ತಲೆಗೆ ಗುಂಡಿಕ್ಕಿ ಅಮೆಜಾನ್ ಮ್ಯಾನೇಜರ್ ಹರ್‌ಪ್ರೀತ್ ಗಿಲ್ ಕೊಲೆ
ಆನ್‌ಲೈನ್ ಮಾರ್ಕೆಟಿಂಗ್ ಸಂಸ್ಥೆ ಅಮೆಜಾನ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆನ್‌ಲೈನ್ ಮಾರ್ಕೆಟಿಂಗ್ ಸಂಸ್ಥೆ ಅಮೆಜಾನ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 36 ವರ್ಷದ ಹರ್‌ಪ್ರೀತ್ ಗಿಲ್ ಸಾವಿಗೀಡಾದ ಯುವಕ ಬೈಕ್‌ನಲ್ಲಿ ಬಂದ ಐವರು ದುಷ್ಕರ್ಮಿಗಳು ಈ ಕೃತ್ಯವೆಸಗಿ ಪರಾರಿಯಾಗಿದ್ದಾರೆ. ದೆಹಲಿಯ ಭಜನ್‌ಪುರ ಪ್ರದೇಶದ ಸುಭಾಷ್ ವಿಹಾರದ ಬಳಿ ತನ್ನ ಸಂಬಂಧಿ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಐವರು ದುಷ್ಕರ್ಮಿಗಳು ಹರ್‌ಪ್ರೀತ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿಯಿಂದಾಗಿ ಒಂದು ಬುಲೆಟ್ ಹರ್‌ಪ್ರೀತ್ (Harpreet) ತಲೆಗೆ ತಾಗಿದ್ದು, ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅವರ ಜೊತೆ ಇದ್ದ ಸಂಬಂಧಿಗೂ ಗುಂಡು ತಗುಲಿದ್ದು ಬಲಕಿವಿಗೆ ಗಾಯವಾಗಿದೆ. ಅಮೆಜಾನ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ ಸಂಬಂಧಿ ಗೋವಿಂದ್ ಸಿಂಗ್ ಭಜನ್‌ಪುರ ನಿವಾಸಿಯಾಗಿದ್ದು, ಆ ಪ್ರದೇಶದಲ್ಲಿ ಹಂಗ್ರಿ ಮೊಮೊಸ್ ಎಂಬ ಉಪಹಾರ ಗ್ರಹವನ್ನು ಇಟ್ಟುಕೊಂಡಿದ್ದರು. ಪ್ರಸ್ತುತ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಆರೋಪಿಗಳೆಲ್ಲಾ ನಾಪತ್ತೆಯಾಗಿದ್ದು, ಅವರಿಗಾಗಿ ಸಿಸಿಟಿವಿಗಳ ತಪಾಸಣೆ ಮಾಡಲಾಗಿದ್ದು, ಶೋಧ ನಡೆಯುತ್ತಿದೆ.
ಪ್ರಿಂಟರ್ ಬುಕ್ ಮಾಡಿದ ವ್ಯಕ್ತಿಗೆ ಸ್ಪೀಕರ್ ಡೆಲಿವರಿ: ಅಮೆಜಾನ್‌ಗೆ 30,000 ದಂಡ..!
ಹರ್‌ಪ್ರೀತ್ ಅಂಕಲ್ ಅಕ್ಷಯ್ ಎಂಬುವವರು ಘಟನೆ ಬಗ್ಗೆ ಮಾತನಾಡಿದ್ದು, ಹರ್‌ಪ್ರೀತ್ ತಲೆಗೆ ಗುಂಡಿಕ್ಕಿದ್ದಾರೆ. ಯಾಕೆ ಈ ಘಟನೆ ನಡೆದಿದೆ ಎಂಬುದು ನಮಗೆ ಗೊತ್ತಿಲ್ಲ, ಆತನಿಗೆ ಯಾರ ಮೇಲೂ ದ್ವೇಷವಿರಲಿಲ್ಲ, ನಾನು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಶಾನ್ಯ ವಿಭಾಗದ ಡಿಸಿಪಿ ಜಾಯ್ ಎನ್ ಟಿರ್ಕೆ (Joy N Tirkey) ಮಾತನಾಡಿದ್ದು, ಪ್ರಾಥಮಿಕ ತನಿಖೆಯಿಂದ ತಿಳಿದು ಬಂದ ಮಾಹಿತಿಯಂತೆ ಬೈಕ್‌ನಲ್ಲಿ ಹರಿಪ್ರೀತ್ ಹಾಗೂ ಗೋವಿಂದ್ ಹೋಗುತ್ತಿದ್ದಾಗ ಐವರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮಾತಿನ ಚಕಮಕಿ ನಂತರ ಗುಂಡಿನ ದಾಳಿ ನಡೆದಿದೆ. ಹರ್‌ಪ್ರೀತ್ ತಲೆಗೆ ಗುಂಡು ಬಿದ್ದಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಅವರ ಸಂಬಂಧಿ ಗೋವಿಂದ್ ಅವರಿಗೂ ಬಲಕಿವಿ ಬಳಿ ಗುಂಡು ತಗುಲಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಸ್ಥಿರವಾಗಿದೆ. ನಾವು ಕೆಲವು ಶಂಕಿತರ ಬಂಧನಕ್ಕೆ ಬಲೆ ಬೀಸಿದ್ದೇವೆ. ಐದರಿಂದ ಆರು ಜನರಿರುವ ಮಾಯಾ ಗ್ಯಾಂಗ್ ಬಗ್ಗೆ ಅನುಮಾನವಿದೆ ಎಂದು ಅವರು ಹೇಳಿದರು.
Make Money : ಆರ್ಡರ್ ಹಾಕೋದು ಮಾತ್ರವಲ್ಲ ಹಣ ಸಂಪಾದನೆಗೂ ಅಮೆಜಾನ್ ಬಳಸಿ