲ್ಪಿತ. ಕೆಟ್ಟಉದ್ದೇಶದಿಂದ ಇಂಥದ್ದೊಂದು ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳು ಹೀಗೆ ನಡೆದುಕೊಂಡಿದ್ದಾರೆ ಎಂಬ ಯಾವ ದೂರೂ ನಮ್ಮ ಬಳಿ ಸಲ್ಲಿಕೆಯಾಗಿಲ್ಲ’ ಎಂದು ನೀಟ್‌ ಪರೀಕ್ಷೆ ಆಯೋಜಿಸಿದ್ದ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಏನಾಗಿತ್ತು:

ಭಾನುವಾರ ನಡೆದ ಪರೀಕ್ಷೆ ವೇಳೆ ಅಯೂರ್‌ ಕೇಂದ್ರದಲ್ಲಿ ಲೋಹಶೋಧಕ ಯಂತ್ರದಲ್ಲಿ ವಿದ್ಯಾರ್ಥಿಗಳು ಭದ್ರತಾ ತಪಾಸಣೆ ಭಾಗವಾಗಿ ಹಾದುಹೋಗುವಾಗ, 17 ವರ್ಷದ ವಿದ್ಯಾರ್ಥಿನಿ ಧರಿಸಿದ್ದ ಬ್ರಾದಲ್ಲಿದ್ದ ಸ್ಟೀಲ್‌ ಬಟನ್‌ ಇದ್ದ ಕಾರಣ, ಮಷಿನ್‌ ಸದ್ದು ಮಾಡಿತ್ತು. ಈ ವೇಳೆ ಅಧಿಕಾರಿಗಳು, ವಿದ್ಯಾರ್ಥಿನಿಗೆ ನಿನಗೆ ಪರೀಕ್ಷೆ ಮುಖ್ಯವೋ? ಒಳವಸ್ತ್ರವೋ? ಸುಮ್ಮನೆ ನಮ್ಮ ಸಮಯ ಹಾಳು ಮಾಡದೇ ಬ್ರಾ ತೆಗೆದಿಟ್ಟು ಒಳಗೆ ಹೋಗು ಎಂದು ಗದರಿಸಿದ್ದರು. ಇದೇ ರೀತಿ ನೂರಾರು ಮಹಿಳೆಯರ ಒಳವಸ್ತ್ರ ತೆಗೆದು ಹೊರಗಿನ ಕೊಠಡಿಯಲ್ಲಿ ಇರಿಸಲಾಗಿತ್ತು. ಇದರಿಂದ ಬಹುತೇಕರು ಅಘಾತಕ್ಕೆ ಒಳಗಾಗಿದ್ದರು ಎಂದು ವಿದ್ಯಾರ್ಥಿನಿಯ ಪೋಷಕರು ಭಾನುವಾರ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು.ಷ

Follow Us:
Download App:
  • android
  • ios