ರಾಜ್ಯಕ್ಕೂ ಜಿಎಸ್‌ಟಿ ನಿಯಮ ರಚನೆ ರೂಪಿಸಲು ಅಧಿಕಾರ: ಸುಪ್ರೀಂ

*  ಮಂಡಳಿಯ ಶಿಫಾರಸು ಪಾಲನೆ ಕಡ್ಡಾಯ ಅಲ್ಲ
*  ಸಂಸತ್ತು, ವಿಧಾನಸಭೆಗಳಿಗೆ ಸಮಾನ ಅಧಿಕಾರ
*  ಕೇರಳ, ಬಂಗಾಳ ರಾಜ್ಯಗಳ ಸ್ವಾಗತ
 

Power to Formulate GST Rules for the States Says Supreme Court grg

ನವದೆಹಲಿ(ಮೇ.20): ಜಿಎಸ್‌ಟಿ ಮಂಡಳಿಯ ಶಿಫಾರಸುಗಳ ಪಾಲನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕಡ್ಡಾಯವಲ್ಲ. ನಮ್ಮದು ಸಹಕಾರ ಒಕ್ಕೂಟ ವ್ಯವಸ್ಥೆಯಾದ ಕಾರಣ, ಮಂಡಳಿಯ ಶಿಫಾರಸುಗಳು ಕೇವಲ ಮೌಲ್ಯಯುತ ಸಲಹೆಗಳಾಗಿರುತ್ತವೆ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಜೊತೆಗೆ ಜಿಎಸ್‌ಟಿ ನಿಯಮ ರೂಪಿಸುವಲ್ಲಿ ಸಂಸತ್‌ ಮತ್ತು ರಾಜ್ಯ ವಿಧಾನಸಭೆಗಳು ಸಮಾನ ಅಧಿಕಾರ ಹೊಂದಿವೆ. ಜಿಎಸ್‌ಟಿ ಮಂಡಳಿಯು ಮಾಡುವ ಶಿಫಾರಸುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಮಾತುಕತೆಯ ಮೂಲಕ ಹೊರಬರುವ ಫಲ. ಜಿಎಸ್‌ಟಿ ಮಂಡಳಿಯು ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಕೇವಲ ಒಂದು ಸಾಂವಿಧಾನಿಕ ಸಂಸ್ಥೆಯಲ್ಲ, ಬದಲಾಗಿ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಆಧಾರಸ್ತಂಭ ಎಂದು ಹೇಳಿದೆ.

ಗ್ಯಾನ್‌ವಾಪಿ ವರದಿ ಸಲ್ಲಿಸಲು 2 ದಿನ ಕಾಲಾವಕಾಶ: ಮಸೀದಿ ಪ್ರವೇಶಕ್ಕೆ ಮುಸ್ಲಿಮರಿಗೆ ನಿರ್ಬಂಧವಿಲ್ಲ

ಸುಪ್ರೀಂಕೋರ್ಟ್‌ನ ಈ ಆದೇಶ, ಒಕ್ಕೂಟ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ತದ್ದು ಎಂದು ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಹರ್ಷ ವ್ಯಕ್ತಪಡಿಸಿದ್ದರೆ, ಆದೇಶವು ಹಾಲಿ ಜಾರಿಯಲ್ಲಿರುವ ಒಂದು ದೇಶ, ಒಂದು ತೆರಿಗೆ ಪದ್ಧತಿಯ ಜಾರಿಗೆ ಯಾವುದೇ ಅಡ್ಡಿಯಾಗದು. ಮಂಡಳಿಯ ಆದೇಶವನ್ನು ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕು ರಾಜ್ಯಗಳಿಗಿದೆ ಎಂಬ ಅಂಶವು ಹಾಲಿ ಕಾನೂನಿನಲ್ಲಿಯೇ ಸ್ಪಷ್ಟವಾಗಿದೆ. ಮೇಲಾಗಿ ಕಳೆದ 5 ವರ್ಷಗಳಲ್ಲಿ ಯಾರೂ ಈ ಅಧಿಕಾರವನ್ನು ಬಳಸಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಏನಿದು ಪ್ರಕರಣ?:

ಗುಜರಾತ್‌ನಲ್ಲಿ ಕೆಲವು ವರ್ಷಗಳ ಹಿಂದೆ ವಿದೇಶದಿಂದ ಹಡಗಿನಲ್ಲಿ ಬಂದ ಸರಕುಗಳಿಗೆ ಶೇ.5ರಷ್ಟು ಐ-ಜಿಎಸ್‌ಟಿ ಹೇರಲಾಗಿತ್ತು. ಆದರೆ ಭಾರತದ ನೆಲದಲ್ಲಿ ಉತ್ಪಾದನೆ ಆಗದ ವಸ್ತುಗಳಿಗೆ ಭಾರತಕ್ಕೆ ಬರುವ ಮುನ್ನವೇ ಜಿಎಸ್‌ಟಿ ನಿಗದಿ ಮಾಡುವುದು ಕಾನೂನುಬಾಹಿರ ಎಂದು ಹೇಳಿದ್ದ ಗುಜರಾತ್‌ ಹೈಕೋರ್ಚ್‌, ಐ-ಜಿಎಸ್‌ಟಿ ಹೇರಿಕೆ ರದ್ದು ಮಾಡಿತ್ತು.

NEET PG-22 Exam ಮುಂದೂಡಲು ನಿರಾಕರಿಸಿದ ಸುಪ್ರೀಂ

ಈ ವಿಷಯದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿ ಹೈಕೋರ್ಟ್‌ನ ಆದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ‘ಜಿಎಸ್‌ಟಿ ಮಂಡಳಿಯ ಶಿಫಾರಸುಗಳು ಕೇಂದ್ರ ಮತ್ತು ರಾಜ್ಯಗಳಿಗೆ ಬಾಧ್ಯಸ್ಥವಲ್ಲ. ಏಕೆಂದರೆ ನಮ್ಮದು ಸಹಕಾರ ಒಕ್ಕೂಟ ವ್ಯವಸ್ಥೆ. ಅದರ ಶಿಫಾರಸುಗಳು ಮೌಲ್ಯಯುತವಾಗಿರುತ್ತವೆ. ಈ ಶಿಫಾರಸನ್ನು ಆಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಎಸ್‌ಟಿ ಕಾನೂನು ರೂಪಿಸುವಲ್ಲಿ ಸಮಾನ ಅಧಿಕಾರ ಹೊಂದಿವೆ. ಎರಡೂ ಸರ್ಕಾರಗಳ ನಡುವೆ ಸಮನ್ವಯ ಸಾಧಿಸಿ, ವಿವಾದಕ್ಕೆ ಎಡೆ ಮಾಡಿಕೊಡದಂತೆ ಸೌಹಾರ್ದ ವಾತಾವರಣದಲ್ಲಿ ಜಿಎಸ್‌ಟಿ ನಿಗದಿ ಆಗುವಂತೆ ಮಾಡುವುದು ಜಿಎಸ್‌ಟಿ ಮಂಡಳಿ ಕೆಲಸ’ ಎಂದು ಹೇಳಿತು.

ಕೇರಳ, ಬಂಗಾಳ ರಾಜ್ಯಗಳ ಸ್ವಾಗತ

ಸುಪ್ರೀಂಕೋರ್ಟ್‌ ತೀರ್ಪನ್ನು ಕೇರಳ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳು ಸ್ವಾಗತಿಸಿವೆ. ಈ ಆದೇಶವು ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ್ದು ಎಂದು ಬಣ್ಣಿಸಿವೆ. ಕೇಂದ್ರ ಸರ್ಕಾರವು, ಜಿಎಸ್‌ಟಿ ಮಂಡಳಿಯ ಶಿಫಾರಸು ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕು ರಾಜ್ಯಗಳಿಗಿದೆ ಎಂಬ ಅಂಶ ಕಾನೂನಿನಲ್ಲೇ ಇದೆ ಎಂದು ಹೇಳಿದೆ.
 

Latest Videos
Follow Us:
Download App:
  • android
  • ios