ನವದೆಹಲಿ[ಮಾ.15]: ತನ್ನ ಕ್ಯುರೇಟಿವ್‌ ಹಾಗೂ ಕ್ಷಮಾಪಣಾ ಅರ್ಜಿಗಳ ಮರು ಸಲ್ಲಿಕೆಗೆ ಅವಕಾಶ ಕಲ್ಪಿಸಬೇಕೆಂದು ಕೋರಿ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿ ಮುಕೇಶ್‌ ಸಿಂಗ್‌ ಸಲ್ಲಿಸಿದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ.

ಮರಣದಂಡನೆ ಶಿಕ್ಷೆಗೆ ಗುರಿಯಾದ ಒಂದು ವಾರದಲ್ಲಿ ಕ್ಯುರೇಟಿವ್‌ ಅರ್ಜಿ ಸಲ್ಲಿಸಬೇಕು ಎಂದು ತನಗೆ ಈ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಸ್ಥಿಕೆದಾರೆ(ಅಮಿಕಸ್‌ ಕ್ಯೂರಿ) ವಕೀಲೆ ಬೃಂದಾ ಗ್ರೋವರ್‌ ತಪ್ಪು ಮಾಹಿತಿ ನೀಡಿದ್ದರು ಎಂದು ಮುಕೇಶ್‌ ದೂರಿದ್ದಾನೆ. ಅಲ್ಲದೆ, ಯಾವುದೇ ಒಂದು ಮರು ಪರಿಶೀಲನಾ ಅರ್ಜಿ ತಿರಸ್ಕೃತವಾದ 3 ವರ್ಷಗಳವರೆಗೂ ಕ್ಯುರೇಟಿವ್‌ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.

ಹೀಗಾಗಿ, ಕ್ಯುರೇಟಿವ್‌ ಹಾಗೂ ಕ್ಷಮಾದಾನ ಅರ್ಜಿ ಸಲ್ಲಿಕೆಗೆ 2021ರ ಜುಲೈವರೆಗೂ ಅವಕಾಶ ಕಲ್ಪಿಸಬೇಕು ಎಂದು ತನ್ನ ವಕೀಲರ ಮೂಲಕ ಮುಕೇಶ್‌ ಕೋರಿದ್ದಾನೆ.