ಲಖ​ನೌ(ಫೆ.24): ಪ್ರಿಯ​ಕ​ರನ ಜೊತೆ​ಗಿನ ಮದು​ವೆ​ಗಾಗಿ ಮತ್ತು ಭರಿ​ಸುವ ಔಷಧಿ ಬೆರೆ​ಸಿದ ಹಾಲು ಕುಡಿಸಿ 7 ಮಂದಿ ಕುಟುಂಬ ಸದ​ಸ್ಯ​ರ ಹತ್ಯೆ​ಗೈ​ದಿದ್ದ ಉತ್ತರ ಪ್ರದೇ​ಶದ ಮಹಿಳಾ ದೋಷಿ ಶಬನಂ ಅವರು ಕ್ಷಮಾ​ದಾನ ಕೋರಿ ರಾಜ್ಯ​ಪಾಲೆ ಆನಂದಿ​ಬೆನ್‌ ಪಟೇಲ್‌ ಅವ​ರಿಗೆ ಹೊಸದಾಗಿ ಅರ್ಜಿ ಸಲ್ಲಿ​ಸಿ​ದ್ದಾರೆ.

ಈ ಹಿನ್ನೆ​ಲೆ​ಯಲ್ಲಿ ಈ ಕುರಿ​ತಾಗಿ ರಾಜ್ಯ​ಪಾ​ಲರು ತಮ್ಮ ನಿರ್ಧಾರ ಕೈಗೊ​ಳ್ಳು​ವ​ವ​ರೆಗೆ ಶಬನಂ ಅವರ ಗಲ್ಲು ಶಿಕ್ಷೆಗೆ ತಾತ್ಕಾ​ಲಿಕ ತಡೆ ಸಿಕ್ಕಿದೆ. ಅವ​ರಿಗೆ ಮಥುರಾ ಜೈಲಿ​ನಲ್ಲಿ ಗಲ್ಲು ಶಿಕ್ಷೆ ವಿಧಿ​ಸಲು ಸಿದ್ಧ​ತೆ​ಗಳು ನಡೆ​ಯು​ತ್ತಿ​ರುವ ಬೆನ್ನಲ್ಲೇ, ಕ್ಷಮಾ​ದಾನ ಅರ್ಜಿ ಸಲ್ಲಿಕೆ ವಿಚಾರ ಬೆಳ​ಕಿಗೆ ಬಂದಿದೆ.

ಅಲ್ಲದೆ ಆಕೆಯ ಪುತ್ರ ಸಹ ತಮ್ಮ ತಾಯಿಗೆ ಕ್ಷಮೆ ನೀಡ​ಬೇಕು ಎಂದು ರಾಷ್ಟ್ರ​ಪತಿ ರಾಮ​ನಾಥ ಕೋವಿಂದ್‌ ಅವ​ರಿಗೆ ಕೋರಿಕೆ ಸಲ್ಲಿ​ಸಿ​ದ್ದಾ​ರೆ.