Asianet Suvarna News Asianet Suvarna News

ಸರಣಿ ಸೋಲುಗಳಿಂದ ಕಂಗೆಟ್ಟ ಕಾಂಗ್ರೆಸ್‌ಗೆ ಏಪ್ರಿಲ್‌ನಲ್ಲಿ ಹೊಸ ಸಾರಥಿ ಆಯ್ಕೆ ಸಾಧ್ಯತೆ

ಏಪ್ರಿಲ್‌ನಲ್ಲಿ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ |ರಾಹುಲ್ ಗಾಂಧಿ ನಂತರ ತೆರವಾದ ಸ್ಥಾನ| ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಸಭೆ|

Possibility of a New Congress President on April
Author
Bengaluru, First Published Feb 15, 2020, 10:01 AM IST

ನವದೆಹಲಿ[ಫೆ.15]: ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಏಪ್ರಿಲ್‌ನಲ್ಲಿ ನೂತನ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ. ಏಪ್ರಿಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಸಭೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಈ ವೇಳೆ ಪಕ್ಷದ ಹೊಸ ಅಧ್ಯಕ್ಷರ ನೇಮಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ರಾಜೀನಾಮೆ ಬಳಿಕ ಸೋನಿಯಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

"

ಬಿಜೆಪಿ ಪಾಲಿಗೆ ಕಪ್ಪು ದಿನ: ರಾಹುಲ್ ರಾಜೀನಾಮೆ ಟ್ವಿಟರ್‌ನಲ್ಲಿ ಭಾರೀ ಸೌಂಡ್

ಸತತ 2 ಬಾರಿ ಲೋಕಸಭಾ ಚುನಾವಣೆ ಮತ್ತು ಹಲವು ರಾಜ್ಯಗಳ ವಿಧಾನ ಸಭೆಗಳಲ್ಲಿನ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ, ಮುಂದಿನ ಏಪ್ರಿಲ್‌ನಲ್ಲಿ ಸಾರಥಿಯ ನೇಮಕವಾಗುವ ಸಾಧ್ಯತೆ ಇದೆ. ಏಪ್ರಿಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರ ಸಭೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಈ ವೇಳೆ ಪಕ್ಷದ ಹೊಸ ಅಧ್ಯಕ್ಷರ ನೇಮಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 

ಚುನಾವಣಾ ಸೋಲು: ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಛೋಪ್ರಾ ರಾಜೀನಾಮೆ!

ಲೋಕಸಭೆ ಚುನಾವಣೆಯ ಸೋಲಿನ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಸೋನಿಯಾ ಗಾಂಧಿ ಅವರೇ ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಪೂರ್ಣಾವಧಿ ಅಧ್ಯಕ್ಷರ ಹುದ್ದೆಯ ಅವಶ್ಯಕತೆ ಇದ್ದು, ಇದನ್ನು ಸರ್ವಸದಸ್ಯರ ಸಭೆ ನಿರ್ಣಯಿಸುವ ಸಾಧ್ಯತೆ ಇದೆ. ಸಭೆಯ ನಿಖರ ದಿನಾಂಕವು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಏಪ್ರಿಲ್ 3 ರಂದು ಮುಗಿಯಲಿದೆ. ಬಳಿಕದ ಯಾವುದಾದರೂ ದಿನಗಳಲ್ಲಿ ಸರ್ವಸದಸ್ಯರ ಸಭೆ ನಡೆಯಲಿದೆ ಎನ್ನಲಾಗಿದೆ.

ರಾಜೀನಾಮೆಗೆ ಮುಂದಾದ ರಾಹುಲ್: ಬೇಡ ಮಗಾ ಎಂದ ಸೋನಿಯಾ!

Follow Us:
Download App:
  • android
  • ios