ನವದೆಹಲಿ[ಫೆ.04]: ನಿರ್ಭಯಾ ಅಪರಾಧಿಗಳು ಕಾನೂನನ್ನು ಪದೇ ಪದೇ ದುರುಪಯೋಗಪಡಿಕೊಳ್ಳುತ್ತಿದ್ದು, ಗಲ್ಲಿನಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ಅತ್ತ ನಿರ್ಭಯಾ ತಾಯಿ ತನ್ನ ಮಗಳಿಗೆ ನ್ಯಾಯ ಕೊಡಿಸಲು ಹರ ಸಾಹಸ ಪಡುತ್ತಿದ್ದಾರೆ. ಡೆತ್ ವಾರೆಂಟ್ ಜಾರಿಯಾಗುತ್ತಿದ್ದಂತೆಯೇ ತಮ್ಮ ದಾಳ ಎಸೆಯುತ್ತಿರುವ ಅಪರಾಧಿಗಳು ಒಬ್ಬರಾದ ಬಳಿಕ ಮತ್ತೊಬ್ಬರಂತೆ ಸರದಿ ಪ್ರಕಾರ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆದರೀಗ ಈ ದೋಷಿಗಳಿಗೆ ಗಲ್ಲು ಶಿಕ್ಷೆ ಸನ್ನಿಹಿತವಾಗುತ್ತಿದ್ದು, ಇವರ ಬಳಿ ಇರುವ ಕಾನೂನಿನ ಹಾದಿಗಳು ಒಂದಾದ ಬಳಿಕ ಮತ್ತೊಂದರಂತೆ ಮುಚ್ಚಿಕೊಳ್ಳುತ್ತಿವೆ. ಸದ್ಯ ಪರಾಧಿಯಲ್ಲೊಬ್ಬನಾದ ಪವನ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ವಜಾಗೊಳಿಸಿದ್ದಾರೆ. 

ಹೌದು ನಿರ್ಭಯಾ ರೇಪಿಸ್ಟ್ ಪವನ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ವಜಾಗೊಂಡಿದ್ದು, ಈ ಮೂಲಕ ಅಪರಾಧಿಗಳಿಗೆ ಡೆತ್ ವಾರೆಂಟ್ ಜಾರಿಗೊಳ್ಳುವುದು ಇನ್ನಷ್ಟು ಸಲೀಸಾಗಿದೆ. ಸುಪ್ರೀಂ ಮಾರ್ಗಸೂಚಿ ಅನ್ವಯ ಕ್ಷಮಾದಾನ ಅರ್ಜಿ ವಜಾಗೊಂಡ ಬಳಿಕ ಪವನ್ ಗೆ 14 ದಿನಗಳ ನೋಟಿಸ್ ಸಿಗಲಿದೆ. ಹೀಗಾಗಿ ದೋಷಿಗಳಿಗೆ ಇನ್ನು ಕೇವಲ 14 ದಿನಗಳೊಳಗೆ ಗಲ್ಲಿಗೇರಿಸುವುದು ಬಹುತೇಕ ಖಚಿತವಾಗಿದೆ. 

ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಪವನ್ ಕ್ಷಮಾದಾನ ರ್ಜಿ ವಜಾಗೊಳ್ಳುತ್ತಿದ್ದಂತೆ ನಿರ್ಭಯಾ ಪರ ವಕೀಲರು ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ದೋಷಿಗಳಿಗೆ ಹೊಸ ಡೆತ್ ವಾರಂಟ್ ಜಾರಿಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಹೀಗಿದ್ದರೂ ಪವನ್ ಉಳಿದ ಅಪರಾಧಿಗಳಂತೆ ಕ್ಷಮಾದಾನ ಅರ್ಜಿ ವಜಾಗೊಳಿಸಿದ ರಾಷ್ಟ್ರಪತಿ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ ಇದೆ. ದೇನಿದ್ದರೂ ಅಂತಿಮವಾಗಿ ಪವನ್ ಬಳಿ ಇದ್ದ ಕಾನೂನಾತ್ಮಕ ಹಾದಿಯೂ ಮುಕ್ತಾಯಗೊಂಡಿದೆ. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"