Asianet Suvarna News Asianet Suvarna News

ಪತಿಯನ್ನು ಯುಕೆಗೆ ಕಳಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತೇನೆ: ನಳಿನಿ ಶ್ರೀಹರನ್‌

ನಾನು ನನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ. ನನ್ನ ಮಗಳು ಬೆಳೆದು ದೊಡ್ಡವಳಾಗಿರುವುದನ್ನು ನಾನು ನೋಡಿಲ್ಲ. ಈಗಲಾದರೂ ಅವಳ ಜತೆಯಲ್ಲಿರಲು ಬಯಸುತ್ತೇವೆ ಎಂದು ನಳಿನಿ ಶ್ರೀಹರನ್‌ ಹೇಳಿದ್ದಾರೆ. 

request tamil nadu governments help to send my husband to the united kingdom nalini sriharan ash
Author
First Published Nov 14, 2022, 1:57 PM IST

ಮಾಜಿ ಪ್ರಧಾನಿ ರಾಜೀವ್ ಗಾಂಧಿ( Rajiv Gandhi) ಹತ್ಯೆ ಪ್ರಕರಣದ (Murder Case) ಅಪರಾಧಿಗಳಲ್ಲಿ (Convicts) ಒಬ್ಬರಾದ ಮತ್ತು ದೀರ್ಘಾವಧಿಯ ಮಹಿಳಾ ಕೈದಿಯಾಗಿರುವ (Woman Prisoner) ನಳಿನಿ ಶ್ರೀಹರನ್ ಅವರು ಈಗಾಗಲೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ವೆಲ್ಲೂರು ಜೈಲಿನಿಂದ (Vellore Jail) ಬಿಡುಗಡೆಯಾದ ಒಂದು ದಿನದ ನಂತರ ತಮಿಳುನಾಡಿನ ಚೆನ್ನೈನಲ್ಲಿ ಮಾದ್ಯಮ ಪ್ರತಿನಿಧಿಗಳನ್ನು ಇವರು ಭೇಟಿ ಮಾಡಿದರು. ಈ ವೇಳೆ, ಯುಕೆಯಲ್ಲಿ (UK) ಆಂಕೋಲಜಿಸ್ಟ್ (Oncologist) ಆಗಿರುವ ತಮ್ಮ ಮಗಳು ಡಾ. ಹರಿತ್ರಾ ಶ್ರೀಹರನ್ ಅವರೊಂದಿಗೆ ಇರಲು ನಳಿನಿ ಬಯಸಿದ್ದಾರೆ. ಅಲ್ಲದೆ, ಪತಿಯನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ ಕುಟುಂಬದ ಜತೆ ಅಂದರೆ ಮೂವರು ಒಟ್ಟಿಗೆ ಇರಲು ಬಯಸುವುದಾಗಿ ಹೇಳಿದರು. 
 
"ನಾನು ನನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ. ನನ್ನ ಮಗಳು ಬೆಳೆದು ದೊಡ್ಡವಳಾಗಿರುವುದನ್ನು ನಾನು ನೋಡಿಲ್ಲ. ಯುಕೆಯಲ್ಲಿ ಶಿಕ್ಷಕಿಯಾಗಿರುವ ನನ್ನ ಅತ್ತಿಗೆ ಅವಳನ್ನು ಬೆಳೆಸಿದರು. ನನ್ನ ಅತ್ತೆ ಮಾವ ಸಹ ಯುಕೆಯಲ್ಲಿದ್ದಾರೆ” ಎಂದು ನಳಿನಿ ಶ್ರೀಹರನ್‌ ಹೇಳಿದರು.

ಇದನ್ನು ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀ ಹರನ್ ಯಾರು?

ನಿಮ್ಮೊಂದಿಗೆ ಜೈಲಿನಿಂದ ಬಿಡುಗಡೆಯಾಗಿರುವ ನಿಮ್ಮ ಪತಿ ವಿ ಶ್ರೀಹರನ್ ಅವರನ್ನು ತಿರುಚ್ಚಿಯ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನಾನು ಸೋಮವಾರ ಅವರನ್ನು ಭೇಟಿಯಾಗಲಿದ್ದು, ಅವರ ಅಭಿಪ್ರಾಯಗಳನ್ನು ಕೇಳುತ್ತೇನೆ ಮತ್ತು ಮುಂದಿನ ಕ್ರಮವನ್ನು ನಾವು ಒಟ್ಟಾಗಿ ನಿರ್ಧರಿಸುತ್ತೇವೆ. ನಂತರ, ನಮ್ಮ ವಕೀಲರ ಸಲಹೆಯನ್ನೂ ಪಡೆಯುತ್ತೇವೆ. 

ನನ್ನ ಪತಿ ನನ್ನೊಂದಿಗೆ ಇರಲು ನಾವು ಈಗಾಗಲೇ ಸುಪ್ರೀಂಕೋರ್ಟ್‌ ಅನುಮತಿ ಕೋರಿದ್ದೇವೆ. ನಮ್ಮ ಮದುವೆಯನ್ನು ನೋಂದಾಯಿಸಲಾಗಿದೆ, ನಮ್ಮ ಮಗು ಇಲ್ಲಿಯೇ ಜನಿಸಿತು ಮತ್ತು ಶ್ರೀಹರನ್ 32 ವರ್ಷಗಳಿಂದ ಭಾರತದಲ್ಲಿದ್ದಾರೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದೇವೆ. ಆದರೂ, ಅವರನ್ನು ಶಿಬಿರಕ್ಕೆ ಕಳುಹಿಸಲಾಯಿತು. ಈ ಹಿನ್ನೆಲೆ ನಾನು ಅವರನ್ನು ಶಿಬಿರದಿಂದ ಬಿಡುಗಡೆ ಮಾಡುವಂತೆ ಮತ್ತು (ಯುಕೆಗೆ) ಕಳುಹಿಸಲು ನನಗೆ ಸಹಾಯ ಮಾಡುವಂತೆ ನಾನು ತಮಿಳು ನಾಡು ಸರ್ಕಾರವನ್ನು ವಿನಂತಿಸುತ್ತೇನೆ. ಇದರಿಂದ ಅವರು ಸಹ ನನ್ನ ಮಗಳೊಂದಿಗೆ ಇರಲು ಸಾಧ್ಯವಾಗುತ್ತದೆ ಎಂದು ನಳಿನಿ ಮಾದ್ಯಮದವರಿಗೆ ಹೇಳಿದ್ದಾರೆ.

ಇದನ್ನೂ ಓದಿ: ರಾಜೀವ್‌ ಗಾಂಧಿ ಹತ್ಯೆ ಪ್ರಮುಖ ಆರೋಪಿ ನಳಿನಿ ಸೇರಿ 6 ಜನರ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌

ಅವರಿಗೆ ಪಾಸ್‌ಪೋರ್ಟ್ ಪಡೆಯಲು ನಾವು ಶ್ರೀಲಂಕಾದ ಹೈಕಮಿಷನ್‌ಗೆ ಭೇಟಿ ನೀಡಬೇಕು. ನಾವು ತುರ್ತು ವೀಸಾ ಮತ್ತು ಪಾಸ್‌ಪೋರ್ಟ್ ಪಡೆಯಲು ಪ್ರಯತ್ನಿಸುತ್ತೇವೆ. ನನ್ನ ಮಗಳು ತನ್ನ ತಂದೆಯನ್ನು ಭೇಟಿಯಾಗಲು ತುಂಬಾ ಉತ್ಸುಕಳಾಗಿದ್ದಾಳೆ. ಅವಳು ಸಹ ಈ ವಿಚಾರದಲ್ಲಿ ನಮಗೆ ಸಹಾಯ ಮಾಡುತ್ತಾಳೆ. ಅವಳು ಗ್ರೀನ್ ಕಾರ್ಡ್ ಹೋಲ್ಡರ್ ಸಹ ಆಗಿರುವುದರಿಂದ ಅವಳೊಂದಿಗೆ ನಾವಿಬ್ಬರೂ ಇರಲು ಅವಕಾಶವಿದೆ ಎಂದೂ ನಳಿನಿ ಹೇಳಿಕೊಂಡಿದ್ದಾರೆ.

32 ವರ್ಷಗಳ ಕಾಲ ಜೈಲಿನಲ್ಲಿದ್ದೀರಿ. ಈ ಹಿನ್ನೆಲೆ ನಿಮ್ಮ ಕುಟುಂಬವನ್ನು ಭೇಟಿಯಾಗಲು ನಿಮಗೆ ಹೇಗೆ ಅನಿಸುತ್ತದೆ ಎಂದು ಮಾಧ್ಯಮದವರು ಕೇಳಿದ್ದಕ್ಕೆ, ನಾನು ಜೈಲಿನಲ್ಲಿದ್ದರೂ, ನನ್ನ ಹೃದಯ ಯಾವಾಗಲೂ ನನ್ನ ಗಂಡ ಮತ್ತು ಮಗಳ ಬಳಿ ಇತ್ತು. ಈಗ, ಅದು ನನಸಾಗುತ್ತಿದೆ. ನನ್ನ ಮಗಳು ಈಗ ಭಾರತಕ್ಕೆ ಬರುವ ಯಾವುದೇ ಯೋಚನೆಯಲ್ಲಿಲ್ಲ. ಈ ಹಿನ್ನೆಲೆ ನಾವು ಅವಳಿರುವ ಕಡೆಗೇ ಹೋಗುತ್ತೇವೆ ಎಂದೂ ನಳಿನಿ ಪ್ರತಿಕ್ರಿಯೆ ನೀಡಿದ್ದಾರೆ. 

ಇದನ್ನೂ ಓದಿ: ಜೈಲಿಂದ ಬಿಡುಗಡೆಯಾದ ರಾಜೀವ್ ಗಾಂಧಿ ಹಂತಕರು, ನಳಿನಿ ಶ್ರೀಹರನ್ ಲಂಡನ್ ಗೆ ತೆರಳುವ ಸಾಧ್ಯತೆ

ಹಾಗೂ, ನಿಮ್ಮ ಬಿಡುಗಡೆಯ ಬಳಿಕ ಮುರುಗನ್ ಏನು ಹೇಳಿದರು ಎಂದು ಕೇಳಿದ್ದಕ್ಕೆ ಅವರು ತುಂಬಾ ಸಂತೋಷವಾಗಿದ್ದರು. ಜೈಲಿನಿಂದ ಬಿಡುಗಡೆಯಾಗಿರುವುದನ್ನು ಪವಾಡವೆಂದೇ ಕರೆದರು. ನಾವಿನ್ನೂ ಹೆಚ್ಚು ಕಾಳ ಜೈಲಿನಲ್ಲಿ ಇರುತ್ತೇವೆ ಎಂದು ಅವರು ಅಂದುಕೊಮಡಿದ್ದರು, ಆದರೀಗ ಬಿಡುಗಡೆಯಾಗಿರುವುದರಿಂದ ಸಂತೋಷವಾಗಿದ್ದಾರೆ. ಹಾಗೂ, ನನ್ನ ಮಗಳು ಸಹ ತುಂಬಾ ಖುಷಿಯಾಗಿದ್ದಾರೆ ಎಂದೂ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಮತ್ತು ದೀರ್ಘಾವಧಿಯ ಮಹಿಳಾ ಕೈದಿಯಾಗಿರುವ ನಳಿನಿ ಶ್ರೀಹರನ್ ಹೇಳಿದ್ದಾರೆ. 

Follow Us:
Download App:
  • android
  • ios