Asianet Suvarna News Asianet Suvarna News

ಕಾಶ್ಮೀರ ವಿಚಾರ: ಮತ್ತೆ ಮುಖಭಂಗಕ್ಕೀಡಾದ ಪಾಕಿಸ್ತಾನ!

ವಿಶ್ವ ವೇದಿಕೆಯಲ್ಲಿ ಮತ್ತೊಮ್ಮೆ ಮುಖಭಂಗಕ್ಕೀಡಾದ ಪಾಕಿಸ್ತಾನ| ಭಾರತವನ್ನು ವಿಲನ್ ಎಂದು ಬಿಂಬಿಸಲು ಹೋದ ಪಾಕಿಸ್ತಾನಕ್ಕೆ ತಪರಾಕಿ| ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಶ್ಮೀರದ ವಿಷಯವಾಗಿ ಖಾಸಗಿ ಚರ್ಚೆ ನಡೆಸಿದೆ ಎಂದ ಪಾಕಿಸ್ತಾನ| ಸುಳ್ಳು ಮಾಹಿತಿ ನೀಡಿದ ಪಾಕಿಸ್ತಾನ ವಿದೇಶಾಂಗ ಇಲಾಖೆ| ವಿದೇಶಾಂಗ ಸಚಿವರ ಹೇಳಿಕೆಯನ್ನು ಪ್ರಕಟಿಸಿದ ಪಾಕಿಸ್ತಾನ ರೆಡಿಯೋ|

Pakistan Makes False Claim About UN Security Council Discussion On J&K
Author
Bengaluru, First Published Dec 18, 2019, 6:20 PM IST

ಇಸ್ಲಾಮಾಬಾದ್(ಡಿ:18): ಕಾಶ್ಮೀರದ ವಿಷಯದಲ್ಲಿ ವಿಶ್ವ ವೇದಿಕೆಯಲ್ಲಿ ಮತ್ತೊಮ್ಮೆ ಪಾಕಿಸ್ತಾನ ಮುಖಭಂಗಕ್ಕೀಡಾಗಿದೆ. ಭಾರತವನ್ನು ವಿಲನ್ ಎಂದು ಬಿಂಬಿಸಲು ಹೋಗಿ ಪಾಕಿಸ್ತಾನ ನಗೆಪಾಟಲಿಗೀಡಾಗಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವ ಚೀನಾ ಪ್ರಯತ್ನವನ್ನು ಉಳಿದ ಸದಸ್ಯ ರಾಷ್ಟ್ರಗಳು ತಡೆಯೊಡ್ಡಿದ್ದವು. ಇದರ ಹೊರತಾಗಿಯೂ ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಶ್ಮೀರದ ವಿಷಯವಾಗಿ ಖಾಸಗಿ ಚರ್ಚೆ ನಡೆಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಸುಳ್ಳು ಮಾಹಿತಿ ನೀಡಿದೆ.

ಟ್ರಂಪ್-ಇಮ್ರಾನ್ ಫೋನ್ ಮಾತು: ಕಾಶ್ಮೀರ ಕತೆ ಏನಾಯ್ತು?

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಗೌಪ್ಯ ಸಭೆಯಲ್ಲಿ ಚೀನಾ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದೆ ಎಂಬ ವಿದೇಶಾಂಗ ಸಚಿವರ ಹೇಳಿಕೆಯನ್ನು ಪಾಕಿಸ್ತಾನದ ಅಧಿಕೃತ ರೆಡಿಯೋ ಪ್ರಕಟಿಸಿದೆ.

ಕತ್ತಲೆಯ ಛಾಯೆಗೆ ಪಾಕಿಸ್ತಾನ ತವರು: ಯುನೆಸ್ಕೊದಲ್ಲಿ ಭಾರತದ ತಪರಾಕಿ!

ಪಾಕಿಸ್ತಾನದ ಈ ನಡೆ ಜಾಗತಿಕ ವೇದಿಕೆಯಲ್ಲಿ ನಗೆಪಾಟಲಿಗೀಡಾಗಿದ್ದು, ಸುಳ್ಳು ಮಾಹಿತಿ ನೀಡುವ ಮೂಲಕ ಪಾಕಿಸ್ತಾನ ತನ್ನದೇ ಪ್ರಜೆಗಳನ್ನು ತಪ್ಪುದಾರಿಗೆ ಎಳೆಯುತ್ತಿದೆ ಎಂದು ಭಾರತ ಕಿಚಾಯಿಸಿದೆ.

ಆ 58 ರಾಷ್ಟ್ರಗಳ ಹೆಸರೇಳಿ ಸ್ವಾಮಿ: ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಪಾಕ್ ಆಸಾಮಿ!

Follow Us:
Download App:
  • android
  • ios