Asianet Suvarna News Asianet Suvarna News

ಗುಜರಾತ್ ಗಲಭೆ: ಮೋದಿಗೆ ನಾನಾವತಿ ಆಯೋಗದ ಕ್ಲೀನ್‌ಚಿಟ್!

2002ರ ಗುಜರಾತ್ ಗಲಭೆ ಪ್ರಕರಣ| ಮೋದಿಗೆ ಕ್ಲೀನ್‌ಚಿಟ್ ನೀಡಿದ ನಾನಾವತಿ ಆಯೋಗ| ನಾನಾವತಿ ಆಯೋಗದ ವರದಿ ವಿಧಾನಸಭೆಯಲ್ಲಿ ಮಂಡನೆ| ದಂಗೆ ಪ್ರಕರಣದಲ್ಲಿ ಸರ್ಕಾರದ ಪಾತ್ರವಿಲ್ಲ ಎಂದ ನಾನಾವತಿ ಆಯೋಗ| ದಂಗೆ ಪೂರ್ವನಿಯೋಜಿತ್ ಎಂಬ ಸಂಜೀವ್ ಭಟ್ ಹೇಳಿಕೆ ಸುಳ್ಳು ಎಂದ ವರದಿ|'ದಂಗೆಯನ್ನು ನಿಯಂತ್ರಿಸಲು ಮೋದಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿತ್ತು'| 

PM Modi Gets Clean Chit In 2002 Gujarat Riots By Nanavati Panel
Author
Bengaluru, First Published Dec 11, 2019, 2:40 PM IST

ಗಾಂಧಿನಗರ(ಡಿ.11): 2002 ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ನಾನಾವತಿ ಆಯೋಗ ಕ್ಲೀನ್‌ಚಿಟ್ ನೀಡಿದೆ. 

ಗಲಭೆ ಪ್ರಕರಣ ಕುರಿತು ನಾನಾವತಿ ಆಯೋಗ ಸಿದ್ಧಪಡಿಸಿರುವ ವರದಿಯನ್ನು, ಗುಜರಾತ್ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ, ಇಂದು ರಾಜ್ಯ ವಿಧಾನಸಭೆಯಲ್ಲಿ ಮಂಡನೆ ಮಾಡಿದ್ದಾರೆ. 

ಗುಜರಾತ್‌ ಗಲಭೆ ‘ಮುಖ’ಗಳೀಗ ದೋಸ್ತಿ!

ದಂಗೆ ಪ್ರಕರಣದಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದ್ದು, ದಂಗೆಯನ್ನು ಪೂರ್ವನಿಯೋಜಿತ ಎಂದು ಹೇಳಿದ್ದ ಮಾಜಿ ಐಪಿಎಸ್ ಅಧಿಕಾರಿ  ಸಂಜೀವ್ ಭಟ್ ಹೇಳಿಕೆ ಸುಳ್ಳು ಎಂದು ಸ್ಪಷ್ಟಪಡಿಸಲಾಗಿದೆ.

ದಂಗೆಯನ್ನು ನಿಯಂತ್ರಿಸಲು ಮೋದಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿತ್ತು ಎಂದು ನಾನಾವತಿ ಆಯೋಗ ತಿಳಿಸಿದ್ದು, ಈ ಮೂಲಕ ಪ್ರಕರಣ ಸಂಬಂಧ ಮೋದಿ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿದೆ. 

ಗಂಡನ ಸಾವಿಗೆ ಸೇಡುತೀರಿಸಿಕೊಳ್ಳಲು ಪ್ರಧಾನಿ ಮೋದಿಯನ್ನ ಕೋರ್ಟ್‌ಗೆ ಎಳೆದ ಪತ್ನಿ

2008ರಲ್ಲೇ ಮೊದಲ ಬಾರಿಗೆ ನಾನಾವತಿ ಆಯೋಗದ ವರದಿ ಮಂಡನೆ ಮಾಡಲಾಗಿತ್ತು. ಸಬರಮತಿ ಎಕ್ಸಪ್ರೆಸ್ ರೈಲಿಗೆ ಬೆಂಕಿ ಹೊತ್ತಿಕೊಂಡ ಪ್ರಕರಣದ ಕುರಿತು ಮೊದಲ ವರದಿಯಲ್ಲಿ ವಿಸ್ತೃತವಾಗಿ ತಿಳಿಸಲಾಗಿತ್ತು. 

 2014ರಲ್ಲಿ ಆನಂದಿ ಬೆನ್ ನೇತೃತ್ವದ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು. ಗಲಭೆಯಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 1000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಗುಜರಾತ್ ಗಲಭೆ ಕುರಿತಾದ ನ್ಯಾಯಾಂಗ ತನಿಖೆಗಾಗಿ 2002ರಲ್ಲಿ ಅಂದಿನ ರಾಜ್ಯ ಸರ್ಕಾರ ನಾನಾವತಿ ಆಯೋಗವನ್ನು ರಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಡಿಸೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios