ನವದೆಹಲಿ[ಡಿ.07]: ಹಲವು ದಾಖಲೆಗಳ ಖ್ಯಾತಿಯ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ, ಪ್ರವಾಸಿಗರ ಭೇಟಿಯಲ್ಲಿ ಅಮೆರಿಕದ ಸ್ವಾತಂತ್ರ್ಯ ಪ್ರತಿಮೆಯನ್ನು ಹಿಂದಿಕ್ಕಿ ಮತ್ತೊಂದು ದಾಖಲೆ ಬರೆದಿದೆ. ಗುಜರಾತ್‌ನಲ್ಲಿರುವ ಈ ಪ್ರತಿಮೆಗೆ ದಿನ ನಿತ್ಯ 15 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

2018 ನ.1 ರಿಂದ 2019 ಅ. 31ರ ವರೆಗೆ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.74ರಷ್ಟು ಹೆಚ್ಚಳವಾಗಿದ್ದು, ಪ್ರತಿದಿನ ಸರಾಸರಿ 15,036 ಮಂದಿ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟುಹೆಚ್ಚಳವಾಗುತ್ತಿದ್ದು, 22430 ಮಂದಿ ಭೇಟಿ ನೀಡುತ್ತಿದ್ದಾರೆ.

ನ್ಯೂಯಾರ್ಕ್ನಲ್ಲಿರುವ ಸ್ವಾತಂತ್ರ ಪ್ರತಿಮೆಗೆ ಪ್ರತಿನಿತ್ಯ 10 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ.