Asianet Suvarna News Asianet Suvarna News

ವೈದ್ಯೆಯ ರೇಪ್ ಆಂಡ್ ಮರ್ಡರ್ ಕೇಸ್; ಮಮತಾ ಬ್ಯಾನರ್ಜಿ ರಾಜೀನಾಮೆ ಕೊಟ್ರೆ ಮುಂದಿನ ಸಿಎಂ ಯಾರು?

ಆರ್ ಜಿ ಕರ್ ಆಸ್ಪತ್ರೆ ತರಬೇತಿ ವೈದ್ಯೆಯ ಹತ್ಯೆ ಸಂಬಂಧ  ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಒಂದು ವೇಳೆ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಿದ್ರೆ ಮುಂದಿನ ಸಿಎಂ ಯಾರು ಎಂಬುದರ ಬಗ್ಗೆ ಚರ್ಚೆಗಳು ಶುರುವಾಗಿವೆ.

Next West Bengal CM after Mamata Banerjee Jitu Kamal sparks debate mrq
Author
First Published Aug 21, 2024, 12:01 PM IST | Last Updated Aug 21, 2024, 1:33 PM IST

ಕೋಲ್ಕತ್ತಾ: ಆರ್‌ಜಿ ಕರ್ ಆಸ್ಪತ್ರೆ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಸಂಬಂಧ ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಮತ್ತೊಂದೆಡೆ ದೇಶದಾದ್ಯಂತ ಹತ್ಯೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಮಮತಾ ಬ್ಯಾನರ್ಜಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ ಮುಂದಿನ ಸಿಎಂ ಯಾರಾಗ್ತಾರೆ ಅಥವಾ ಯಾರು ಆಗಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಟ ಜೀತು ಕಮಲ್, ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಟ ಜೀತು ಕಮಲ್ ಪೋಸ್ಟ್ ಪಶ್ಚಿಮ ಬಂಗಾಳದ ರಾಜಕಾರಣ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹಿಂದೆ ಜೀತು ಕಮಲ್,  ಆರ್ ಜಿ ಕರ್ ವಿವಾದದ ಬಗ್ಗೆಯೂ ಧ್ವನಿ ಎತ್ತಿದ್ದರು. 

ಜೀತು ಕಮಲ್ ಎಫ್‌ಬಿ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮಮತಾ ಬ್ಯಾನರ್ಜಿ ಮಾಡುತ್ತಿರೋದು ತಪ್ಪಾ? ಹಾಗಾದ್ರೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕಾ? ಆದರೆ ಅವರನ್ನು ಆಯ್ಕೆ ಮಾಡಿದ್ದು ಜನರೇ ಅಲ್ಲವೇ ಎಂದು ಕೇಳಿದ್ದಾರೆ. ಮೊದಲು ನಾವು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂಬ ಚರ್ಚೆಗಳು ಸಹ ನಡೆದಿವೆ. ಕಮೆಂಟ್‌ಗಳಲ್ಲಿಯೇ ಜನರು ಪರ-ವಿರೋಧದ ಬಗ್ಗೆ ಚರ್ಚೆಗಳು ನಡೆದಿವೆ. 

 

ಹಾಗಾದ್ರೆ ಜೀತು ಕಮಲ್ ಮಾಡಿದ ಪೋಸ್ಟ್ ಏನು?

ಆಗಸ್ಟ್ 18ರಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ, ನಾಳೆಯೇ ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು ಎಂದು ಭಾವಿಸಣ. ಮುಂದಿನ ಮುಖ್ಯಮಂತ್ರಿ ಯಾರು? ನೀವು ಯಾರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸುತ್ತೀರಿ? ಎಂದು ಬರೆದುಕೊಂಡಿದ್ದಾರೆ. 

ಹುಡುಗಿಯರು ಲೈಂಗಿಕ ಕಾಮನೆ ನಿಯಂತ್ರಿಸಿಕೊಳ್ಳಬೇಕು ಎಂಬ ಆದೇಶ ರದ್ದು: ಸುಪ್ರೀಂ ಕೋರ್ಟ್‌

ನೆಟ್ಟಿಗರಿಂದ ಬಂದ ಉತ್ತರವೇನು? 

ಜೀತು ಕಮಲ್ ಪೋಸ್ಟ್‌ಗೆ ಹಲವು ಬಳೆಕೆದಾರರು ಸುವೇಂದು ಅಧಿಕಾರಿಯವರ ಹೆಸರನ್ನು ಸೂಚಿಸಿದ್ದಾರೆ. ಅಚ್ಚರಿ ಎಂಬಂತೆ ಕೆಲ ಬಳಕೆದಾರರು ಸಿಪಿಎಂ ನಾಯಕಿ ಮೀನಾಕ್ಷಿ ಮುಖರ್ಜಿ, ದೀಸ್ಪಿತಾ ದರ್ ಹೆಸರನ್ನು ಕಮೆಂಟ್ ಮಾಡಿದ್ದಾರೆ. ಅರಿಜಿತ್ ಸಿಂಗ್ ಮತ್ತು ಶ್ರೀಜತ್ ನಾಯಕರ ಹೆಸರುಗಳು ಸಿಎಂ ಸ್ಥಾನದ ರೇಸ್‌ನಲ್ಲಿವೆ. ಮುಂದಿನ ಮುಖ್ಯಮಂತ್ರಿ ಯಾರೆಂದು ತೃಣಮೂಲ ಶಾಸಕರು ನಿರ್ಧರಿಸಬೇಕು. ಬಹುಮತ ಇರೋ ಕಾರಣ ಟಿಎಂಸಿಯೇ ಅಧಿಕಾರದಲ್ಲಿರುತ್ತದೆ ಎಂದಿದ್ದಾರೆ. ಕೆಲ ನೆಟ್ಟಿಗರು  ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯಿಸಿದ್ದಾರೆ. ಒಂದಿಷ್ಟು ಮಂದಿ ಜೀತು ಕಮಲ್ ಅವರಿಗೆ ನಿಮ್ಮ ಪ್ರಕಾರ, ಯಾರು ಮುಖ್ಯಮಂತ್ರಿ ಯಾರಾಗಬೇಕು ಎಂದು ಗೂಗ್ಲಿ ಎಸೆದಿದ್ದಾರೆ. ಆದರೆ ಜೀತು ಕಮಲ್ ಇದ್ಯಾವುದಕ್ಕೂ ಉತ್ತರ ನೀಡಿಲ್ಲ.

ಈ ಹಿಂದೆಯೂ ಆರ್‌ಜಿ ಕರ್ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದರು. ಆರ್‌ಜಿ ಕರ್ ಮಾಡಿ ವೈದ್ಯರನ್ನು ಕೊಂದಿದ್ದನ್ನು ಅವರು ತೀವ್ರವಾಗಿ ಖಂಡಿಸಿದ್ದರು. ಮಹಿಳೆಯರಿಗೆ ರಾತ್ರಿ ಹೊತ್ತು ಕೆಲಸ ಮಾಡುವ ಕಾರ್ಯಕ್ರಮದ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದರು.  

ವೈದ್ಯರ ಸುರಕ್ಷತೆಗೆ ಸುಪ್ರೀಂ ಕೋರ್ಟ್ ಕಾರ್ಯಪಡೆ: ಟಾಸ್ಕ್‌ಫೋರ್ಸ್‌ನಲ್ಲಿ ಇಬ್ಬರು ಕನ್ನಡಿಗರು

Latest Videos
Follow Us:
Download App:
  • android
  • ios