Asianet Suvarna News Asianet Suvarna News

ಕಂಚಿಯ ವೇದ ಶಾಲೆಗೆ ಪೂರ್ವಜರ ಮನೆ ನೀಡಿದ ಗಾಯಕ ಎಸ್‌ಪಿಬಿ!

ಕಂಚಿಯ ಸಂಸ್ಕೃತ, ವೇದ ಶಾಲೆಗೆ ಪೂರ್ವಜರ ಮನೆ ನೀಡಿದ ಗಾಯಕ ಎಸ್‌ಪಿಬಿ|  ಆಂಧ್ರಪ್ರದೇಶದ ನೆಲ್ಲೂರಿನಲ್ಲಿದ್ದ ತಮ್ಮ ಪೂರ್ವಜರ ಆಸ್ತಿ

Singer S P Balasubrahmanyam donates ancestral home in Nellore to Kanchi math
Author
Bangalore, First Published Feb 13, 2020, 12:16 PM IST

ಅಮರಾವತಿ[ಫೆ.13]: ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರು ಆಂಧ್ರಪ್ರದೇಶದ ನೆಲ್ಲೂರಿನಲ್ಲಿದ್ದ ತಮ್ಮ ಪೂರ್ವಜರ ಆಸ್ತಿಯನ್ನು ಕಂಚಿಕಾಮಕೋಟಿ ಪೀಠಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಸಂಸ್ಕೃತ ಮತ್ತು ವೇದಾಧ್ಯಯನ ಶಾಲೆ ನಡೆಸುವ ಕಂಚಿ ಮಠದ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ತಮ್ಮ ಹಿರಿಯರ ಮನೆಯನ್ನು ಹಸ್ತಾಂತರಿಸಿದರು.

ಕನ್ನಡ, ತಮಿಳು, ತೆಲಗು ಹಾಗೂ ಹಿಂದಿ ಭಾಷೆಗಳ ಹಲವು ಹಾಡುಗಳಿಗೆ ಧ್ವನಿಯಾಗಿರುವ ಗಾಯಕ ಎಸ್‌ಪಿಬಿ ಅವರಿಗೆ 6 ರಾಷ್ಟ್ರೀಯ ಪುರಸ್ಕಾರಗಳು ಹರಸಿಬಂದಿವೆ. ಸದ್ಯ, ಚೆನ್ನೈನಲ್ಲಿ ವಾಸವಾಗಿರುವ ಎಸ್‌ಪಿಬಿ ಅವರ ನೆಲ್ಲೂರು ನಿವಾಸಕ್ಕೆ ಹಲವು ವರ್ಷಗಳ ಕಾಲ ಬೀಗ ಜಡಿಯಲಾಗಿತ್ತು.

ಕೆಲ ವಾಣಿಜ್ಯ ಉದ್ಯಮಕ್ಕಾಗಿ ಬಳಸಿಕೊಳ್ಳಲು ಮನೆಯನ್ನು ನೀಡುವಂತೆ ಕೋರಿದ್ದರೂ, ಈ ಆಫರ್‌ಗಳನ್ನು ಎಸ್‌ಪಿಬಿ ನಿರಾಕರಿಸುತ್ತಾ ಬಂದಿದ್ದರು.

Follow Us:
Download App:
  • android
  • ios