ನವದೆಹಲಿ[ಡಿ.09]: 2012ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂ.ಬ ಕೂಗು ಇಡೀ ದೇಶದಲ್ಲೇ ಪ್ರತಿಧ್ವನಿಸಿತ್ತು. ಹೀಗಿದ್ದರೂ ನ್ಯಾಯಾಲಯದಲ್ಲಿ ಮೇಲ್ಮನವಿ, ವಿಚಾರಣೆ ಎಂದು ಬರೋಬ್ಬರಿ 7 ವರ್ಷಗಳೇ ಸರಿದಿದಿದ್ದು, ಅಪರಾಧಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ನಾನಾ ಯತ್ನ ನಡೆಸಿದ್ದರು. ಆದರೀಗ ಕೊನೆಗೂ ನಿರ್ಭಯಾ ಅತ್ಯಾಚಾರಿಗಳು ಗಲ್ಲಿಗೇರುವ ದಿನಾಂಕ ಬಹುತೇಕ ಫಿಕ್ಸ್ ಆಗಿದ್ದು, ದಿನಗಣನೆ ಆರಂಭವಾಗಿದೆ.

ನಿರ್ಭಯಾ ದೋಷಿಗಳಿಗೆ ಗಲ್ಲು ಶಿಕ್ಷೆಗೆ ಕ್ಷಣಗಣನೆ!

ಹೌದು ಇಡೀ ದೇಶವೇ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಕ್ರೌರ್ಯ ಮೆರೆದ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನಾಲ್ವರು ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು 2017ರಲ್ಲಿ ತೀರ್ಪು ಪ್ರಕಟಿಸಿತ್ತು. ಹೀಗಿದ್ದರೂ ಅಪರಾಧಿಗಳು ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆಸಿದ್ದರು. ರಾಜದಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದು, ಇದು ನಿರಾಕರಿಸಿದಾಗ ಸಂಸತ್ತಿಗೂ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಘೋರ ಅಪರಾಧವೆಸಗಿದ್ದ ಈ ಕಾಮುಕರಿಗೆ ಸಂಸತ್ತು ಕ್ಷಮೆ ನಿರಾಕರಿಸಿತ್ತು. ಹೀಗಿರುವಾಗ ಕೊನೆಯ ಪ್ರಯತ್ನವೆಂಬಂತೆ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದು, ಅಲ್ಲೂ ಇದು ತಿರಸ್ಕೃತಗೊಂಡಿದೆ.

ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ನಿರ್ಭಯಾ ದೋಷಿ ಹೊಸ ತಂತ್ರ?

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ನಾಲ್ವರು ದೋಷಿಗಳಿಗೆ ಡಿಸೆಂಬರ್ 16ರಂದು ಗಲ್ಲಿಗೇರಿಸುವುದು ಬಹುತೇಕ ಖಚಿತ. ಇದಕ್ಕಾಗಿ ತಿಹಾರ್ ಜೈಲಿನಲ್ಲಿ ಎಲ್ಲಾ ತಯಾರಿ ಆರಂಭಗೊಂಡಿದೆ. ಡಿಸೆಂಬರ್ 16ಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಗಲ್ಲಿಗೇರಿಸುವ ಸ್ಥಳದ ಸ್ವಚ್ಛತೆ ಹಾಗೂ ಗಲ್ಲಿಗೇರಿಸುವ ವ್ಯಕ್ತಿಗಾಗಿ ಹುಡುಕಾಟ ಹೀಗೆ ಎಲ್ಲವೂ ಜೈಲು ಸಿಬ್ಬಂದಿ ಆರಂಭಿಸಿದ್ದಾರೆ. ಹೈದರಾಬಾದ್ ಎನ್ ಕೌಂಟರ್ ಬಳಿಕ ನಿರ್ಭಯಾ ಅತ್ಯಾಚಾರಿಗಳನ್ನು ಶೀಘ್ರವೇ ಗಲ್ಲಿಗೇರಿಸಬೇಕೆಂಬ ಕೂಗು ಮತ್ತೆ ಜೋರಾಗಿತ್ತು. ನಿರ್ಭಯಾ ಆರು ಮಂದಿ ದುರುಳರು 2012ರ ಡಿಸೆಂಬರ್ 16ರಂದೇ ಸಾಮೂಹಿಕ ಅತ್ಯಾಚಾರ ನಡೆಸಿದ್ದರೆಂಬುವುದು ಉಲ್ಲೇಖನೀಯ.

ಓರ್ವ ಅಪರಾಧಿ ಸಾವು

ನಿರ್ಭಯಾ ಸಾಮೂಹಿಕ ಅತ್ಯಾಚಾರದ 6 ಆರೋಪಿಗಳಲ್ಲಿ ಓರ್ವ 2013ರಲ್ಲೇ ತಿಹಾರ್ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ದೋಷಿ ಈ ಕೃತ್ಯ ನಡೆದ ವೇಳೆ ಅಪ್ತಾಪ್ತನಾಗಿದ್ದರಿಂದ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದಾನೆ. 

ನಿರ್ಭಯಾ ದೋಷಿಗಳಿಗೆ ಶಿಕ್ಷೆ ಸನ್ನಿಹಿತ: ತಿಹಾರ್‌ನಲ್ಲಿ ಗಲ್ಲು ಹಾಕುವವರೇ ಇಲ್ಲ!

ಗಲ್ಲಿಗೇರಿಸಲು ಸಿಬ್ಬಂದಿ ಇಲ್ಲ

ತಿಹಾರ್ ಜೈಲಿನಲ್ಲಿರುವ ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ದಿನಗಣನೆ ಆರಂಭವಾಗಿದೆಯಾದರೂ, ಗಲ್ಲು ಶಿಕ್ಷೆ ಜಾರಿಗೊಳಿಸುವ ವ್ಯಕ್ತಿಗಳೇ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಿರುವಾಗ ತಿಹಾರ್ ಜೈಲಿನ ಸಿಬ್ಬಂದಿ ಸೂಕ್ತ ವ್ಯಕ್ತಿಯ ಹುಡುಕಾಟ ಆರಂಭಿಸಿದ್ದಾರೆ. ಇನ್ನು ಮೀರತ್ ಜೈಲಿನಲ್ಲಿ ಪರಾಧಿಗಳನ್ನು ಗಲ್ಲಿಗೇರಿಸುವ ಪವನ್ ರನ್ನೇ ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲು ಕರೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈಗಾಗಲೇ ಪವನ್ ತಾನು ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.