ರಾಜಸ್ಥಾನ(ಮಾ.17):ಇದು ಅತ್ಯಂತ ಘೋರ ಕೃತ್ಯ. ಯಾರೂ ಸಹಿಸಲು ಸಾಧ್ಯವಾಗದ ಅತ್ಯಾಚಾರ. ದೆಹಲಿಯ ನಿರ್ಭಯ ಪ್ರಕರಣಕ್ಕೂ ಈ ಪ್ರಕರಣಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಇದು ರಾಜಸ್ಥಾನದ ಜೈಪುರದಲ್ಲಿರುವ ಶಾಲ್ಬಿ ಆಸ್ಪತ್ರೆಯಲ್ಲಿ ನಡೆದ ಅತ್ಯಂಕ ಬೀಕರ ಅತ್ಯಾಚಾರ ಪ್ರಕರಣ. ಆಮ್ಲಜನಕ ಬೆಂಬಲದೊಂದಿದೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಮೇಲೆ ಆಸ್ಪತ್ರೆ ವಾರ್ಡ್ ಬಾಯ್ ಅತ್ಯಂತ ಕ್ರೂರವಾಗಿ ಅತ್ಯಚಾರ ಮಾಡಿದ್ದಾನೆ.

14 ವರ್ಷವಿದ್ದಾಗ ಬಾಲಿವುಡ್ ನಟಿ ಮೇಲೆ ಪಾಕ್‌ನಲ್ಲಿ ಅತ್ಯಾಚಾರ

ಪ್ರತಿ ಅತ್ಯಾಚಾರ ಪ್ರಕರಣ ಅತ್ಯಂತ ಕ್ರೂರ ಅನ್ನೋದರಲ್ಲಿ ಎರಡು ಮಾತಿಲ್ಲ. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿ ಮೇಲೆ ಆಸ್ಪತ್ರೆ ವಾರ್ಡ್ ಬಾಯ್ ಆತ್ಯಾಚಾರ ಎಸೆಗಿದ್ದಾನೆ. ಆಮ್ಲಜನ ಬೆಂಬಲದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಕೈ ಕಾಲು ಕಟ್ಟಿದ ವಾರ್ಡ್ ಬಾಯ್, ಅತ್ಯಾಚಾರ ಮಾಡಿದ್ದಾನೆ.

ಪೊಲೀಸ್‌ ಠಾಣೆಯಲ್ಲೇ ಮಹಿಳೆ ಮೇಲೆ 3 ದಿನ ಅತ್ಯಾಚಾರ ಎಸಗಿದ ಸಬ್ ಇನ್ಸ್ಪೆಕ್ಟರ್

ಘಟನೆ ಬಳಿಕ ICU ಕೊಠಡಿಗೆ ಬಂದ ನರ್ಸ್ ಬಳಿ ರೋಗಿ ನೋವಿನಿಂದ ಹೇಳಿಕೊಂಡಿದ್ದಾರೆ. ಆದರೆ ನರ್ಸ್ ಮಹಿಳಾ ರೋಗಿಗೆ ಬೆದರಿಕೆ ಹಾಕಿದ್ದಾರೆ. ಮರುದಿನ ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ ಪತಿ ಬಳಿಕ ಮಹಿಳಾ ರೋಗಿ ನಡೆದ ಘಟನೆ ಹೇಳಿದ್ದಾರೆ. ಪತಿ ಚಿತ್ರಾಕೋಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆಸ್ಪತ್ರೆಯ ಸಿಸಿಟಿವಿ ದೃಶ್ಯ ತರಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನು ಆರೋಪಿ ವಾರ್ಡ್ ಬಾಯ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಆಸ್ಪತ್ರೆಯಲ್ಲಿ ಇತರ ಕೆಲ ಸಿಬ್ಬಂದಿಗಳ ಕೈವಾಡವಿರುವ ಶಂಕೆಯನ್ನು ಪೊಲೀಸಲು ವ್ಯಕ್ತಪಡಿಸಿದ್ದಾರೆ.