Asianet Suvarna News Asianet Suvarna News

ವೈರಸ್‌ ನಿಯಂತ್ರ​ಣಕ್ಕೆ ಇನ್ನೆಷ್ಟು ದಿನ ಬೇಕು?

ನಮ್ಮ ದೇಶದ ಗಾತ್ರಕ್ಕೆ ಹೋಲಿ​ಸಿ​ದರೆ ಸೋಂಕು ಹರ​ಡದಂತೆ ನಮ್ಮ ಶಕ್ತಿ ಮೀರಿ ಪ್ರಯ​ತ್ನಿ​ಸು​ತ್ತಿ​ದ್ದೇವೆ. ಕೊರೋನಾ ಸೋಂಕಿದ್ದ ಕೇರಳ ಮೂಲದ ಮೂವ​ರು ಈಗಾ​ಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿ​ದ್ದಾರೆ. ಕೊರೋನಾ ಪೀಡಿತ ದೇಶಗಳಿಂದ ಪ್ರಯಾಣದ ಇತಿಹಾಸ ಹೊಂದಿರುವ ಮತ್ತು ಅಂತಹ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ಜನರ ಪರಿ​ಶೀ​ಲ​ನೆ​ಗೆ ‘ಸಂಪರ್ಕ ಕಣ್ಗಾವಲು’ ವ್ಯ​ವ​ಸ್ಥೆಯನ್ನು ದೇಶಾದ್ಯಂತ ಪ್ರಾರಂಭಿಸಲಾಗಿದೆ. 

No need to panic Union Health Minister Harsh Vardhan on coronavirus
Author
Bengaluru, First Published Mar 13, 2020, 3:37 PM IST

ಚೀನಾ ಮೂಲದ ಕೊರೋನಾ ವೈರಸ್‌ ಜಗ​ತ್ತಿ​ನಾ​ದ್ಯಂತ ವ್ಯಾಪಿ​ಸು​ತ್ತಿದ್ದು, 4000ಕ್ಕೂ ಅಧಿಕ ಜನ​ರನ್ನು ಬಲಿ​ ಪ​ಡೆ​ದಿ​ದೆ. ಭಾರ​ತ​ದಲ್ಲೂ 73 ಜನ​ರಿಗೆ ಕೊರೋನಾ ಸೋಂಕು ಇರು​ವುದು ದೃಢ​ಪ​ಟ್ಟಿದೆ.

ಈ ಹಿನ್ನೆ​ಲೆ​ಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹ​ರ್ಷ​ವ​ರ್ಧನ್‌ ಇಂಡಿ​ಯನ್‌ ಎಕ್ಸ​ಪ್ರೆ​ಸ್‌​ನೊಂದಿಗೆ ಮಾತ​ನಾಡಿ, ಭಾರ​ತ​ದಲ್ಲಿ ವೈರಸ್‌ ನಿಯಂತ್ರ​ಣಕ್ಕೆ ಹೇಗೆ ಕ್ರಮ ​ಕೈ​ಗೊ​ಳ್ಳ​ಲಾ​ಗು​ತ್ತಿದೆ ಎಂಬ ಬಗ್ಗೆ ಮಾತ​ನಾ​ಡಿ​ದ್ದಾರೆ. ಅದರ ಆಯ್ದ ಭಾಗ ಇಲ್ಲಿ​ದೆ.

ಕೊರೋನಾ ವೈರಸ್; IPL 2020 ಟೂರ್ನಿ ರದ್ದು ಮಾಡಿದ ಬಿಸಿಸಿಐ

ವೈರಸ್‌ ನಿಯಂತ್ರ​ಣಕ್ಕೆ ಇನ್ನೆಷ್ಟುದಿನ ಬೇಕು?

ಮುಂದಿನ ಒಂದು ವಾರ​ದ​ಲ್ಲಿ​ಯೇ ಭಾರ​ತ​ದಲ್ಲಿ ಕೊರೋನಾವೈರಸ್‌ ಸೋಂಕು ಕಡಿ​ಮೆ​ಯಾ​ಗ​ಲಿದೆ ಎಂದು ನನ​ಗ​ನಿ​ಸು​ತ್ತಿದೆ. ಆದಾಗ್ಯೂ ಇತರ ದೇಶ​ಗಳು ಪರಿ​ಸ್ಥಿ​ತಿಯನ್ನು ಹೇಗೆ ನಿಭಾ​ಯಿ​ಸು​ತ್ತವೆ, ಜನ​ರಲ್ಲಿ ಎಷ್ಟರ ಮಟ್ಟಿಗೆ ಅರಿವು ಮೂಡಿ​ದೆ ಎಂಬ ಅಂಶ​ಗಳು ಮುಖ್ಯ​ವಾ​ಗು​ತ್ತ​ವೆ.

ಭಾರ​ತ​ದಲ್ಲಿ ಕೊರೋನಾ ವೈರಸ್‌ ಭೀಕ​ರತೆ ಹೇಗಿದೆ ಮತ್ತು ಅದನ್ನು ಬಗ್ಗು ಬಡಿ​ಯ​ಲು ಭಾರತ ಹೇಗೆ ಸಿದ್ಧವಾ​ಗು​ತ್ತಿ​ದೆ?

ನಮ್ಮ ದೇಶದ ಗಾತ್ರಕ್ಕೆ ಹೋಲಿ​ಸಿ​ದರೆ ಸೋಂಕು ಹರ​ಡದಂತೆ ನಮ್ಮ ಶಕ್ತಿ ಮೀರಿ ಪ್ರಯ​ತ್ನಿ​ಸು​ತ್ತಿ​ದ್ದೇವೆ. ಕೊರೋನಾ ಸೋಂಕಿದ್ದ ಕೇರಳ ಮೂಲದ ಮೂವ​ರು ಈಗಾ​ಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿ​ದ್ದಾರೆ. ಕೊರೋನಾ ಪೀಡಿತ ದೇಶಗಳಿಂದ ಪ್ರಯಾಣದ ಇತಿಹಾಸ ಹೊಂದಿರುವ ಮತ್ತು ಅಂತಹ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ಜನರ ಪರಿ​ಶೀ​ಲ​ನೆ​ಗೆ ‘ಸಂಪರ್ಕ ಕಣ್ಗಾವಲು’ ವ್ಯ​ವ​ಸ್ಥೆಯನ್ನು ದೇಶಾದ್ಯಂತ ಪ್ರಾರಂಭಿಸಲಾಗಿದೆ. ಕೊರೋ​ನಾ​ದಿಂದ ಇದು​ವ​ರೆಗೆ ದೇಶದಲ್ಲಿ ಯಾವುದೇ ಸಾವು ಸಂಭ​ವಿ​ಸಿ​ರು​ವುದು ದೃಢ​ಪ​ಟ್ಟಿಲ್ಲ.

ಕೊರೋನಾಗೆ 1 ವಾರ ಅಘೋಷಿತ ಕರ್ನಾಟಕ ಬಂದ್ : ಏನೇನು ಇರಲ್ಲ..?

ಆದಾಗ್ಯೂ ನಾವು ಎಲ್ಲಾ ಮುಂಜಾ​ಗ್ರತಾ ಕ್ರಮ​ಗ​ಳನ್ನು ಕೈಗೊ​ಳ್ಳು​ತ್ತಿ​ದ್ದೇವೆ. ಪ್ರತ್ಯೇಕ ಆರೋಗ್ಯ ತಪಾ​ಸಣಾ ಕೇಂದ್ರ​ಗ​ಳನ್ನು ಮೀಸ​ಲಿ​ಡು​ವಂತೆ ಈಗಾ​ಗಲೇ ರಾಜ್ಯ ಮತ್ತು ಕೇಂದ್ರದ ಸುಪ​ರ್ದಿಗೆ ಒಳ​ಪಟ್ಟಆಸ್ಪ​ತ್ರೆ​ಗ​ಳಿಗೆ ಸೂಚಿ​ಸ​ಲಾ​ಗಿದೆ. ಸೋಂಕು ನಿಯಂತ್ರ​ಣಕ್ಕೆ ಬೇಕಾದ ಪ್ರತ್ಯೇಕ ಹಾಸಿ​ಗೆ​ಗಳು ಮತ್ತು ಸಲ​ಕ​ರ​ಣ​ಗೆ​ಗಳು ದೇಶಾ​ದ್ಯಂತ ಲಭ್ಯ​ವಿವೆ. ದೇಶಾ​ದ್ಯಂತ ವಿವಿಧ ಆಸ್ಪ​ತ್ರೆ​ಗ​ಳಲ್ಲಿ ಸುಮಾರು 17,000 ಪ್ರತ್ಯೇಕ ಹಾಸಿ​ಗೆ​ಗಳು ಇವೆ. ಅಲ್ಲದೆ ಸುಮಾರು 14,000 ಕ್ವಾರಂಟೈನ್‌ (ಪ್ರ​ತ್ಯೇಕವಾಗಿರಿಸುವುದು) ಹಾಸಿ​ಗೆ​ಗಳೂ ಲಭ್ಯ​ವಿವೆ. ಪ್ರಮುಖ ಖಾಸಗಿ ಆಸ್ಪ​ತ್ರೆ​ಗಳ ಮುಖ್ಯ​ಸ್ಥ​ರೊಂದಿಗೆ ಮಾತು​ಕತೆ ನಡೆ​ಸಿ​, ಪರಿ​ಸ್ಥಿ​ತಿಯ ನಿಯಂತ್ರ​ಣಕ್ಕೆ ಅಗತ್ಯ ಬೆಂಬಲ ನೀಡುವ ಭರ​ವಸೆ ನೀಡಿದ್ದೇನೆ.

50 ಕ್ಕೂ ಹೆಚ್ಚು ಲ್ಯಾಬೋ​ರೇ​ಟ​ರಿಗಳ​ಲ್ಲಿ ರಕ್ತ ಪರೀಕ್ಷೆ ಮಾಡ​ಲಾ​ಗು​ತ್ತಿದೆ. ಏರ್‌ಪೋರ್ಟ್‌ ಅಧಿ​ಕಾ​ರಿ​ಗಳು ಮತ್ತು ವಲಸೆ ಅಧಿ​ಕಾ​ರಿ​ಗ​ಳಿಗೆ ತರ​ಬೇತಿ ನೀಡ​ಲಾ​ಗು​ತ್ತಿದೆ. ರಾಜ್ಯ ಮತ್ತು ಜಿಲ್ಲಾ ಆರೋ​ಗ್ಯಾ​ಧಿ​ಕಾ​ರಿ​ಗ​ಳೊಂದಿಗೆ ವಿಡಿಯೋ ಕಾನ್ಫ​ರೆನ್ಸ್‌ ಮೂಲಕ ಸಂಪರ್ಕ ಸಾಧಿ​ಸ​ಲಾ​ಗು​ತ್ತಿದೆ.

ಸಾರ್ವ​ಜ​ನಿ​ಕ​ರಲ್ಲೂ ಅರಿವು ಮೂಡಿ​ಸುವ ದೃಷ್ಟಿ​ಯಿಂದ ಸಾಕಷ್ಟುಕ್ರಮ ಕೈಗೊ​ಳ್ಳು​ತ್ತಿ​ದ್ದೇವೆ. ಮೊಬೈಲ್‌ ಫೋನ್‌ಗಳಿಗೆ 117.2 ಕೋಟಿ ಸಂದೇಶ ಕಳು​ಹಿ​ಸಿ​ದ್ದೇವೆ, 156 ದಿನ​ಪ​ತ್ರಿ​ಕೆ​ಗ​ಳಿಗೆ ಜಾಹೀ​ರಾತು ನೀಡಿ​ದ್ದೇವೆ. ಕೊರೋನಾ ವೈರಸ್‌​ನಿಂದ ಪಾರಾ​ಗಲು ಏನು ಮಾಡ​ಬೇಕು, ಏನು ಮಾಡ​ಬಾ​ರದು ಎಂಬ ಬಗ್ಗೆ ಮೊಬೈಲ್‌ ಮೂಲಕವೂ ಜಾಗೃತಿ ಮೂಡಿ​ಸು​ತ್ತಿ​ದ್ದೇವೆ.

ಕೊ​ರೋನಾ ನಿಯಂತ್ರ​ಣಕ್ಕೆ ಜನ​ರು ಗುಂಪು​ಗೂ​ಡು​ವು​ದನ್ನು ನಿಯಂತ್ರಿ​ಸ​ಬೇ​ಕು. ​ಆ​ದರೆ ಸಾರ್ವ​ಜ​ನಿಕ ವಾಹ​ನ​ಗಳ ಬಳ​ಕೆ ಎಷ್ಟು ಸುರ​ಕ್ಷಿ​ತ?

ಹೌದು, ವೈರಸ್‌ ನಿಯಂತ್ರ​ಣಕ್ಕೆ ಹೆಚ್ಚೆಚ್ಚು ಜನರು ಒಟ್ಟಿಗೆ ಸೇರ​ದಂತೆ ಸಲಹೆ ನೀಡಿ​ದ್ದೇವೆ. ಈ ನಿಟ್ಟಿ​ನಲ್ಲಿ ಸಾರ್ವ​ಜ​ನಿಕ ವಾಹ​ನ​ಗಳ ಬಳಕೆ ಒಂದು ದೊಡ್ಡ ಸಮ​ಸ್ಯೆಯೇ. ಸಲ​ಹೆ, ​ಸೂ​ಚ​ನೆ​ಗ​ಳನ್ನು ಮೀರಿ ಸೋಂಕಿ​ತರು ಸಾರ್ವ​ಜ​ನಿಕ ಪ್ರದೇ​ಶ​ಗ​ಳಲ್ಲಿ ಓಡಾ​ಡುವು​ದ​ರಿಂದ ಈ ಸಮಸ್ಯೆ ಇನ್ನೂ ಹೆಚ್ಚಾ​ಗು​ತ್ತಿದೆ. ಹಾಗಾಗಿ ಸೋಂಕಿ​ನಿಂದ ಪಾರಾ​ಗ​ಬೇ​ಕೆಂದರೆ ಸಾರ್ವ​ಜ​ನಿಕ ಆರೋಗ್ಯ ಇಲಾಖೆ ಸೂಚಿ​ಸಿ​ರುವ ಕೆಲ ಮುಂಜಾ​ಗ್ರತಾ ಕ್ರಮ​ಗ​ಳ​ನ್ನು ಅನು​ಸ​ರಿ​ಸು​ವುದು ಒಳ್ಳೆಯದು.

ಕೈಗ​ಳನ್ನು ಶುಚಿ​ಯಾ​ಗಿ​ಟ್ಟು​ಕೊ​ಳ್ಳುವ ಮೂಲಕ, ಜನ​ರಿಂದ ಅಂತರ ಕಾಯ್ದು​ಕೊ​ಳ್ಳುವ ಮುಖಾಂತರ, ನೈರ್ಮಲ್ಯ ಕಾಪಾ​ಡಿ​ಕೊ​ಳ್ಳುವ ಮುಖಾಂತರ ಪಾರಾ​ಗ​ಬ​ಹುದು. ರೈಲು, ಮೆಟ್ರೋಗ​ಳನ್ನು ಆಗಾಗ ಸ್ವಚ್ಛ ಮಾಡು​ತ್ತಿ​ರು​ವಂತೆ ಇಲಾಖೆ ಅಧಿ​ಕಾ​ರಿ​ಗ​ಳಿಗೆ ಕಟ್ಟು​ನಿ​ಟ್ಟಾಗಿ ಸೂಚಿ​ಸ​ಲಾ​ಗಿದೆ.

ಅಂಬಾನಿಗೆ ಕೊರೋನಾ ಶಾಕ್; ಒಂದೇ ದಿನಕ್ಕೆ 24000 ಕೋಟಿ ರೂ ನಷ್ಟ!

ಮಕ್ಕಳು ಶಾಲೆಗೆ ಹೋಗು​ವುದು ಸುರ​ಕ್ಷಿ​ತ​ವೇ?

ನಮ್ಮ ಮಕ್ಕಳು ಆರೋ​ಗ್ಯ​ವಂತ​ರಾಗಿ, ಸುರ​ಕ್ಷಿ​ತ​ವಾ​ಗಿ​ರ​ಬೇ​ಕೆಂಬುದು ನಮ್ಮೆಲ್ಲ​ರ ಬಯಕೆ. ಅದ​ಕ್ಕಾಗಿ ಮುಂಜಾ​ಗ್ರತಾ ಕ್ರಮ​ಗ​ಳನ್ನು ಕೈಗೊ​ಳ್ಳ​ಲಾ​ಗಿದೆ. ಮಕ್ಕ​ಳಲ್ಲಿ ಜಾಗೃತಿ ಮೂಡಿ​ಸಲು, ಸೋಂಕು ತಡೆ​ಗ​ಟ್ಟಲು ಬೇಕಾದ ಕ್ರಮ ಕೈಗೊ​ಳ್ಳು​ವಂತೆ ಎಲ್ಲಾ ರಾಜ್ಯ​ಗ​ಳಿಗೆ ಸೂಚಿ​ಸ​ಲಾ​ಗಿ​ದೆ. ಮುನ್ನೆ​ಚ್ಚ​ರಿ​ಕೆ​ಯಾಗಿ ಕೆಲವು ರಾಜ್ಯ​ಗ​ಳಲ್ಲಿ ಶಾಲೆ​ಗ​ಳಿಗೆ ರಜೆ ಘೋಷಿ​ಸ​ಲಾ​ಗಿ​ದೆ.

ಭಾ​ರ​ತೀಯ ಔಷಧ ಸಂಶೋ​ಧನಾ ಮಂಡ​ಳಿ​ ಸೆಕೆಂಡ್‌ ಲೈನ್‌ ಎಚ್‌​ಐವಿ ಔಷಧವನ್ನು ಕೊರೋನಾ ವಿರು​ದ್ಧದ ಲಸಿ​ಕೆ​ಯಾಗಿ ಬಳ​ಸಲು ಅನು​ಮತಿ ಪಡೆ​ದಿದೆ. ಇದರಿಂದ ಉಪ​ಯೋ​ಗ ಆಗು​ತ್ತಿ​ದೆಯೇ? ನಮ್ಮಲ್ಲಿ ಅಗ​ತ್ಯಕ್ಕೆ ತಕ್ಕಷ್ಟುಮಾಸ್ಕ್‌ ಮತ್ತು ಆರೋಗ್ಯ ಸಲ​ಕ​ರ​ಣೆಗಳು ಲಭ್ಯ​ವಿ​ವೆ​ಯೇ?

ಹೌದು, ಕೊರೋನಾ ರೋಗಿ​ಗ​ಳಿಗೆ ಸೆಕೆಂಡ್‌ ಲೈನ್‌ ಎಚ್‌ಐವಿ ಔಷಧಿ ಬಳ​ಕೆಗೆ ಐಸಿ​ಎಂಆ​ರ್‌ ಅನು​ಮತಿ ಪಡೆ​ದಿದೆ. ಆದರೆ ಕೊರೋನಾ ಸೋಂಕಿ​ತ ರೋಗಿ​ಗಳ ತುರ್ತು ಚಿಕಿತ್ಸೆಗೆ ಮಾತ್ರ ಇದನ್ನು ಬಳ​ಸ​ಲಾ​ಗು​ತ್ತಿದೆ. ಈ ಕಾಂಬಿ​ನೇ​ಷನ್‌ ಥೆರ​ಪಿ​ಯನ್ನು ಇದು​ವ​ರೆಗೆ ಜೈಪು​ರ​ದಲ್ಲಿ ಇಬ್ಬರು ಇಟಾ​ಲಿ​ಯನ್‌ ಪ್ರಜೆ​ಗಳ ಮೇಲೆ ಮಾತ್ರ ಪ್ರಯೋಗ ಮಾಡ​ಲಾ​ಗಿ​ದೆ. ಹಾಗೆಯೇ ದೇಶ​ದಲ್ಲಿ ಅಗತ್ಯ​ವಿ​ರುವ ಮಾಸ್ಕ್‌​ಗಳು, ಆರೋಗ್ಯ ಸಲ​ಕ​ರ​ಣೆ​ಗ​ಳು ಲಭ್ಯ​ವಿವೆ, ಆ ಬಗ್ಗೆ ಆತಂಕ ಬೇಡ.

ಕೇಂದ್ರ ಸರ್ಕಾರ ಬಿಡು​ಗಡೆ ಮಾಡಿದ ಟ್ರಾವೆಲ್‌ ಅಡ್ವೈ​ಸ​ರಿ​ಯಲ್ಲಿ ಉಲ್ಲೇಖಿ​ಸ​ದ ದೇಶ​ಗ​ಳಿಗೆ ಪ್ರವಾಸ ಎಷ್ಟು ಸುರ​ಕ್ಷಿ​ತ?

ಸದ್ಯಕ್ಕೆ ನಮ್ಮ ಗಮನ ಕೊರೋನಾ ಹರ​ಡಿ​ರುವ 100ಕ್ಕೂ ಹೆಚ್ಚು ದೇಶ​ಗ​ಳೆ​ಡೆ​ಗಿದೆ. ಚೀನಾ, ಇರಾನ್‌, ರಿಪ​ಬ್ಲಿಕ್‌ ಆಫ್‌ ಕೊರಿಯಾ, ಇಟಲಿ ಮತ್ತು ಜಪಾ​ನ್‌​ನಿಂದ ದೂರ ಇರು​ವಂತೆ ಭಾರ​ತೀ​ಯ​ರಿಗೆ ಸಲಹೆ ನೀಡಿ​ದ್ದೇವೆ. ಹಾಗೆಯೇ 19 ದೇಶ​ಗ​ಳಿಗೆ ಅನ​ಗತ್ಯ ಪ್ರವಾಸ ಬೇಡ ಎಂದೂ ಹೇಳಿ​ದ್ದೇ​ವೆ. ಜೊತೆ​ಗೆ ವಿದೇ​ಶ​ಗ​ಳಿಗೆ ತೆರ​ಳು​ವಾಗ ಸರಳ ಆರೋಗ್ಯ ಸಲ​ಹೆ​ಗ​ಳನ್ನು ಅನು​ಸ​ರಿ​ಸು​ವಂತೆ ಹೇಳಿ​ದ್ದೇವೆ.

ಥೈಲ್ಯಾಂಡ್‌​ನಿಂದ ಆಗ​ಮಿ​ಸುವ ಪ್ರವಾ​ಸಿ​ಗ​ರನ್ನು ಸ್ಕ್ರೀನಿಂಗ್‌ಗೆ ಒಳ​ಪ​ಡಿ​ಸ​ಲಾ​ಗು​ತ್ತಿದೆ. ಆದಾಗ್ಯೂ ದೆಹ​ಲಿಯಲ್ಲಿ ಪತ್ತೆ​ಯಾದ ಮೂರನೇ ಪ್ರಕ​ರ​ಣ​ದಲ್ಲಿ ವ್ಯಕ್ತಿ ಏರ್‌ಪೋರ್ಟ್‌​ನಿಂದ ಪರೀಕ್ಷೆಗೆ ಒಳ​ಪ​ಡದೆ ತಪ್ಪಿ​ಸಿ​ಕೊಂಡಿದ್ದು ಹೇಗೆ? ಕೇರಳ ರೋಗಿ ಕೂಡ ತಪ್ಪಿ​ಸಿ​ಕೊಂಡಿದ್ದು ಹೇಗೆ?

ನನಗೆ ದೆಹಲಿ ಪ್ರಕ​ರ​ಣದ ಬಗ್ಗೆ ಗೊತ್ತಿದೆ. ಆತ ಫೆಬ್ರ​ವರಿ 23ರಂದು ಭಾರ​ತಕ್ಕೆ ಮರ​ಳಿದ್ದ. ಆದರೆ ಥೈಲ್ಯಾಂಡ್‌​ನ​ಲ್ಲಿ ಕೊರೋನಾ ಲಕ್ಷಣ ಕಾಣಿ​ಸಿ​ಕೊಂಡಿದ್ದು ಫೆ.25ರಿಂದ. ಆ ಸಮ​ಯ​ದಲ್ಲಿ ಆತ​ನಲ್ಲಿ ರೋಗದ ಲಕ್ಷ​ಣ​ವೂ ಕಂಡು​ಬಂದಿಲ್ಲ.

ಇದಲ್ಲದೆ, ಮೂರು ಕೇರಳ ರೋಗಿಗಳಿಗೆ ಸಂಬಂಧಪಟ್ಟಂತೆ, ಅವರು ಫೆಬ್ರವರಿ 29ರಂದು ಭಾರ​ತಕ್ಕೆ ಬಂದಿ​ದ್ದ​ರು. ಆನ್‌ಬೋರ್ಡ್‌ ಪ್ರಕಟಣೆಗಳು, ಸೂಚ​ನೆ​ಗ​ಳು ಮತ್ತು ಸಹಾಯ ಕೇಂದ್ರದ ಹೊರತಾಗಿಯೂ ಅವರು ತಮ್ಮ ಪ್ರಯಾಣದ ಇತಿಹಾಸವನ್ನು ಸ್ವಯಂಪ್ರೇರಣೆಯಿಂದ ವರದಿ ಮಾಡಲಿಲ್ಲ. ಸ್ಕ್ರೀನಿಂಗ್‌ ಸಮಯದಲ್ಲಿ ಅವರಲ್ಲಿ ರೋಗ ಲಕ್ಷ​ಣ​ ಇರ​ಲಿ​ಲ್ಲ.

ದೆಹ​ಲಿ ಗಲಭೆ ವಿಷ​ಯ​ವನ್ನು ಮುಚ್ಚಿ​ಹಾ​ಕಲು ದೇಶ​ದಲ್ಲಿ ಕೊರೋನಾ ಭೀತಿ ಹುಟ್ಟಿ​ಸ​ಲಾ​ಗು​ತ್ತಿದೆ ಎಂದು ಕೆಲ ಮುಖ್ಯ​ಮಂತ್ರಿ​ಗಳು ಆರೋ​ಪಿ​ಸು​ತ್ತಿ​ದಾರೆ. ನೀವೇನು ಹೇಳು​ತ್ತೀ​ರಿ?

ಇಂಥ ಸಂದ​ರ್ಭ​ದಲ್ಲಿ ರಾಜ​ಕೀ​ಯದ ಬಗ್ಗೆ ನಾನು ಮಾತಾ​ಡುವುದಿಲ್ಲ. ಒಬ್ಬ ಆರೋಗ್ಯ ಸಚಿ​ವ​ನಾಗಿ ಸದ್ಯ ನನ್ನ ಗಮನ ಏನಿ​ದ್ದರೂ ಸೋಂಕು ನಿಯಂತ್ರ​ಣಕ್ಕೆ ಸಾಧ್ಯ​ವಾ​ದಷ್ಟುಕ್ರಮ ಕೈಗೊ​ಳ್ಳು​ವುದು. ಈ ಸಂದ​ರ್ಭ​ದಲ್ಲಿ ಮಾಧ್ಯ​ಮಗಳು ನಮ್ಮೊಂದಿಗೆ ಕೈಜೋ​ಡಿಸಿ, ಸೋಂಕಿನ ಬಗ್ಗೆ ಜನ​ರಲ್ಲಿ ಜಾಗೃತಿ ಮೂಡಿ​ಸುವ ಕೆಲಸ ಮಾಡ​ಬೇಕು.

ಕೊರೋನಾ ಭೀತಿ: 'ವಾಟ್ಸಾಪ್‌ನಲ್ಲಿ ಬರುವ ಸುಳ್ಳು ಸುದ್ದಿಗಳಿಗೆ ಹೆದರಬೇಡಿ'

ಆಯು​ಷ್‌ ಸಚಿ​ವಾ​ಲಯ ಕೊರೋನಾ ವೈರಸ್‌ ನಿಯಂತ್ರ​ಣಕ್ಕೆ ಪರ್ಯಾಯ ಔಷ​ಧ​ಗ​ಳನ್ನು ಬಳ​ಸ​ಬ​ಹುದು ಎಂಬ ಅಡ್ವೈ​ಸ​ರಿ​ಯನ್ನು ಬಿಡು​ಗಡೆ ಮಾಡಿದೆ. ಯೋಗ ಮತ್ತು ಗೋಮೂತ್ರ ಕೊರೋ​ನಾವನ್ನು ಗುಣ​ಪ​ಡಿ​ಸ​ಬ​ಲ್ಲವು ಎಂಬ ಗ್ರಹಿಕೆ ಇದೆ. ಈ ಬಗ್ಗೆ ನಿಮ್ಮ ಅಭಿ​ಪ್ರಾಯ ಏನು?

ಆಯು​ರ್ವೇದ ಮತ್ತು ಯೋಗದ ಶಕ್ತಿಯ ಬಗ್ಗೆ ನನಗೆ ಪೂರ್ಣ ನಂಬಿಕೆ ಇದೆ. ಇವೆ​ರಡೂ ರೋಗ ನಿರೋ​ಧಕ ಶಕ್ತಿ​ಯನ್ನು ಹೆಚ್ಚಿ​ಸು​ತ್ತವೆ. ಆದಾಗ್ಯೂ ಆಯುಷ್‌ ಸಚಿ​ವಾ​ಲ​ಯ ತಾನು ಫೆ.4 ಮತ್ತು ಜನ​ವರಿ 29ರಂದು ಬಿಡು​ಗಡೆ ಮಾಡಿದ ಅಡ್ವೈ​ಸರಿ ಬಗ್ಗೆ ಸ್ಪಷ್ಟೀ​ಕ​ರಣ ನೀಡಿ, ಈ ಅಡ್ವೈ​ಸ​ರಿಯು ಮುನ್ನೆ​ಚ್ಚ​ರಿಕಾ ಕ್ರಮ ಮಾತ್ರ ಎಂದಿದೆ.

ವೈರಸ್‌ ನಿಯಂತ್ರ​ಣಕ್ಕೆ ಇನ್ನೂ ಎಷ್ಟು ಸಮಯ ಬೇಕು?

ಮುಂದಿನ ಒಂದು ವಾರ​ದ​ಲ್ಲಿ​ಯೇ ಕಡಿ​ಮೆ​ಯಾ​ಗ​ಲಿದೆ ಎಂದು ನನ​ಗ​ನಿ​ಸು​ತ್ತಿದೆ. ಆದಾಗ್ಯೂ ಇತರ ದೇಶ​ಗಳು ಪರಿ​ಸ್ಥಿ​ತಿಯನ್ನು ಹೇಗೆ ನಿಭಾ​ಯಿ​ಸು​ತ್ತವೆ, ಜನ​ರಲ್ಲಿ ಎಷ್ಟರ ಮಟ್ಟಿಗೆ ಅರಿವು ಮೂಡಿ​ದೆ ಎಂಬ ಅಂಶ​ಗಳೂ ಮುಖ್ಯ​ವಾ​ಗು​ತ್ತ​ವೆ.

ಚೀನಾ​ದ ವಸ್ತು​ಗಳ ಮೇಲಿನ ಆಮ​ದು ನಿರ್ಬಂಧ ಎಷ್ಟರ ಮಟ್ಟಿಗೆ ಔಷಧ ಲಭ್ಯತೆ ಮೇಲೆ ಪ್ರಭಾವ ಬೀರು​ತ್ತ​ದೆ. ನಮ್ಮಲ್ಲಿ ಎಷ್ಟುದಾಸ್ತಾನು ಇದೆ?

ಚೀನಾದ ವಸ್ತು​ಗಳ ಮೇಲೆ ಆಮದು ನಿರ್ಬಂಧ ಹೇರಿದ ಬಳಿಕ ಔಷ​ಧ​ಗಳ ಕೊರತೆ ಉಂಟಾ​ಗ​ದಂತೆ ಔಷಧ ಇಲಾ​ಖೆಯು ಈ ಬಗ್ಗೆ ಸೂಕ್ಷ್ಮ​ವಾಗಿ ಅವ​ಲೋ​ಕನ ಮಾಡು​ತ್ತಿದೆ. ನಮ್ಮಲ್ಲಿ 5-9 ತಿಂಗ​ಳಿಗೆ ಬೇಕಾ​ಗುಷ್ಟುಔಷಧ ದಾಸ್ತಾನು ಇದೆ. ಹಾಗಾಗಿ ನಿರ್ಬಂಧವು ಔಷಧ​ಗಳ ಲಭ್ಯತೆ ಮೇಲೆ ಯಾವುದೇ ಪರಿ​ಣಾಮ ಬೀರುವುದಿಲ್ಲ.

-  ಸಂದ​ರ್ಶನ

ಡಾ. ಹ​ರ್ಷ​ವ​ರ್ಧ​ನ್‌

ಕೇಂದ್ರ ಆರೋಗ್ಯ ಸಚಿ​ವ

Follow Us:
Download App:
  • android
  • ios