Asianet Suvarna News Asianet Suvarna News

ಗೃಹ ಬಂಧನದಲ್ಲಿರುವ ಒಮರ್‌, ಮೆಹಬೂಬಾಗೆ ಕೇಂದ್ರದ ಮತ್ತೊಂದು ಶಾಕ್!

ಕಣಿವೆ ನಾಡಿನ ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಮೆಹಬೂಬಾಗೆ ಕಹಿ| ಒಮರ್‌, ಮೆಹಬೂಬಾ ಬಂಧನ ವಿಸ್ತರಣೆಗೆ ಕಾರಣ ಕೊಟ್ಟ ಸರ್ಕಾರ|

Omar detained for considerable influence Mufti for pro separatist stand
Author
Bangalore, First Published Feb 10, 2020, 12:07 PM IST

ಶ್ರೀನಗರ[ಫೆ.10]: ಅವಿಭಜಿತ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಒಮರ್‌ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಗೃಹ ಬಂಧನ ವಿಸ್ತರಣೆಗೆ ಸರ್ಕಾರ ಕಾರಣ ಕೊಟ್ಟಿರುವ ಕಾರಣಗಳು ಬಹಿರಂಗವಾಗಿದೆ.

ಜನರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಇರುವುದರಿಂದ ಓಮರ್‌ ಅಬ್ದುಲ್ಲಾ ಹಾಗೂ ಪ್ರತ್ಯೇಕತಾವಾದಿಗಳ ಜತೆ ಸಂಪರ್ಕ ಇರುವುದರಿಂದ ಮೆಹಬೂಬ ಮುಫ್ತಿ ಅವರ ಗೃಹ ಬಂಧನ ವಿಸ್ತರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಗಡ್ಡಧಾರಿ ಒಮರ್: ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾಗಿದ್ದು, ರೇಜರ್ ಅಲ್ಲ ಅಂದ್ರು ಸಿಂಗ್!

2009-14ರ ವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಓಮರ್‌ ಅಬ್ದುಲ್ಲಾ, ವಿಶೇಷಾಧಿಕಾರ ರದ್ದಿನ ವಿರುದ್ದ ಜನರನ್ನು ಪ್ರಚೋದನೆಗೆ ಒಳಗಾಗುವಂತೆ ಮಾಡಿದ್ದರು. ಇದು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿತ್ತು ಎಂದು ಹೇಳಲಾಗಿದೆ. 370ನೇ ವಿಧಿ ರದ್ದು ಮಾಡುವ ಮೂಲಕ ಕಾಶ್ಮೀರದ ಮೇಲೆ ಅಕ್ರಮಣ ಮಾಡಲಾಗಿದೆ ಎಂದು ಮೆಹಬೂಬ ಮುಫ್ತಿ ಹೇಳಿದ್ದರು. ಅಲ್ಲದೇ ಅವರು ಬೆಂಬಲ ನೀಡುವ ಇಮಾತ್‌-ಎ-ಇಸ್ಲಾಮಿಯ ಸಂಘಟನೆಯನ್ನು ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.

2009 ಆ.6 ರಿಂದ ಈ ಇಬ್ಬರು ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಫೆ.6 ರಂದು ಆರು ತಿಂಗಳು ತುಂಬಿದ ಹಿನ್ನೆಲೆ ನಿಯಮಾನುಸಾರ ಬಂಧನವನ್ನು ಮತ್ತೆ ಆರು ತಿಂಗಳು ವಿಸ್ತರಿಸಲಾಗಿತ್ತು.

ಓಮರ್ ಅಬ್ದುಲ್ಲಾ ಬಿಳಿ ದಾಡಿ ಫೋಟೋ ಕಂಡು ಕಣ್ಣೀರಿಟ್ಟ ಮಮತಾ!

Follow Us:
Download App:
  • android
  • ios