Asianet Suvarna News Asianet Suvarna News

ಎನ್‌ಕೌಂಟರ್ ಪೊಲೀಸರಿಗೆ ಸಂಕಷ್ಟ: ತನಿಖೆಗೆ ಸುಪ್ರೀಂ ಸಮ್ಮತಿ!

ದಿಶಾ ಹತ್ಯಾಚಾರಿಗಳ ಎನ್’ಕೌಂಟರ್ ಪೊಲೀಸರಿಗೆ ಸಂಕಷ್ಟ| ಸ್ವತಂತ್ರ್ಯ ತನಿಖೆಗೆ ಸುಪ್ರೀಂಕೋರ್ಟ್ ಸಮ್ಮತಿ| ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸ್ವತಂತ್ರ್ಯ ತನಿಖೆಗೆ ಆದೇಶ| 6 ತಿಂಗಳಲ್ಲಿ ತನಿಖಾ ವರದಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಆದೇಶ| ಪೊಲೀಸ್ ಎನ್’ಕೌಂಟರ್ ಪ್ರಶ್ನಿಸಿ ಜಿಎಸ್ ಮಣಿ ಎಂಬ ವಕೀಲ ಸಲ್ಲಿಸಿದ್ದ ಅರ್ಜಿ| 

Supreme Court Probe Into Encounter Of Telangana Rape-Murder Accused By Police
Author
Bengaluru, First Published Dec 12, 2019, 1:10 PM IST

ಹೈದರಾಬಾದ್(ಡಿ.12): ದಿಶಾ ಹತ್ಯಾಚಾರಿಗಳ ಎನ್’ಕೌಂಟರ್ ಮಾಡಿದ್ದ ಸೈಬರಾಬಾದ್ ಪೊಲೀಸರಿಗೆ ಇದೀಗ ಕಾನೂನು ಸಂಕಷ್ಟ ಶುರುವಾಗಿದೆ.

"

ನಾಲ್ವರು ಅತ್ಯಾಚಾರ ಆರೋಪಿಗಳ ಎನ್’ಕೌಂಟರ್ ಕುರಿತು ಸ್ವತಂತ್ರ್ಯ ತನಿಖೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದ್ದು, ನಿವೃತ್ತ ನ್ಯಾಯಮೂರ್ತಿ ವಿಎಸ್ ಸಿರಪುರ್ಕರ್ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದೆ.

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಪೊಲೀಸ್ ಎನ್’ಕೌಂಟರ್ ಪ್ರಶ್ನಿಸಿ ಜಿ.ಎಸ್. ಮಣಿ ಎಂಬ ವಕೀಲ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸ್ವತಂತ್ರ್ಯ ತನಿಖೆಗೆ ಸಮ್ಮತಿ ಸೂಚಿಸಿದೆ.

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿಎಸ್ ಸಿರಪುರ್ಕರ್ ನೇತೃತ್ವದಲ್ಲಿ ತನಿಖೆ ಮಾಡಿ 6 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ದೆಹಲಿಯಿಂದಲೇ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸ್ವತಂತ್ರ್ಯ ತನಿಖೆ ನಡೆಯಲಿ ಎಂದು ಆದೇಶ ನೀಡಿದರು.

ಎನ್‌ಕೌಂಟರ್: ಡಿಸೆಂಬರ್ 9ರವರೆಗೆ ಅಂತ್ಯಕ್ರಿಯೆ ಇಲ್ಲ, ಏನು ಕಾರಣ?

ಡಿಸೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios