ಮುಂಬೈ(ಡಿ.18): ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರೂರ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಅವರಿಗಿಂತ ಕ್ರೂರಿಯಾಗಿ ವರ್ತಿಸುತ್ತಿದ್ದಾರೆ ಎಂದು ಎನ್‌ಸಿಪಿ ನಾಯಕ ನವಾಬ್ ಮಲ್ಲಿಕ್ ಗುಡುಗಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ಅಮಿತ್ ಶಾ ದೇಶದ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ.

ಪೌರತ್ವ ಕಾಯ್ದೆಯಲ್ಲಿ ಬದಲಾವಣೆ?: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸುಳಿವು!

ಅಮಿತ್ ಶಾ ಬ್ರಿಟಿಷ್ ಆಡಳಿತಾವಧಿಯಲ್ಲಿ ಅಮೃತ್'ಸರ್‌ನ ಜಲಿಯನ್'ವಾಲಾ ಬಾಗ್‌ನಲ್ಲಿ ಸಿಖ್ಖರ ನರಮೇಧ ನಡೆಸಿದ ಜನರಲ್ ಡಯರ್ ಅವರಂತೆಯೇ ಕ್ರೂರ ನಾಯಕ ಎಂದು ನವಾಬ್ ಮಲ್ಲಿಕ್ ಹರಿಹಾಯ್ದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಪೊಲೀಸರು ಹಿಂಸೆಯ ಮೂಲಕ ಬಗ್ಗುಬಡಿಯುತ್ತಿದ್ದಾರೆ. ಇದಕ್ಕೆ ಜನರಲ್ ಡಯರ್ ಅವರಂತೆಯೇ ವರ್ತಿಸುತ್ತಿರುವ ಅಮಿತ್ ಶಾ ಕಾರಣ ಎಂದು ನವಾಬ್ ಮಲ್ಲಿಕ್ ಹೇಳಿದ್ದಾರೆ.

ಪೌರತ್ವ ಕಾಯ್ದೆ ಕಿಡಿ: ಶಿಲ್ಲಾಂಗ್ ಭೇಟಿ ರದ್ದುಗೊಳಿಸಿದ ಅಮಿತ್ ಶಾ!

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೂಡ ಅಮಿತ್ ಶಾ ಅವರನ್ನು ಜನರಲ್ ಡಯರ್ ಅವರಿಗೆ ಹೋಲಿಸಿದ್ದು, ನವಾಬ್ ಮಲ್ಲಿಕ್ ಉದ್ಧವ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.