ರಾಜಸ್ಥಾನ(ನ. 27)  ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ. ಅಲ್ವಾರ್  ದಿಂದ ಘಟನೆ ವರದಿಯಾಗಿದ್ದು ಭಿವಾಡಿ ಪೊಲೀಸ್ ಸ್ಟೇಶನ್ ಲಿಮಿಟ್ ನಲ್ಲಿ ಮಾನವ ಕುಲವೇ ತಲೆ ತಗ್ಗಿಸುವ ಘಟನೆ ನಡೆದಿದೆ. 

ತ್ರಿಪಲ್ ತಲಾಖ್ ಗೆ ಇತಿಶ್ರೀ ಹಾಡಿದ್ದರೂ ಆ ಪದ್ಧತಿ ಜಾರಿಯಲ್ಲಿರುವ ಸಂಗತಿಯನ್ನು ಹೇಳಿದೆ. ಗಂಡ ಹೆಂಡತಿಗೆ ತ್ರಿಪಲ್ ತಲಾಖ್ ನೀಡಿದ ಕೆಲವೇ ಗಂಟೆಗಳಲ್ಲಿ ಸಂತ್ರಸ್ತ ಮಹಿಳೆ ಮೇಲೆ ಆಕೆಯ ಮಾವ ಸೇರಿದಂತೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ.

ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು ಮೆಡಿಕಲ್ ತಪಾಸಣೆಗೆ ಕಳುಹಿಸಿಕೊಡಲಾಗಿದೆ. 

ವಾಟ್ಸಪ್ ಮೂಲಕ ತಲಾಖ್ ನೀಡಿದ ದುಬೈ ಪತಿ

2015 ರಲ್ಲಿ ಮಹಿಳೆ ಚೌಪಂಕಿ ಭಾಗದ ಯುವಕನೊಬ್ಬನನ್ನು ಮದುವೆಯಾಗಿದ್ದರು. ಮದುವೆ ವೇಳೆ ಮಹಿಳೆಯ ಗಂಡ ಸಾಕಷ್ಟು ವರದಕ್ಷಿಣೆಯನ್ನು ನೀಡಿದ್ದರು. ಆದರೆ ಮದುವೆಯಾದ ಮೇಲೆ ಗಂಡ, ಮಾವ ಮತ್ತು ಮೈದುನ ಹೆಚ್ಚಿನ ಹಣ ತರುವಂತೆ ಪೀಡಿಸುತ್ತಿದ್ದರು. ಈ ಮಧ್ಯೆದಲ್ಲಿಯೇ ಮಗುವೊಂದಕ್ಕೆ ಜನ್ಮ ನೀಡಿದ್ದಳು. ನವೆಂಬರ್ 20-23 ರ ನಡುವೆ ಮಹಿಳೆಯನ್ನು ಕುಟುಂಬದಬರು ಥಳಿಸಿದ್ದರು. ಈ ಎಲ್ಲ ಮಾಹಿತಿಯನ್ನು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ನವೆಂಬರ್ 22 ರಂದು ಆಕೆಯ ಕೋಣೆಗೆ ಬಂದ ಗಂಡ ತ್ರಿಪಲ್ ತಲಾಖ್ ನೀಡಿದ್ದ. ಇದೇ ದಿನ ರಾತ್ರಿ 11 ರಿಂದ 12 ಗಂಟೆ ನಡುವೆ ಆಕೆಯ ಕೋಣೆಯೊಳಕ್ಕೆ ವ್ಯಕ್ತಿಯೊಬ್ಬನೊಂದಿಗೆ ಬಂದ ಮಾವ ನೀನು ನನ್ನ ಸೊಸೆಯಲ್ಲ. ಯಾಕೆಂದರೆ ನನ್ನ ಮಗ ನಿನಗೆ ವಿಚ್ಛೇದನ ನೀಡಿದ್ದಾನೆ ಎಂದಿದ್ದಾನೆ.

ಇದಾದ ಮೇಲೆ ಮಾವನೊಂದಿಗೆ ಬಂದ ವ್ಯಕ್ತಿ ಮಹಿಳೆಯನ್ನು ಗನ್ ತೋರಿಸಿ ಬೆದರಿಸಿದ್ದಾನೆ. ನಂತರ ಇಬ್ಬರು ಸೇರಿ ಅತ್ಯಾಚಾರ ಎಸಗಿದ್ದಾರೆ. ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. 

ಇದಾದ ಮರುದಿನ ಬೆಳಗ್ಗೆ ಮಹಿಳೆ ತನಗಾದ ಅನ್ಯಾಯವನ್ನು ತನ್ನ ತಂದೆಯ ಬಳಿ ಹೇಳಿಕೊಂಡಿದ್ದಾರೆ. ತಂದೆಯ ಸಹಾಯದಿಂದ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.